ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಇಂದಿನಿಂದ ಮಾರ್ಚ್ 31 ರವರೆಗೆ ರಾಜ್ಘಾಟ್ ಬಂದ್ ಆಗಲಿದೆ.
ಅಂಗಡಿ ಮುಂಗಟ್ಟುಗಳು ತೆರೆಯುವುದರಿಂದ ಈ ವೈರಸ್ ವ್ಯಾಪಕವಾಗಿ ಹರಡಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ, ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಸಮಾಧಿಯಿರುವ ರಾಜ್ಘಾಟ್ಗೆ ಹೆಚ್ಚಾಗಿ ಪ್ರವಾಸಿಗರು ಆಗಮಿಸುವುದರಿಂದ ಅಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ.
ಮಾರ್ಚ್ 31 ರವರೆಗೆ ಮೆಹ್ರಾಲಿಯಲ್ಲಿರುವ ಕುತುಬ್ ಮಿನಾರ್ಗೆ ಸಾರ್ವಜನಿಕರ ಪ್ರವೇಶವನ್ನ ನಿಷೇಧಿಸಲಾಗಿದೆ. ಕುತುಬ್ ಮಿನಾರ್ ವಿಶ್ವ ಪಾರಂಪರಿಕ ಸ್ಮಾರಕವಾಗಿದೆ. ಹಾಗಾಗಿ, ಇಲ್ಲಿಗೆ ದೇಶ, ವಿದೇಶಗಳಿಂದ ಹೆಚ್ಚಿನ ಜನರು ಆಗಮಿಸುತ್ತಿದ್ದರು.
ಐತಿಹಾಸಿಕ ಕೆಂಪುಕೋಟೆಗೂ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಗಣರಾಜ್ಯೋತ್ಸವದಂದು ಇಲ್ಲಿ ಪ್ರಧಾನಮಂತ್ರಿ ರಾಷ್ಟ್ರಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ.
ಈಗಾಗಲೇ ಮಾರಣಾಂತಿಕ ವೈರಸ್ಗೆ ದೆಹಲಿಯಲ್ಲಿ ಓರ್ವ ಮೃತಪಟ್ಟಿದ್ದು, 8 ಮಂದಿಗೆ ಸೋಂಕಿರುವುದು ದೃಢ ಪಟ್ಟಿದೆ. ಈಗಾಗಲೇ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.