ETV Bharat / bharat

ಯೋಗ ಗುರು ರಾಮದೇವ್,ಪತಂಜಲಿ ಕಂಪನಿ ವಿರುದ್ಧ ಎಫ್ಐಆರ್​ ದಾಖಲು - ಪತಂಜಲಿ ಕಂಪನಿ ವಿರುದ್ಧ ಎಫ್ಐ ಆರ್​

ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಹೊರತಾಗಿಯೂ ಪತಂಜಲಿ ಕಂಪನಿ ಅನುಮೋದನೆ ಪಡೆಯದೆ ತನ್ನ ಔಷಧಿ ಕಿಟ್ 'ಕೊರೊನಿಲ್ ಮತ್ತು ಸ್ವಸಾರಿ' ಜಾಹೀರಾತು ನೀಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಬೇಕೆಂದು ಹೈಕೋರ್ಟ್ ವಕೀಲ ಸುಖ್ವಿಂದರ್ ಸಿಂಗ್ ನಾರಾ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.

Demand for FIR against Ramdev, Patanjali over 'coronavirus medicine'
ಯೋಗ ಗುರು ರಾಮದೇವ್, ಪತಂಜಲಿ ಕಂಪನಿ ವಿರುದ್ಧ ಎಫ್ಐ ಆರ್​ ದಾಖಲು
author img

By

Published : Jun 24, 2020, 3:32 PM IST

ಪಂಚಕುಲ (ಹರಿಯಾಣ) : ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಕಂಪನಿ ಪತಂಜಲಿ ವಿರುದ್ಧ ಅನುಮೋದನೆ ಪಡೆಯದೆ ತನ್ನ ಔಷಧಿ ಕಿಟ್ 'ಕೊರೊನಿಲ್ ಮತ್ತು ಸ್ವಸಾರಿ' ಜಾಹೀರಾತು ನೀಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಕೀಲ ಸುಖ್ವಿಂದರ್ ಸಿಂಗ್ ನಾರಾ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಹೊರತಾಗಿಯೂ ಕಂಪನಿಯು ತನ್ನ 'ಕೊರೊನಿಲ್ ಮತ್ತು ಸ್ವಸಾರಿ' ಔಷಧಿ ಜಾಹೀರಾತು ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳ ಸರಿಯಾದ ಅನುಮೋದನೆ ಇಲ್ಲದೆ ಇಂತಹ ಜಾಹೀರಾತುಗಳನ್ನು ಮಾಡುವಂತಿಲ್ಲ. ಅವರು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಸಂಬಂಧಿತ ಕಾನೂನುಗಳ ಅಡಿ ಪ್ರಕರಣ ದಾಖಲಿಸತಕ್ಕದ್ದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಔಷಧಿ ಬಗ್ಗೆ ಸರಿಯಾದ ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗ ನಡೆದಿದೆಯೇ?. ನಡೆದಿದ್ದರೆ ಅದನ್ನು ಪ್ರಕಟಿಸಲಾಗಿದೆಯೇ?. ಔಷಧಿಗೆ ಐಸಿಎಂಆರ್ ಮತ್ತು ಆಯುಷ್ ಸಚಿವಾಲಯವು ಅನುಮೋದನೆ ನೀಡಿದೆಯೇ? ಇದ್ಯಾವುದು ಸ್ಪಷ್ಟೀಕರಣ ನೀಡದೆಯೇ ಜಾಹೀರಾತು ಮಾಡಿ ಔಷಧಿಯನ್ನು ಮಾರುಕಟ್ಟೆಗೆ ತಂದಿರುವುದು ತಪ್ಪು ಎಂದು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.