ನವದೆಹಲಿ: ಡ್ರೋನ್‌ಗಳ ಬಳಕೆ ನಿಷೇಧಿಸಲಾಗಿರುವುದರಿಂದ ನವದೆಹಲಿಯ ರಾಷ್ಟ್ರಪತಿ ಭವನ ಬಳಿ ಡ್ರೋನ್ ಹಾರಾಟ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರು ಅಮೆರಿಕಾ ಮೂಲದ ತಂದೆ -ಮಗನನ್ನು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 14 ರಂದು ರಾಷ್ಟ್ರಪತಿ ಭವನ ಬಳಿ ಡ್ರೋನ್ ಹಾರಾಟ ನಡೆಸಿದ್ದಕ್ಕಾಗಿ ಅವರಿಬ್ಬರನ್ನು ಬಂಧಿಸಿದ್ದಾರೆ. ಇನ್ನು ಡ್ರೋನ್ ವಿಡಿಯೋ ಕ್ಯಾಮೆರಾದ ಮೂಲಕ ಸೆರೆಹಿಡಿಯಲಾದ ಹೈ-ಸೆಕ್ಯುರಿಟಿ ಸೆಂಟ್ರಲ್ ಸೆಕ್ರೆಟರಿಯಟ್ ಪ್ರದೇಶದ ಕೆಲವು ಫೋಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಡ್ರೋನ್ ಏಕೆ ಬಳಸಿದ್ದೀರಿ ಎಂದು ಪೊಲೀಸರು ಆ ತಂದೆ ಮಗನನ್ನು ಪ್ರಶ್ನಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.