ETV Bharat / bharat

ತೆಲಂಗಾಣದಲ್ಲಿ ಭಾರಿ ಪ್ರವಾಹ: ಸಹಾಯ ಹಸ್ತ ಚಾಚಿದ ದೆಹಲಿ ಸರ್ಕಾರ - ತೆಲಂಗಾಣಕ್ಕೆ ದೇಣಿಗೆ ನೀಡಿದ ದೆಹಲಿ ಸರ್ಕಾರ

ತೆಲಂಗಾಣದಲ್ಲಿ ಭಾರಿ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದ್ದು, ದೆಹಲಿ ಸರ್ಕಾರ 15 ಕೋಟಿ ರೂಪಾಯಿ ನೆರವು ನೀಡಿದೆ.

Telangana flood relief
ತೆಲಂಗಾಣದಲ್ಲಿ ಭಾರಿ ಪ್ರವಾಹ
author img

By

Published : Oct 20, 2020, 3:03 PM IST

ಹೈದರಾಬಾದ್​: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣದಲ್ಲಿ ಭಾರಿ ಮಳೆಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.

ತೆಲಂಗಾಣದ ಈ ಸಂಕಷ್ಟದ ಸಮಯದಲ್ಲಿ ದೆಹಲಿ ಸರ್ಕಾರ ನೆರವಿನ ಹಸ್ತ ಚಾಚಿದ್ದು, 15 ಕೋಟಿ ರೂಪಾಯಿ ನೀಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ನೆರೆ ಪೀಡಿತ ಪರಿಹಾರ ಕಾರ್ಯಗಳಿಗಾಗಿ 15 ಕೋಟಿ ರೂಪಾಯಿ ನೀಡಿದ್ದು, ತೆಲಂಗಾಣ ಸರ್ಕಾರದ ಜತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಸುರಿದ ಭಾರಿ ಮಳೆಗೆ 70 ಜನರು ಮೃತಪಟ್ಟಿದ್ದಾರೆ. 1908 ರ ಬಳಿಕ ಹೈದರಾಬಾದ್​ನಲ್ಲಿ ಅತಿ ಹೆಚ್ಚು ಹಾನಿವುಂಟು ಮಾಡಿದ ಮಳೆ ಇದಾಗಿದೆ. ಹತ್ತಾರು ಹಳ್ಳಿಗಳಿಗೆ ನೀರು ನುಗ್ಗಿ 37 ಸಾವಿರ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಂದು ಸಚಿವ ಕೆ.ಟಿ. ರಾಮಾರಾವ್​ ತಿಳಿಸಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ ರಾಜ್ಯದಲ್ಲಿ ಈವರೆಗೆ 5 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.