ETV Bharat / bharat

ವಿಶೇಷ ಲೇಖನ; ಡೆಂಗ್ಯೂಜ್ವರ ಹರಡುವಿಕೆ ಹಾಗೂ ಲಕ್ಷಣಗಳು

ವಿಶ್ವದ 100 ದೇಶಗಳಲ್ಲಿ ಡೆಂಗ್ಯೂ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವದ ಶೇ 40 ರಷ್ಟು ಜನ ಡೆಂಗ್ಯೂ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಈ ಪ್ರದೇಶಗಳ ಜನರಿಗೆ ರೋಗ ಉಂಟು ಮಾಡುವ ಪ್ರಮುಖ ಕಾರಣ ಡೆಂಗ್ಯೂ ಆಗಿದೆ. ಪ್ರತಿವರ್ಷ ಸುಮಾರು 400 ಮಿಲಿಯನ್ ಜನರಿಗೆ ಡೆಂಗ್ಯೂ ಜ್ವರದಿಂದ ಬಳಲುತ್ತಾರೆ. ಇದರಲ್ಲಿ ಸುಮಾರು 100 ಮಿಲಿಯನ್ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ ಹಾಗೂ ಸುಮಾರು 22 ಸಾವಿರ ಜನ ಪ್ರತಿವರ್ಷ ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಾರೆ.

Dengue viruse spread
Dengue viruse spread
author img

By

Published : Jun 27, 2020, 2:18 PM IST

ಡೆಂಗ್ಯೂ ಜ್ವರವನ್ನು ಹರಡುವ ಏಡಿಸ್ ಎಜಿಪ್ತಿ ಜಾತಿಯ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಬಳಸದೆ ಬಿಟ್ಟ, ಹಳೆಯ ಟೈರ್, ಡ್ರಮ್, ಹೂದಾನಿಗಳು, ಬಾವಿ, ಮರದ ಪೊಟರೆಗಳಲ್ಲಿ ನಿಂತ ಕೊಳೆತ ನೀರು ಈ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅತ್ಯುತ್ತಮ ತಾಣಗಳಾಗಿವೆ. ಮೊದಲಿಗೆ ಕೇವಲ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದ್ದ ಡೆಂಗ್ಯೂ ಜ್ವರ ಈಗ ನಗರಗಳಿಗೂ ವ್ಯಾಪಿಸಿದೆ.

ಸೊಳ್ಳೆ ಕಚ್ಚಿದ 4 ರಿಂದ 7 ದಿನಗಳ ಒಳಗೆ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಲಾರಂಭಿಸುತ್ತವೆ. ಝಿಕಾ, ಚಿಕೂನ್ ಗುನ್ಯಾ ಹಾಗೂ ಇನ್ನಿತರ ವೈರಸ್​ಗಳನ್ನು ಸಹ ಏಡಿಸ್ ಎಜಿಪ್ತಿ ಜಾತಿಯ ಸೊಳ್ಳೆಗಳು ಹರಡುತ್ತವೆ. 4 ಬಗೆಯ ಡೆಂಗ್ಯೂ ವೈರಸ್ ಪ್ರಬೇಧಗಳಿರುವುದರಿಂದ ಒಬ್ಬ ಮನುಷ್ಯನಿಗೆ ಆತನ ಜೀವಿತಾವಧಿಯಲ್ಲಿ ನಾಲ್ಕು ಬಾರಿ ಡೆಂಗ್ಯೂ ಜ್ವರ ಕಾಡಬಹುದು.

