ETV Bharat / bharat

ದೆಹಲಿ ಚುನಾವಣೆ: ಅಧಿಕಾರಕ್ಕಾಗಿ ಪಕ್ಷಗಳ ಲೆಕ್ಕಾಚಾರ ಏನೇನು? - ದೆಹಲಿ ವಿಧಾನಸಭೆಗೆ ಚುನಾವಣೆ ನ್ಯೂಸ್​

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಜಧಾನಿ ಎಂಬ ಕಾರಣಕ್ಕೆ ಮಾತ್ರವಲ್ಲದೆ, 140 ದೇಶಗಳ ಜನಸಂಖ್ಯೆಗಿಂತ ಹೆಚ್ಚು ಅಂದರೆ ಎರಡು ಕೋಟಿ ಜನರು ಇರುವ ಕಾರಣಕ್ಕಾಗಿ ಕೂಡ ದೆಹಲಿ ವಿಶಿಷ್ಟ ನಗರ ಎನಿಸಿಕೊಂಡಿದೆ. ಚುನಾವಣಾ ಆಯೋಗ ಮುಂದಿನ ತಿಂಗಳ ಎಂಟನೇ ತಾರೀಖಿನಂದು 70 ಸದಸ್ಯರು ಇರುವ ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಿಸಿದ್ದು, ರಾಜಧಾನಿಯ ರಾಜಕಾರಣ ರಂಗು ಪಡೆದುಕೊಂಡಿದೆ.

ದೆಹಲಿ ಚುನಾವಣೆ
ದೆಹಲಿ ಚುನಾವಣೆ
author img

By

Published : Jan 9, 2020, 11:29 PM IST

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಜಧಾನಿ ಎಂಬ ಕಾರಣಕ್ಕೆ ಮಾತ್ರವಲ್ಲದೆ, 140 ದೇಶಗಳ ಜನಸಂಖ್ಯೆಗಿಂತ ಹೆಚ್ಚು ಅಂದರೆ ಎರಡು ಕೋಟಿ ಜನರು ಇರುವ ಕಾರಣಕ್ಕಾಗಿ ಕೂಡ ದೆಹಲಿ ವಿಶಿಷ್ಟ ನಗರ ಎನಿಸಿಕೊಂಡಿದೆ. ಚುನಾವಣಾ ಆಯೋಗ ಮುಂದಿನ ತಿಂಗಳ ಎಂಟನೇ ತಾರೀಖಿನಂದು 70 ಸದಸ್ಯರು ಇರುವ ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಿಸಿದ್ದು, ರಾಜಧಾನಿಯ ರಾಜಕಾರಣ ರಂಗು ಪಡೆದುಕೊಂಡಿದೆ.

ಚುನಾವಣಾ ಆಯೋಗ 13,750 ಮತಗಟ್ಟೆಗಳನ್ನು ಸ್ಥಾಪಿಸಿದೆ. ಸುಮಾರು ಒಂದು ಕೋಟಿ ನಲವತ್ತೇಳು ಲಕ್ಷ ಮತದಾರರು ಪಾಲ್ಗೊಳ್ಳಲಿರುವ ಮತದಾನ ಪ್ರಕ್ರಿಯೆಗಾಗಿ 90,000 ಮಂದಿ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಮೊದಲ ಬಾರಿಗೆ, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಅಂಗವಿಕಲರಾಗಿರುವ ಮತದಾರರು ಅಂಚೆ ಮತ ಪತ್ರದ ಮೂಲಕ ಮತದಾನದ ಹಕ್ಕನ್ನು ಅನುಭವಿಸಲಿದ್ದಾರೆ. ನಾಮಪತ್ರ ಪ್ರಕ್ರಿಯೆ ಮುಗಿಯುವವರೆಗೆ ಮತದಾರರ ದಾಖಲಾತಿ ಮಾಡಿರುವುದು ಮತ್ತು ಮತದಾರರ ಚೀಟಿಗಳಲ್ಲಿ ಕ್ಯೂ ಆರ್ ಕೋಡ್ ನಮೂದಿಸಿರುವುದು ಈ ಬಾರಿ ಚುನಾವಣೆಯ ವಿಶೇಷ.

