ETV Bharat / bharat

ದೆಹಲಿಯಲ್ಲಿ ಮದ್ಯದ ಮೇಲೆ 70% ವಿಶೇಷ ಕೊರೊನಾ ತೆರಿಗೆ

ಮದ್ಯದ ಎಂಆರ್​ಪಿ ಮೇಲೆ 70% ವಿಶೇಷ ಕೊರೊನಾ ತೆರಿಗೆ ವಿಧಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರ ಸೋಮವಾರ ತಡರಾತ್ರಿ ಆದೇಶ ಹೊರಡಿಸಿದೆ.

kejriwal
author img

By

Published : May 5, 2020, 8:38 AM IST

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ದೆಹಲಿ ಸರ್ಕಾರ ಇಂದಿನಿಂದ ಮದ್ಯದ ಮೇಲೆ ಶೇಕಡಾ 70ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಿದೆ.

"ವಿಶೇಷ ಕರೋನಾ ಶುಲ್ಕ" ಕುರಿತು ಸೋಮವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ, ಬೆಳಗ್ಗೆ 9ರಿಂದ ಸಂಜೆ 6:30ರವರೆಗೆ ಮದ್ಯದಂಗಡಿಗಳನ್ನು ತೆರೆದಿಡಲು ಪೊಲೀಸರು ಅವಕಾಶ ನೀಡಬೇಕು ಎಂದು ಹೇಳಿದರು.

ಎಂಆರ್​ಪಿ ಮೇಲೆ 70% ವಿಶೇಷ ಕೊರೊನಾ ತೆರಿಗೆ ವಿಧಿಸಲಾಗುವುದು. ಉದಾಹರಣೆಗೆ, ತೆರಿಗೆಯ ಮುಂಚಿನ ಎಂಆರ್‌ಪಿ 1,000 ರೂ. ಇರುವ ಮದ್ಯದ ಬೆಲೆ, ಕೊರೊನಾ ಶುಲ್ಕ ಹೇರಿದ ಮೇಲೆ 1,700 ರೂ. ಆಗಲಿದೆ.

ಕೊರೊನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಮುಚ್ಚಿದ್ದ ಮದ್ಯದಂಗಡಿಗಳನ್ನು ನಿನ್ನೆ ತೆರೆಯಲಾಗಿದೆ. ಹೆಚ್ಚುವರಿ ತೆರಿಗೆಯಿಂದ ದೆಹಲಿ ಸರ್ಕಾರ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

ಸೋಮವಾರ ಬೆಳಗ್ಗೆ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮದ್ಯದ ಮೇಲೆ ಶೇಕಡಾ 70ರಷ್ಟು ತೆರಿಗೆ ವಿಧಿಸುವ ಕುರಿತು ಚರ್ಚಿಸಿ, ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ.

ಲಾಕ್​ ಡೌನ್​ನಿಂದಾಗಿ ರಾಜ್ಯ ಸರ್ಕಾರದ ಗಳಿಕೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮದ್ಯದ ಮೇಲೆ "ವಿಶೇಷ ಕರೋನಾ ಶುಲ್ಕ" ವಿಧಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.