ETV Bharat / bharat

ಯುಪಿಎಸ್ಸಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಸೇವೆ ಹೆಚ್ಚಿಸಿದ ದೆಹಲಿಯ ಮೆಟ್ರೋ ರೈಲು - facilitate students for the UPSC examinations

ಯುಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲತೆಗಾಗಿ ಅ. 4 ರಂದು ಎಲ್ಲ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ತಿಳಿಸಿದೆ.

Delhi Metro to begin service at 6 AM on Sunday for UPSC candidates
ದೆಹಲಿ ಮೆಟ್ರೋ ರೈಲು ನಿಗಮ
author img

By

Published : Oct 3, 2020, 4:42 PM IST

ನವದೆಹಲಿ: ಅಕ್ಟೋಬರ್ 04 ರಂದು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಇದ್ದು ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ದೆಹಲಿಯ ಮೆಟ್ರೋ ರೈಲು ಸೇವೆಗಳು ಅಂದೇ (ಅ. 4 ಭಾನುವಾರ) ಎಲ್ಲ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಲಿವೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ಶನಿವಾರ ಟ್ವೀಟ್ ಮಾಡಿದೆ.

  • Public Service Announcement

    To facilitate students for the UPSC examinations, Delhi Metro services will begin at 6 AM from terminal stations of all lines on 4th October.

    — Delhi Metro Rail Corporation I कृपया मास्क पहनें😷 (@OfficialDMRC) October 3, 2020 " class="align-text-top noRightClick twitterSection" data=" ">

ಯುಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲತೆಗಾಗಿ ಅ. 4 ರಂದು ಎಲ್ಲ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ ಎಂದು ತಿಳಿಸಿರುವ ದೆಹಲಿ ಮೆಟ್ರೋ ರೈಲು ನಿಗಮ, ಈ ದಿನ ಹೊರತುಪಡಿಸಿ ಹಳೆ ಮಾರ್ಗಸೂಚಿಯಂತೆ (ಅನ್​ಲಾಕ್ 3​) ಬೆಳಗ್ಗೆ 8:00 ಗಂಟೆಗೆ (ಪ್ರತಿ ಭಾನುವಾರದಂದು) ಎಂದಿನಂತೆ ತನ್ನ ಸೇವೆ ಮುಂದುವರಿಸಲಿದೆ ಎಂದು ತಿಳಿಸಿದೆ.

ಕೊರೊನಾ ವೈರಸ್ ಹರಡಿದ ಕಾರಣ ದೆಹಲಿ ಮೆಟ್ರೋ ರೈಲು ನಿಗಮ ತನ್ನ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಕ್ರಮೇಣ ಆಯ್ದ ಕೆಲವು ನಿಲ್ದಾಣಗಳನ್ನು ಹೊಸ ಮಾರ್ಗಸೂಚಿ ಅನ್ವಯ ತೆರೆಯುವ ಮೂಲಕ ಮತ್ತೆ ತನ್ನ ಸೇವೆ ಮುಂದುವರೆಸಿತ್ತು. ಭಾನುವಾರ ಹೊರತುಪಡಿಸಿ (ಬೆಳಗ್ಗೆ 8:00) ಇತ್ತೀಚೆಗೆ ಎಲ್ಲ ಕಾರಿಡಾರ್​ಗಳನ್ನು ತೆರೆಯಲಾಗಿತ್ತು.

Delhi Metro to begin service at 6 AM on Sunday for UPSC candidates
ದೆಹಲಿ ಮೆಟ್ರೋ ರೈಲು ನಿಗಮ

ಪ್ರಯಾಣಿಕರು ಸಂಚಾರ ಮಾಡುವಾಗ ತಪ್ಪದೇ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿ ಹೇಳಿರುವ ದೆಹಲಿ ಮೆಟ್ರೊ ರೈಲು ನಿಗಮ, ಫ್ರಂಟ್​ಲೈನ್​ಗೆ ಬರುವ ಸಿಬ್ಬಂದಿ ಹೊರತುಪಡಿಸಿ ಮೆಟ್ರೊ ಪ್ರಯಾಣದ ಹೊಸ ಮಾನದಂಡಗಳ ಹಿನ್ನೆಲೆ ಪ್ರಯಾಣಿಕರಿಗೆ ಸಹಾಯ ಮಾಡಲೆಂದು ಮತ್ತು ಅವರಿಗೆ ಮಾರ್ಗದರ್ಶನ ನೀಡಲು ಸುಮಾರು 1,000 ಸಿಬ್ಬಂದಿ ನಿಯೋಜಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.