ವಿಶ್ವದ 100 ದೇಶಗಳಲ್ಲಿ ಡೆಂಗ್ಯೂ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವದ ಶೇ 40 ರಷ್ಟು ಜನ ಡೆಂಗ್ಯೂ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಈ ಪ್ರದೇಶಗಳ ಜನರಿಗೆ ರೋಗ ಉಂಟು ಮಾಡುವ ಪ್ರಮುಖ ಕಾರಣ ಡೆಂಗ್ಯೂ ಆಗಿದೆ. ಪ್ರತಿವರ್ಷ ಸುಮಾರು 400 ಮಿಲಿಯನ್ ಜನರಿಗೆ ಡೆಂಗ್ಯೂ ಜ್ವರದಿಂದ ಬಳಲುತ್ತಾರೆ. ಇದರಲ್ಲಿ ಸುಮಾರು 100 ಮಿಲಿಯನ್ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ ಹಾಗೂ ಸುಮಾರು 22 ಸಾವಿರ ಜನ ಪ್ರತಿವರ್ಷ ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಾರೆ.

2015 ರಿಂದ ಭಾರತದಲ್ಲಿ ವರದಿಯಾದ ಡೆಂಗ್ಯೂ ಪ್ರಕರಣ ಹಾಗೂ ಸಾವು :

Sl. No.Affected States/UTs2015201620172018( Prov.)2019( till Nov.)
CDCDCDCDCD
1ಆಂಧ್ರ ಪ್ರದೇಶ3159234172492504011046470
2ಅರುಣಾಚಲ ಪ್ರದೇಶ1933113018010123 0
3ಅಸ್ಸಾಂ10761615745024116601670
4ಬಿಹಾರ1771019120185402142061930
5ಛತ್ತೀಸಗಢ3841356044402674106810
6ಗೋವಾ29301500235033518740
7ಗುಜರಾತ್5590980281447536757951483516
8ಹರಿಯಾಣ9921132493045500189809370
9ಹಿಮಾಚಲ ಪ್ರದೇಶ19132204520467273202
10ಜಮ್ಮು ಕಾಶ್ಮೀರ1530791488021404350
11ಜಾರ್ಖಂಡ್10204141 710546318030
12ಕರ್ನಾಟಕ50779608381784410442741523213
13ಕೇರಳ4075257439131999437408332394016
14ಮಧ್ಯ ಪ್ರದೇಶ21088315012266664506536452
15ಮೇಘಾಲಯ1301720520440610
16ಮಹಾರಾಷ್ಟ್ರ49362367923378296511011551237425
17ಮಣಿಪುರ52051119311403340
18ಮಿಜೋರಾಂ43058001360680420
19ನಾಗಾಲ್ಯಾಂಡ್21114203570369080
20ಒಡಿಶಾ24502838011415865198532510
21ಪಂಜಾಬ್14128181043915153981814980989490
22ರಾಜಸ್ಥಾನ404375292168427149587101266414
23ಸಿಕ್ಕಿಂ210820312032002430
24ತಮಿಳು ನಾಡು45351225315232946544861365775
25ತ್ರಿಪುರಾ4001020127010001000
26ತೆಲಂಗಾಣ18312403745369045922120726
27ಉತ್ತರ ಪ್ರದೇಶ28929150334230922838294928020
28ಉತ್ತರಾಖಂಡ್165512146484906893105008
29ಪಶ್ಚಿಮ ಬಂಗಾಳ85161422865453774646 --
30ಅಂಡಮಾನ್ ನಿಕೋಬಾರ್1530920180490 1680
31ಚಂಡೀಗಢ9661124601125030102350
32ದೆಹಲಿ15867604431109271107136441550
33ದಾದ್ರಾ ನಗರ ಹವೇಲಿ11540416122064049309542
34ದಮನ್ ದಿಯು16508905901630 1282
35ಪುದುಚೇರಿ7710490245687592214951
ಒಟ್ಟು99913220129166245188401325101192172136422132

{ C=Cases | D=Deaths | NR=Not Reported }

ಡೆಂಗ್ಯೂ ಜ್ವರ ಹರಡುವಿಕೆ

* ಏಡಿಸ್ ಎಜಿಪ್ತಿ ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

* ಮನೆಯ ಹೊರಗೆ ಹಾಗೂ ಒಳಗೆ ಎರಡೂ ಕಡೆಗಳಲ್ಲಿ ಕಂಡು ಬರುವ ಈ ಸೊಳ್ಳೆಗಳು ಮಾನವರಿಗೆ ಕಚ್ಚಿ ರಕ್ತ ಹೀರಲು ಹೆಚ್ಚು ಇಷ್ಟಪಡುತ್ತವೆ.

