ETV Bharat / bharat

ವಿಶೇಷ ಲೇಖನ: ವಿಫಲವಾಗುತ್ತಿರುವ ಬೆಳೆ ವಿಮೆ ಯೋಜನೆ; ರೈತನಿಗೆ ಎಲ್ಲಿದೆ ಭದ್ರತೆ? - Farmer

ಕಳೆದ ವರ್ಷದವರೆಗೂ ಬ್ಯಾಂಕುಗಳು ತಾವು ವಿತರಿಸುತ್ತಿದ್ದ ಬೆಳೆ ಸಾಲದಿಂದ ಪ್ರೀಮಿಯಂಗಳನ್ನು ಏಕರೂಪವಾಗಿ ಕಡಿತಗೊಳಿಸುತ್ತಿದ್ದವು. ನಿಯಮಗಳ ಸಡಿಲಿಕೆ ಮತ್ತು ರೈತರಿಗೆ ನೀಡಲಾಗಿರುವ ಆಯ್ಕೆಯಿಂದಾಗಿ, ಫಸಲ್ ಬಿಮಾ ಯೋಜನೆಯಲ್ಲಿ ಭಾಗವಹಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ವೇಳೆ ಸಂಪೂರ್ಣವಾಗಿ ಎಲ್ಲೆಡೆ ಬೆಳೆ ವೈಫಲ್ಯ ಉಂಟಾದರೆ ಅಂತಹ ಸಂದರ್ಭದಲ್ಲಿ, ರೈತರಿಗೆ ಭದ್ರತೆ ಎಲ್ಲಿದೆ? ಸುಮಾರು ನಾಲ್ಕು ದಶಕಗಳಿಂದ ಬೆಳೆ ವಿಮೆಯನ್ನು ಅಪಹಾಸ್ಯ ಮಾಡುವ ಅಂಶಗಳು ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ.

Farmer
ರೈತ
author img

By

Published : Jun 30, 2020, 2:51 PM IST

ಮಳೆಗಾಲ ಆರಂಭವಾಗಿ ಬಿತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ರೈತರನ್ನು ಒಂದು ಅನಿಶ್ಚಿತತೆ ಕಾಡುತ್ತದೆ. ಅದು ತಾವು ಪಟ್ಟ ಪರಿಶ್ರಮ ಫಲ ನೀಡುತ್ತದೆಯೇ ಅಥವಾ ಎಲ್ಲ ಮಣ್ಣು ಪಾಲಾಗುತ್ತದೆಯೇ ಎಂಬುದು. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಪ್ರತಿ ವರ್ಷವೂ ಇದೇ ಕಥೆ ಪುನರಾವರ್ತನೆ ಆಗುತ್ತದೆ. ಈ ಅಸಂಘಟಿತ ವಲಯ ಈಗಾಗಲೇ ಎದುರಿಸುತ್ತಿರುವ ಅನೇಕ ಅಗ್ನಿಪರೀಕ್ಷೆಗಳ ನಡುವೆ ವಿಮಾ ಭದ್ರತೆ ಹೊಂದಿಲ್ಲ. ಇದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಬಿಕ್ಕಟ್ಟಿನ ಸಮಯದಲ್ಲಿ ರೈತರಿಗೆ ಸಾಕಷ್ಟು ಭದ್ರತೆ ಒದಗಿಸುವುದು ಅಗತ್ಯ ಎಂದು 1979 ರಲ್ಲಿ ಪ್ರೊಫೆಸರ್ ದಾಂಡೇಕರ್ ಅವರು ಶಿಫಾರಸು ಮಾಡಿದ್ದರು. ಅಲ್ಲಿಂದ ಬೆಳೆ ವಿಮಾ ಯೋಜನೆ ಅನೇಕ ಬದಲಾವಣೆಗಳನ್ನು ಕಂಡಿದೆ.

