ETV Bharat / bharat

ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ - ಕೇಂದ್ರ ದೆಹಲಿಯಲ್ಲಿ ಕೊಲೆ

ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಿದ್ದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕೊಲೆ ಆರೋಪಿ
ಕೊಲೆ ಆರೋಪಿ
author img

By

Published : Jun 25, 2020, 6:23 PM IST

ನವದೆಹಲಿ: ಪ್ರತಿದಿನ ಬೀದಿ ನಾಯಿಗಳಿಗೆ ತಮ್ಮ ಮನೆಯ ಸಮೀಪ ತಿಂಡಿ ಹಾಕುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಕೇಂದ್ರ ದೆಹಲಿಯ ಪಹರ್​ಗಂಜ್​ನಲ್ಲಿ ನಡೆದಿದೆ.

ಬ್ರಿಜ್​ ಮೋಹನ್​ ಎಂಬ 57 ವರ್ಷದ ವ್ಯಕ್ತಿ ಪ್ರತಿದಿನ ಬೀದಿ ನಾಯಿಗಳಿಗೆ ತನ್ನ ಮನೆಯ ಸಮೀಪ ತಿಂಡಿ ಹಾಕುತ್ತಿದ್ದ. ಭಾನುವಾರ ರಾತ್ರಿ ನಾಯಿಯೊಂದು ಆತನ ನೆರೆಮನೆಯವನಾದ ಪ್ರಹ್ಲಾದ್ ಎಂಬಾತನನ್ನು ಕಚ್ಚಿದೆ. ಇದರಿಂದ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದೆ.

ಈ ವೇಳೆ ಇಬ್ಬರೂ ಅಸಭ್ಯವಾಗಿ ಬೈದುಕೊಂಡಿದ್ದು, ಪ್ರಹ್ಲಾದ್​ ತನ್ನ ಮನೆಯಿಂದ ಚಾಕು ತಂದು ಬ್ರಿಜ್​ ಮೋಹನ್​ಗೆ ಇರಿದಿದ್ದಾನೆ. ಬ್ರಿಜ್​ ಮೋಹನ್​ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಸದ್ಯ ಪ್ರಹ್ಲಾದ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.