ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ನವದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಅವರ ಜಾಮೀನು ಅರ್ಜಿಯನ್ನ ದೆಹಲಿ ಕೋರ್ಟ್ ತಿರಸ್ಕರಿಸಿದೆ.
ಶುಕ್ರವಾರ ತಡರಾತ್ರಿ ಜಾಮಾ ಮಸೀದಿ ಬಳಿ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ದರಿಯಾ ಗಂಜ್ ಪ್ರದೇಶದಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಗಲಭೆ, ಕಾನೂನುಬಾಹಿರ ಸಭೆ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
-
Bail plea of Bhim Army Chief, Chandrashekhar Azad dismissed by Tis Hazari Court. He has been sent to 14-day judicial custody. https://t.co/7e1OzzgA1U
— ANI (@ANI) December 21, 2019 " class="align-text-top noRightClick twitterSection" data="
">Bail plea of Bhim Army Chief, Chandrashekhar Azad dismissed by Tis Hazari Court. He has been sent to 14-day judicial custody. https://t.co/7e1OzzgA1U
— ANI (@ANI) December 21, 2019Bail plea of Bhim Army Chief, Chandrashekhar Azad dismissed by Tis Hazari Court. He has been sent to 14-day judicial custody. https://t.co/7e1OzzgA1U
— ANI (@ANI) December 21, 2019
ಬಳಿಕ ಚಂದ್ರಶೇಖರ್ ಅಜಾದ್ ಅವರು ತೀಸ್ ಹಜಾರಿ ಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಚಂದ್ರಶೇಖರ್ ಅಜಾದ್ರನ್ನ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಎಫ್‌ಐಆರ್‌ನಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಪ್ರಾರ್ಥನೆ ವೇಳೆ ಜಮಾ ಮಸೀದಿಯ ಹೊರಗೆ ಸುಮಾರು 4,000 ಜನರ ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಇವರ ಭಾಷಣದ ನಂತರ ಜಾಮಾ ಮಸೀದಿ ಮತ್ತು ಇಂಡಿಯಾ ಗೇಟ್ ಮಧ್ಯೆ ಸಾವಿರಾರು ಜನ ಜಮಾವಣೆಗೊಂಡರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.