ETV Bharat / bharat

ದೆಹಲಿ ಹೈಕೋರ್ಟ್​ನಲ್ಲಿ 5 ತಿಂಗಳ ಬಳಿಕ ಭೌತಿಕ ವಿಚಾರಣೆ ಪ್ರಾರಂಭ - 5 ಪೀಠಗಳಿಂದ ಭೌತಿಕವಾಗಿ ವಿಚಾರಣೆ

ದೆಹಲಿ ಹೈಕೋರ್ಟ್​ ಸುಮಾರು 5 ತಿಂಗಳ ಬಳಿಕ ಭೌತಿಕ ವಿಚಾರಣೆ ಪ್ರಾರಂಭಿಸಲಿದ್ದು, ಅರ್ಜಿದಾರರ ಪ್ರವೇಶಕ್ಕೆ ಸಮಯ ನಿಗದಿಪಡಿಸಿದೆ.

ದೆಹಲಿ ಹೈಕೋರ್ಟ್​
ದೆಹಲಿ ಹೈಕೋರ್ಟ್​
author img

By

Published : Sep 1, 2020, 1:46 PM IST

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್​ ತನ್ನ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಸುಮಾರು 5 ತಿಂಗಳ ಬಳಿಕ ಮತ್ತೆ ಕಾರ್ಯಾರಂಭ ಮಾಡಿದೆ.

5 ಪೀಠಗಳು ಭೌತಿಕವಾಗಿ ವಿಚಾರಣೆ ನಡೆಸಲು ಮುಂದಾಗಿದ್ದು, ಉಳಿದ ಪೀಠಗಳು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಲಿವೆ. ಇಂದು ಎರಡು ವಿಭಾಗದ ಪೀಠಗಳು ಮತ್ತು ಮೂರು ಏಕ ನ್ಯಾಯಾಧೀಶರ ಪೀಠಗಳು ಭೌತಿಕ ವಿಚಾರಣೆ ನಡೆಸುತ್ತಿವೆ. ಕೋವಿಡ್​-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಐದು ನ್ಯಾಯಪೀಠಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಪ್ರಕಾರ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಿವೆ.

"ನ್ಯಾಯಾಲಯವು ಅನುಮೋದಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ)ನಲ್ಲಿರುವ ನಿರ್ದೇಶನಗಳಿಗೆ ಅನುಗುಣವಾಗಿ ಭೌತಿಕ ವಿಚಾರಣೆಗೆ ಹಾಜರಾಗಲು ವಿವಿಧ ಬ್ಯಾಚ್‌ಗಳಂತೆ ಸಮಯ ನಿಗದಿ ಮಾಡಲಾಗುತ್ತದೆ. ಪ್ರತೀ ಬ್ಯಾಚ್​ನಲ್ಲಿ 10 ಪ್ರಕರಣಗಳು ಒಳಗೊಂಡಿರುತ್ತವೆ" ಎಂದು ದೆಹಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮನೋಜ್ ಜೈನ್ ಹೇಳಿದ್ದಾರೆ.

"ಕೋರ್ಟ್ ಬ್ಲಾಕ್‌ನ ನಿರ್ದಿಷ್ಟ ಮಹಡಿಗೆ ಮೊದಲ ಬ್ಯಾಚ್‌ನ ಪ್ರವೇಶ ಬೆಳಿಗ್ಗೆ 10:00 ಗಂಟೆಗೆ ನಡೆಯುತ್ತದೆ. ಎರಡನೇ ಬ್ಯಾಚ್‌ಗೆ ಬೆಳಿಗ್ಗೆ 11.15ಕ್ಕೆ ಮತ್ತು ಮೂರನೇ ಬ್ಯಾಚ್‌ಗೆ ಮಧ್ಯಾಹ್ನ 12.15ಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಗೊತ್ತುಪಡಿಸಿದ ಸಮಯದ ಸ್ಲಾಟ್‌ಗೆ ಮುಂಚಿತವಾಗಿ ವ್ಯಕ್ತಿಗೆ ನ್ಯಾಯಾಲಯದ ಬ್ಲಾಕ್‌ಗಳ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಸಂಬಂಧಪಟ್ಟವರೆಲ್ಲರೂ ಸಹಕರಿಸಲು ಕೋರಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ನೇತೃತ್ವದ ವಿಭಾಗೀಯ ಪೀಠ ಸೆಪ್ಟೆಂಬರ್ 1 ಮತ್ತು 2 ರಂದು ದೈಹಿಕ ವಿಚಾರಣೆಯನ್ನು ನಡೆಸುತ್ತಿದೆ. ಅಲ್ಲದೆ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರಜನೀಶ್ ಭಟ್ನಾಗರ್ ಅವರ ಮತ್ತೊಂದು ವಿಭಾಗೀಯ ಪೀಠ, ಮೂರು ಏಕ ನ್ಯಾಯಾಧೀಶರ ಪೀಠಗಳು ಸಹ ಭೌತಿಕ ನ್ಯಾಯಾಲಯದ ವಿಚಾರಣೆಯನ್ನು ನಡೆಸುತ್ತಿವೆ. ಮೂವರು ಏಕ ನ್ಯಾಯಾಧೀಶರ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಜಯಂತ್ ನಾಥ್, ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಯೋಗೇಶ್ ಖನ್ನಾ ಇರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.