ದೆಹಲಿ ವಿಧಾನಸಭೆಗೆ ನಡೆದ ಆರು ಚುನಾವಣೆಗಳಲ್ಲಿ ಬಿಜೆಪಿ ಮೊದಲ ಬಾರಿ ಜಯಗಳಿಸಿತ್ತು. ಬಿಜೆಪಿಯ ಮೂರು ಅವಧಿಯ ಆಡಳಿತದ ನಂತರ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಕಾಂಗ್ರೆಸ್ ಮೂರು ಬಾರಿ ಜಯಗಳಿಸಿತು. ಕೇಜ್ರಿವಾಲ್ ನೇತೃತ್ವದಲ್ಲಿ 2012 ರ ನವೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷ ( ಎ ಎ ಪಿ ) ಪ್ರವೇಶ ಪಡೆಯಿತು. ಇದರೊಂದಿಗೆ ಎರಡು ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಕೊನೆಗೊಂಡಿತು. 2013 ಮತ್ತು 2015 ರಲ್ಲಿ ಸತತ ಜಯ ಗಳಿಸಿದ ಎಎಪಿ ದೆಹಲಿಯ ಮತದಾರರ ನೆಚ್ಚಿನ ಪಕ್ಷವಾಗಿ ಹೊರಹೊಮ್ಮಿದೆ. 2015 ರ ಚುನಾವಣೆ ಸಂದರ್ಭದಲ್ಲಿ ಎಎಪಿ 67 ಸ್ಥಾನಗಳನ್ನು ಗಳಿಸಿ, ಶೇ 54. 3% ರಷ್ಟು ಮತಗಳನ್ನು ಗಳಿಸಿದೆ. ಆದರೆ, 2017 ರ ನಗರಸಭೆ ಚುನಾವಣೆಯಲ್ಲಿ ಶೇ 26 ರಷ್ಟು ಮತಗಳು ಮತ್ತು ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಶೇ 18 ರಷ್ಟು ಮತಗಳನ್ನು ಅದು ಗಳಿಸಿದ್ದು ನೀರಸ ಪ್ರದರ್ಶನ ತೋರಿದೆ. ಇದು ಎದುರಾಳಿ ಪಕ್ಷಗಳ ಪಾಲಿಗೆ ಆಶಾದಾಯಕ ಬೆಳವಣಿಗೆ ಆಗಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳು ಬಿಜೆಪಿ ಪಾಲಾದವು. ಆದರೂ 2015 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾದ ನಿರಾಶಾದಾಯಕ ಸ್ಥಿತಿ ಎದುರಾಯಿತು. ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದ್ದರೂ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಚಿತ್ತ ಬದಲಾಗಿದ್ದಕ್ಕೆ ಇದು ಸಾಕ್ಷಿ. ಇನ್ನು ಅಂದಿನ ಜಿದ್ದಾಜಿದ್ದಿನ ಕಣದಲ್ಲಿ ಮತದಾರರು ಕಾಂಗ್ರೆಸ್ಸನ್ನು ಕಡೆಗಣಿಸಿದ್ದರು. ಈ ಆತಂಕ ಪಕ್ಷಕ್ಕೆ ಇದೆ.