ಬೆಳೆ ಸುರಕ್ಷತೆಯ ಪರಿಕಲ್ಪನೆಯಾಗಿ ನಾಲ್ಕು ವರ್ಷಗಳ ಹಿಂದೆಯೇ ಘೋಷಣೆಯಾದ 'ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ' ಹಲವು ತಿರುವುಗಳನ್ನು ಕಂಡಿತು. ಆದರೆ ಬೆಳೆಗಳಿಗೆ ಸಮಗ್ರ ವಿಮೆ ಎಂಬುದು ಗಗನ ಕುಸುಮವಾಗಿ ಕಾಣುತ್ತದೆ! ದಶಕಗಳಿಂದ ಬೆಳೆ ವಿಮೆ ಯೋಜನೆಯಡಿ ಶೇ. 23ರಷ್ಟು ರೈತರು ಫಲಾನುಭವಿಗಳಾಗಿದ್ದರು. ಆದರೆ ಮೋದಿ ಸರ್ಕಾರ ಜಾರಿಗೆ ತಂದ ಯೋಜನೆ ಕೇವಲ ಎರಡು ಮೂರು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ರೈತರನ್ನು ಒಳಗೊಳ್ಳುವುದಾಗಿ ಘೋಷಿಸಿತು. ವಾಸ್ತವದಲ್ಲಿ ಎರಡು ಕೃಷಿ ಋತುಮಾನಗಳು ಕಳೆದ ಬಳಿಕವೂ ಸಾವಿರಾರು ಕೋಟಿ ರೂಪಾಯಿ ಮೊತ್ತದ ವಿಮೆ ಹಣವನ್ನು ರೈತರಿಗೆ ಪಾವತಿಸಿಲ್ಲ. ಇದರಿಂದ ಯೋಜನೆಯ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಆಗಿದೆ.

ಪ್ರೀಮಿಯಂ ಅನ್ನು ಸಕಾಲಿಕವಾಗಿ ಪಾವತಿಸಿದರೂ, ಬಿಕ್ಕಟ್ಟಿನ ಸಮಯದಲ್ಲಿ ಪರಿಹಾರ ನೀಡುವಾಗ ಉಂಟಾಗುತ್ತಿರುವ ಅತಿ ವಿಳಂಬ, ರೈತರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕಳೆದ ವರ್ಷದವರೆಗೂ ಬ್ಯಾಂಕುಗಳು ತಾವು ವಿತರಿಸುತ್ತಿದ್ದ ಬೆಳೆ ಸಾಲದಿಂದ ಪ್ರೀಮಿಯಂಗಳನ್ನು ಏಕರೂಪವಾಗಿ ಕಡಿತಗೊಳಿಸುತ್ತಿದ್ದವು. ನಿಯಮಗಳ ಸಡಿಲಿಕೆ ಮತ್ತು ರೈತರಿಗೆ ನೀಡಲಾಗಿರುವ ಆಯ್ಕೆಯಿಂದಾಗಿ, ಫಸಲ್ ಬಿಮಾ ಯೋಜನೆಯಲ್ಲಿ ಭಾಗವಹಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ವೇಳೆ ಸಂಪೂರ್ಣವಾಗಿ ಎಲ್ಲೆಡೆ ಬೆಳೆ ವೈಫಲ್ಯ ಉಂಟಾದರೆ ಅಂತಹ ಸಂದರ್ಭದಲ್ಲಿ, ರೈತರಿಗೆ ಭದ್ರತೆ ಎಲ್ಲಿದೆ? ಸುಮಾರು ನಾಲ್ಕು ದಶಕಗಳಿಂದ ಬೆಳೆ ವಿಮೆಯನ್ನು ಅಪಹಾಸ್ಯ ಮಾಡುವ ಅಂಶಗಳು ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ.

ಸಾಲ ಪಡೆಯುವವರಿಗೆ ಮಾತ್ರ ವಿಮಾ ರಕ್ಷಣೆ ಒದಗಿಸುವುದು, ಸರಾಸರಿ ವಾರ್ಷಿಕ ಇಳುವರಿಗೆ ಸಂಬಂಧಿಸಿದಂತೆ ವಿವೇಚನೆ ಇಲ್ಲದೆ ಲೆಕ್ಕಾಚಾರ ಮಾಡುವುದು ಇತ್ಯಾದಿ ಸಂಗತಿಗಳಿಂದಾಗಿ ಲಕ್ಷಾಂತರ ರೈತರಿಗೆ ಯೋಜನೆಯ ಲಾಭ ತಲುಪುತ್ತಿಲ್ಲ. ಬ್ಯಾಂಕ್​ನಲ್ಲಿ ಸಾಲ ಪಡೆಯುವವರಿಗೆ ಮಾತ್ರ ವಿಮಾ ಭದ್ರತೆಯನ್ನು ಸೀಮಿತಗೊಳಿಸಿದರೆ ಸಣ್ಣ ಮತ್ತು ಬಡ ರೈತರಲ್ಲಿ ಮುಕ್ಕಾಲು ಮಂದಿಗೆ ಅವಕಾಶ ಕಸಿದುಕೊಂಡಂತೆ ಆಗುತ್ತದೆ ಎಂದು ಸಿಎಜಿ ವರದಿ ಸೂಚಿಸಿದೆ. ಜಾರ್ಖಂಡ್, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ರೈತರು ಇನ್ನೂ ಒಂದು ರೂಪಾಯಿ ಪರಿಹಾರವನ್ನು ಕೂಡ ಪಡೆದಿಲ್ಲ. ಇಂತಹ ಸ್ಥಿತಿ ರೈತರನ್ನು ಖಿನ್ನತೆಗೆ ದೂಡುತ್ತದೆ. ಲೋಪದೋಷಗಳನ್ನು ಸರಿಪಡಿಸುವ ಬದಲು, ಯೋಜನೆಯನ್ನು ಸ್ವಯಂಪ್ರೇರಿತ ಮತ್ತು ಐಚ್ಛಿಕಗೊಳಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೊರಟಿದೆ.

