ETV Bharat / bharat

ನೌಕರರು, ಪಿಂಚಣಿದಾರರ ವಿವಿಧ ಭತ್ಯೆ ತಡೆಹಿಡಿದ ದೆಹಲಿ ಸರ್ಕಾರ - ಹೆಚ್ಚುವರಿ ಭತ್ಯೆ

ಸುಮಾರು 2.2 ಲಕ್ಷ ನೌಕರರು ಮತ್ತು ಪಿಂಚಣಿದಾರರ ವಿವಿಧ ಭತ್ಯೆಗಳನ್ನು 2021 ಜುಲೈವರೆಗೆ ತಡೆಹಿಡಿಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ಆ ಹಣವನ್ನು ಕೋವಿಡ್​ ಪರಿಹಾರ ಕಾರ್ಯಗಳಿಗೆ ಬಳಸಲು ತೀರ್ಮಾನಿಸಿದೆ.

Delhi govt freezes DA, DR for its employees, pensioners

author img

By

Published : Apr 30, 2020, 8:52 AM IST

ನವದೆಹಲಿ: ಕೇಂದ್ರದ ಕ್ರಮವನ್ನು ಅನುಸರಿಸಿರುವ ದೆಹಲಿ ಸರ್ಕಾರ ಜುಲೈ 2021ರವರೆಗೆ ಸುಮಾರು 2.2 ಲಕ್ಷ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ವಿವಿಧ ಭತ್ಯೆಗಳನ್ನು ತಡೆಹಿಡಿದಿದೆ.

2020 ರ ಜನವರಿಯಿಂದ ನೌಕರರಿಗೆ ಹೆಚ್ಚುವರಿ ಭತ್ಯೆ ಮತ್ತು ಪಿಂಚಣಿದಾರರಿಗೆ ಪರಿಹಾರ ಭತ್ಯೆ ನೀಡಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ಆದೇಶಕ್ಕೆ ಅನುಮೋದನೆ ನೀಡಿರುವ ದೆಹಲಿ ಸರ್ಕಾರದ ಹಣಕಾಸು ಇಲಾಖೆ ಭತ್ಯೆಗಳನ್ನು ಜುಲೈ 2021ರವರೆಗೆ ತಡೆಹಿಡಿದಿದೆ.

ನೌಕರರು ಮತ್ತು ಪಿಂಚಣಿದಾರರ ಭತ್ಯೆಗಳನ್ನು ತಡೆಹಿಡಿದು ರಾಜಧಾನಿಯಲ್ಲಿ ಕೋವಿಡ್​ ಪರಿಹಾರ ಕಾರ್ಯಗಳಿಗೆ ಬಳಸಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಸರ್ಕಾರದ ಈ ಕ್ರಮ ಸುಮಾರು 2.2 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ದೆಹಲಿ ಸರ್ಕಾರಿ ನೌಕರರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ಬಾತ್ರಾ ಹೇಳಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.