* ಮೊದಲೇ ಡೆಂಗ್ಯೂ ಜ್ವರ ಇರುವ ವ್ಯಕ್ತಿಯನ್ನು ಕಚ್ಚಿದಾಗ ವೈರಸ್​ ಸೊಳ್ಳೆಯ ದೇಹ ಪ್ರವೇಶಿಸುತ್ತವೆ. ನಂತರ ಈ ಸೊಳ್ಳೆಗಳು ಇತರರನ್ನು ಕಚ್ಚುವ ಮೂಲಕ ಅವರಿಗೆ ವೈರಸ್​ ಸಾಗಿಸುತ್ತವೆ.

* ಡೆಂಗ್ಯೂ ಬಾಧಿತ ಗರ್ಭಿಣಿಗೆ ಹುಟ್ಟುವ ಮಗುವಿಗೂ ಡೆಂಗ್ಯೂ ವೈರಸ್ ಹರಡಬಹುದು.

ಡೆಂಗ್ಯೂ ಜ್ವರದ ಲಕ್ಷಣಗಳು

ಸಣ್ಣ ಪ್ರಮಾಣದ ಡೆಂಗ್ಯೂ ಜ್ವರದ ಲಕ್ಷಣಗಳು ಕೆಲ ಬಾರಿ ಇತರ ಜ್ವರ ಬರುವ ರೋಗದಂತೆಯೇ ಇರುವುದರಿಂದ ಗೊಂದಲವಾಗಬಹುದು. ಜ್ವರ ಬರುವುದು ಇದರ ಸಾಮಾನ್ಯ ಲಕ್ಷಣವಾಗಿದ್ದು, ಮುಂದೆ ತಿಳಿಸಲಾದ ಎಲ್ಲ ಅಥವಾ ಯಾವುದೇ ಲಕ್ಷಣಗಳು ಕಂಡು ಬರಬಹುದು: ಹೊಟ್ಟೆ ಅಥವಾ ಸೊಂಟ ನೋವು, ವಾಂತಿ (ದಿನದಲ್ಲಿ ಕನಿಷ್ಠ ಮೂರು ಬಾರಿ), ಮೂಗಿನಿಂದ ರಕ್ತ ಒಸರುವುದು, ರಕ್ತ ವಾಂತಿ ಅಥವಾ ಮಲದಲ್ಲಿ ರಕ್ತ ಹೋಗುವುದು, ತೀರಾ ಆಯಾಸ, ನಿತ್ರಾಣವಾಗುವುದು.

: ಡೆಂಗ್ಯೂ ಜ್ವರ ತಡೆಗೆ ಮುನ್ನೆಚ್ಚರಿಕಾ ಕ್ರಮಗಳು :

* ಸೊಳ್ಳೆ ಓಡಿಸುವ ಔಷಧಿಗಳನ್ನು ಬಳಸುವುದು

* ಪೂರ್ತಿ ಮೈ ಮುಚ್ಚುವಂತೆ ಬಟ್ಟೆ ಧರಿಸುವುದು

* ಬಾಗಿಲು ಹಾಗೂ ಕಿಟಕಿಗಳಿಗೆ ಸ್ಕ್ರೀನ್ ಅಳವಡಿಸಿ ಒಳಗೆ ಸೊಳ್ಳೆ ಬರದಂತೆ ಮಾಡುವುದು

* ಬೆಳಗ್ಗೆ, ರಾತ್ರಿ ಹಾಗೂ ಇಳಿಸಂಜೆ ಹೊರಗಡೆ ಸುತ್ತಾಡದಿರುವುದು

* ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು

* ಹೂವಿನ ಕುಂಡಗಳಲ್ಲಿ ಹೆಚ್ಚುವರಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು

* ಹೂದಾನಿಗಳಲ್ಲಿನ ನೀರನ್ನು ಪ್ರತಿದಿನ ಬದಲಾಯಿಸುವುದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.