ಸರ್ಕಾರದ ಈ ಪ್ರವೃತ್ತಿ, ಬೆಳೆ ವಿಮಾ ಯೋಜನೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಜಪಾನ್, ಸೈಪ್ರಸ್, ಕೆನಡಾದಂತಹ ದೇಶಗಳ ಕಟ್ಟುನಿಟ್ಟಿನ ವಿಧಾನಕ್ಕೆ ತದ್ವಿರುದ್ಧವಾಗಿ ಇದೆ. ಆ ದೇಶಗಳು ಗಂಭೀರ ನೈಸರ್ಗಿಕ ವಿಪತ್ತುಗಳನ್ನು ಎದುರಿಸುತ್ತಿರುವ ನಡುವೆಯೂ ರೈತರಿಗೆ ತಕ್ಷಣದ ಸಹಾಯಕ್ಕೆ ಮುಂದಾಗುತ್ತವೆ. ಬರಗಾಲ ಮತ್ತು ಪ್ರವಾಹದ ವಿರುದ್ಧ ಬೆಳೆಗಳನ್ನು ಭದ್ರಪಡಿಸುವ ಅತ್ಯಂತ ಆದರ್ಶ ವ್ಯವಸ್ಥೆ ಬ್ರೆಜಿಲ್​ನಲ್ಲಿ ಇದೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಎಲ್ಲಾ ಬೆಳೆಗಳಿಗೆ ವಿಮೆ ಸೌಲಭ್ಯ ಒದಗಿಸಬೇಕು ಎಂದು ಹಿರಿಯ ಕೃಷಿ ತಜ್ಞ ಸ್ವಾಮಿನಾಥನ್ ಅವರು ಮಾಡಿರುವ ಶಿಫಾರಸು ಈವರೆಗೂ ಜಾರಿಗೆ ಬಂದಿಲ್ಲ. ಬೆಳೆ ನಷ್ಟದಿಂದ ರೈತರನ್ನು ಕಾಪಾಡಲು ಮತ್ತು ಲಾಭದಾಯಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ, ರಾಜ್ಯಗಳ ಸಹಯೋಗದೊಂದಿಗೆ ವ್ಯಾಪಕವಾದ ಕ್ರಿಯಾ ಯೋಜನೆಯನ್ನು ಇನ್ನಾದರೂ ಪ್ರಾರಂಭಿಸಬೇಕು. ದೇಶದ ಮಣ್ಣಿನ ಸ್ವರೂಪಕ್ಕೆ ತಕ್ಕಂತೆ ವಿವಿಧ ಬೆಳೆ ಪ್ರಭೇದಗಳ ಮೌಲ್ಯಮಾಪನ ನಡೆಸಬೇಕು. ಜೊತೆಗೆ ದೇಶೀಯ ಅಗತ್ಯಗಳನ್ನು ಪೂರೈಸಿದ ನಂತರ ರಫ್ತು ಸಾಮರ್ಥ್ಯ ಅನ್ವೇಷಿಸುವುದು ಕೂಡ ಅವಶ್ಯಕ. ಯೋಜನೆಯ ಅನುಷ್ಠಾನದಲ್ಲಿ ಭಾಗವಹಿಸುವ ರೈತರಿಗೆ ಬೆಳೆ ವಿಮೆ ಸೇರಿದಂತೆ ಎಲ್ಲಾ ರೀತಿಯ ಸಬ್ಸಿಡಿಗಳು ಮತ್ತು ಪ್ರೋತ್ಸಾಹ ಧನ ದೊರೆಯುವಂತೆ ಆಗಬೇಕು. ಇದು ದೇಶಕ್ಕೆ ಆಹಾರ ಸುರಕ್ಷತೆಯನ್ನು ಒದಗಿಸುವ ಏಕೈಕ ಮಾರ್ಗ ಆಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.