" ನಾವು ಮೊದಲ ದರ್ಜೆ ಪ್ರಜೆಗಳು, ಆದರೂ ಮೂರನೇ ದರ್ಜೆ ಸರ್ಕಾರದ ಅಡಿಯಲ್ಲಿ ನಲಗುತ್ತಿದ್ದೇವೆ." ಎಂಬ ಘೋಷಣೆಯೊಂದಿಗೆ ಕೇಜ್ರಿವಾಲ್ ಎಎಪಿ ಸ್ಥಾಪಿಸಿದರು. ಆಡಳಿತ ಯಂತ್ರದ ಭ್ರಷ್ಟಾಚಾರ ತೊಡೆದು ಹಾಕುವುದರ ಸಂಕೇತ ಎಂಬಂತೆ ಅವರು ಪೊರಕೆಯನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಬಳಸಿದರು. ಬಳಿಕ 2013 ರಲ್ಲಿ ನಡೆದ ಚುನಾವಣೆ ವೇಳೆ ಬೇರೆ ಪಕ್ಷಗಳನ್ನು ‘ಗುಡಿಸಿ ಹಾಕಿದರು’. ಪಕ್ಷ ಶೇ 29.5 ಮತಗಳೊಂದಿಗೆ 28 ​​ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಘಾತ ಉಂಟು ಮಾಡಿತು ಮತ್ತು ಕಾಂಗ್ರೆಸ್​ನ ಬಾಹ್ಯ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನ ಲೋಕಪಾಲ್ ಮಸೂದೆ ಕುರಿತಂತೆ ಕೇಂದ್ರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಏಳು ವಾರಗಳಲ್ಲಿ ಕೇಜ್ರಿವಾಲ್ ಅಧಿಕಾರ ತ್ಯಜಿಸಿದರು. 2015 ರಲ್ಲಿ ಭಾರಿ ಬಹುಮತದೊಂದಿಗೆ ಎಎಪಿಯನ್ನು ಜನತೆ ಮತ್ತೆ ಅಧಿಕಾರಕ್ಕೆ ತಂದಿತು. ತಮ್ಮ ಪಕ್ಷದ ಹೆಜ್ಜೆ ಗುರುತನ್ನು ರಾಷ್ಟ್ರಮಟ್ಟದಲ್ಲಿ ಮೂಡಿಸಲು ಕೇಜ್ರಿವಾಲ್ ನಡೆಸಿದ ವಿಫಲ ಯತ್ನ ಎಲ್ಲರಿಗೂ ತಿಳಿದಿದೆ. ಪಂಜಾಬ್ ಹೊರತುಪಡಿಸಿದರೆ, ಇತರೆ ರಾಜ್ಯಗಳಲ್ಲಿ ಪಕ್ಷದ ಮತಗಳ ಪಾಲು ನೋಟಾಗಿಂತಲೂ ಕಡಿಮೆ ಇತ್ತು. ಇದು ರಾಷ್ಟ್ರಮಟ್ಟದಲ್ಲಿ ಎಎಪಿಯ ಸೀಮಿತ ಅಸ್ತಿತ್ವವನ್ನು ಸೂಚಿಸುತ್ತದೆ.

ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್ ಎಎಪಿ ಪ್ರಕರಣವನ್ನು ಬೆಂಬಲಿಸುವ ಮಹತ್ವದ ತೀರ್ಪು ನೀಡಿತು. ಅಧಿಕಾರ ಹಂಚಿಕೆ ಕುರಿತಂತೆ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ ಮಂತ್ರಿಮಂಡಲದ ಸಲಹೆ ಪಾಲಿಸುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸ್ಪಷ್ಟ ಸೂಚನೆ ನೀಡಿತು. ಎಎಪಿ ಆಡಳಿತದಲ್ಲಿ ಯಾವುದೇ ಪ್ರಗತಿ ಕಾರ್ಯ ನಡೆದಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಶೀಲಾ ದೀಕ್ಷಿತ್ ಆಳ್ವಿಕೆಯಲ್ಲಿ ಸಾಧಿಸಿದ ಅಭಿವೃದ್ಧಿ ಉಳಿದುಕೊಂಡಿಲ್ಲ ಎಂದು ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಆದರೂ, ‘ಅಚ್ಚೆ ಬೀತೆ ಪಾಂಚ್ ಸಾಲ್ - ಲಗೆ ರಾಹೋ ಕೇಜ್ರಿವಾಲ್’’ (ಉತ್ತಮ ಆಡಳಿತ ಐದು ವರ್ಷಗಳಲ್ಲಿ - ಕೇಜ್ರೀವಾಲ್ ಮುನ್ನಡೆಯುತ್ತಿರಲಿ) ಎಂಬ ಘೋಷಣೆಯೊಂದಿಗೆ ಆತ್ಮವಿಶ್ವಾಸದ ಹೆಜ್ಜೆ ಇರಿಸುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ, ಪ್ರಸಿದ್ಧ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ್ದರೂ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ವಿಫಲ ಆಯಿತು. ಆದರೂ ಈಗಾಗಲೇ ಗಳಿಸಿರುವ ಶೇ 34ರಷ್ಟು ಮತ ಹಂಚಿಕೆಗೆ ಶೇ 7 % ರಷ್ಟು ಮತದಾರರು ಹೆಚ್ಚುವರಿ ಬೆಂಬಲ ಸೂಚಿಸಿದರೆ ಅದು ಗೆಲುವಿಗೆ ಮುನ್ನುಡಿ ಬರೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಕೇಜ್ರಿವಾಲ್ ಅವರಿಗೆ ಪರ್ಯಾಯ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದು ಬಿಜೆಪಿ ಮತ್ತು ಕಾಂಗ್ರೆಸ್​ಗೆ ಸಾಧ್ಯ ಆಗುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿರುವ ಎಎಪಿ ಕಳೆದ ಐದು ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಜನರಿಗೆ ತಿಳಿಸಿಕೊಡುವ ಮೂಲಕ ಚುನಾವಣೆಯಲ್ಲಿ ಜಯ ಗಳಿಸುವ ಯತ್ನ ನಡೆಸುತ್ತಿದೆ. 2015 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶೇ 9.7 % ರಷ್ಟು ಮತಗಳನ್ನು ಪಡೆದಿದ್ದು ಖಾತೆ ತೆರೆಯಲು ಕೂಡ ಸಾಧ್ಯ ಆಗಿರಲಿಲ್ಲ. ಆದರೂ, ಕಳೆದ ವರ್ಷದ ಲೋಕಸಭಾ ಚುನಾವಣೆಯ ಸಮಯದಲ್ಲಿ, ಏಳು ಕ್ಷೇತ್ರಗಳಲ್ಲಿ ಐದರಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಅದು ಗೆಲುವಿನ ನಿರೀಕ್ಷೆಯಲ್ಲಿ ಇದೆ.

