ETV Bharat / bharat

ದೆಹಲಿ- ಘಾಜಿಯಾಬಾದ್​​ ರಸ್ತೆ ಸಂಚಾರ ಸಂಪೂರ್ಣ ಬಂದ್​​ - ಘಾಜಿಯಾಬಾದ್​​ ಮತ್ತು ದೆಹಲಿ ನಡುವಿನ ರಸ್ತೆ ಸಂಚಾರ

ದೇಶಾದ್ಯಂತ ಹರಡಿರುವ ಭೀಕರ ಕೊರೊನಾ ವೈರಸ್​​ನಿಂದಾಗಿ ಜನರಲ್ಲಿ ತೀವ್ರ ಮಟ್ಟದ ಆತಂಕ ಸೃಷ್ಠಿಯಾಗಿದ್ದು, ಈ ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ಘಾಜಿಯಾಬಾದ್​​ ಮತ್ತು ದೆಹಲಿ ನಡುವಿನ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಬಂದ್​ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.

delhi-ghaziabad-
ದೆಹಲಿ- ಘಾಜಿಯಾಬಾದ್​​
author img

By

Published : Apr 22, 2020, 1:58 PM IST

ನವದೆಹಲಿ: ಕೊರೊನಾ ವೈರಸ್​​ ಹರಡುವುದನ್ನು ತಡೆಗಟ್ಟುವ ಸಲುವಾಗಿ ಘಾಜಿಯಾಬಾದ್​​ ಹಾಗೂ ದೆಹಲಿ ನಡುವಿನ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.

2005ರ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಈ ಆದೇಶ ಹೊರಡಿಸಲಾಗಿದ್ದು, ಇವತ್ತಿನಿಂದಲೇ ಈ ಆದೇಶ ಜಾರಿಗೆ ಬಂದಿದೆ. ಆರೋಗ್ಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಅಗತ್ಯ ಸೇವೆ ಒದಗಿಸುವ ಸಿಬ್ಬಂದಿ ಮತ್ತು ಪಾಸ್​ ಹೊಂದಿದವರನ್ನು ಹೊರತುಪಡಿಸಿ ಬೇರಾರಿಗೂ ಪ್ರವೇಶ ನೀಡದಂತೆ ಜಿಲ್ಲಾಡಳಿತ ಆದೇಶ ನೀಡಿದೆ.

ಈಗಾಗಲೇ ದೆಹಲಿಯಿಂದ ಬಂದ ಆರು ಜನರಿಗೆ ಕೊರೊನಾ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಘಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ಏಪ್ರಿಲ್ 20 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶದ ಆಗ್ರಾದಲ್ಲಿ 65 ಮತ್ತು ರಾಯ್​ಬರೇಲಿಯ 33 ಪ್ರಕರಣಗಳು ಸೇರಿದಂತೆ ಒಟ್ಟು 153 ಹೊಸ ಕೋವಿಡ್​-19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 53 ಜಿಲ್ಲೆಗಳಿಂದಾಗಿ 1,337 ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.