ಶಿಕ್ಷಣ, ಆರೋಗ್ಯ, ವಿದ್ಯುತ್, ಕುಡಿಯುವ ನೀರು, ಸಾರಿಗೆ ಹಾಗೂ ಮಹಿಳಾ ಸುರಕ್ಷತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಕೇಜ್ರಿವಾಲ್ ಸರ್ಕಾರ ಇರಿಸಿದ್ದು ಹೆಜ್ಜೆ ಜನಪ್ರಿಯ ಆಗಿವೆ. ಪ್ರಸ್ತುತ ದೆಹಲಿಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇರುವಂತೆ ತೋರುತ್ತದೆ. ಬಿಜೆಪಿ, ಕೇಂದ್ರ ಮತ್ತು ದೆಹಲಿ ಎರಡರಲ್ಲೂ ಅಧಿಕಾರದಲ್ಲಿ ಇದೆ. ದೆಹಲಿಯ 1,731 ಅನಧಿಕೃತ ಕಾಲೋನಿಗಳನ್ನು ಸಕ್ರಮಗೊಳಿಸಿದ ನಡೆ ಬಗ್ಗೆ ಬಿಜೆಪಿ ಹೇಳಿಕೊಂಡರೆ, ಆ ಕಾಲೋನಿಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಿದ ಮನ್ನಣೆಗೆ ಎಎಪಿ ಪಾತ್ರವಾಗಿದೆ. ಐಎಎನ್‌ಎಸ್- ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಎಎಪಿ ಜಯಗಳಿಸುವ ಮುನ್ಸೂಚನೆ ದೊರೆತಿದೆ. ಆದರೆ ಜನರನ್ನು ಸೆಳೆಯುವ ಮೋದಿ ಅವರ ಸಾಮರ್ಥ್ಯ ಮತ್ತು ಕೇಜ್ರಿವಾಲ್ ಆಡಳಿತ ಪರವಾದ ಅಲೆಯ ನಡುವೆ ವಾಸ್ತವ ಸ್ಪರ್ಧೆ ಏರ್ಪಟ್ಟಿದೆ. ವಿವಿಧ ರಾಜ್ಯಗಳಲ್ಲಿ ಜನಪ್ರಿಯತೆ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ದೆಹಲಿಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಯಾವ ತಂತ್ರಗಳನ್ನು ಹೂಡಲಿದೆ ಎಂಬುದನ್ನು ಕಾದು ನೋಡಬೇಕು.

Please publish it ASAP & provide link
Struggles of Political Parties  
ETV Bharat Logo

Copyright © 2025 Ushodaya Enterprises Pvt. Ltd., All Rights Reserved.