ETV Bharat / bharat

ಸೋದರ ಸೊಸೆ ಕೊಂದ ದಂಪತಿ ಬಂಧಿಸಿದ ಪೊಲೀಸರು

author img

By

Published : Nov 3, 2020, 1:46 PM IST

ದಿನವೂ ಜಗಳ ಕಾಯುತ್ತಾಳೆ ಎಂದು ಸೋದರ ಸೊಸೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆಕೆಯ ಚಿಕ್ಕಪ್ಪನನ್ನು ನಂದ್ ನಗರದ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಕೊಲೆಗೆ ಸಹಾಯ ಮಾಡಿದ್ದ ಆತನ ಪತ್ನಿಯನ್ನು ಕಂಬಿ ಹಿಂದೆ ದೂಡಿದ್ದಾರೆ.

Delhi couple kills niece to hide rape attempt, arrested
ಸೋದರ ಸೊಸೆ ಕೊಂದ ದಂಪತಿ ಬಂಧಿಸಿದ ಪೊಲೀಸರು

ನವದೆಹಲಿ: ಸೋದರ ಸೊಸೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ನಂದ್ ನಗರದ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಈಶಾನ್ಯ ಡಿಸಿಪಿ ವೇದ ಪ್ರಕಾಶ್​ ಸೂರ್ಯ ಅವರು ಮಾಹಿತಿ ನೀಡಿದರು.

ಮಹಿಳೆಯ ಶವ ಪತ್ತೆಯಾದ ಕುರಿತು ಅಕ್ಟೋಬರ್ 25ರಂದು ನಮಗೆ ಕರೆ ಬಂತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಇದು ಕೊಲೆ ಎಂದು ಶಂಕಿಸಿದೆವು. ನಂತರ ಮೃತ ಮಹಿಳೆಯ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು ಎಂಬುದು ತಿಳಿದು ಬಂತು.

ಅದಾದ ಬಳಿಕ ಆಕೆಯ ಚಿಕ್ಕಮ್ಮನನ್ನು ಪ್ರಶ್ನಿಸಿದೆವು. ಆದರೆ, ಆಕೆ ಬಾಯಿ ಬಿಚ್ಚಲಿಲ್ಲ. ಚಿಕ್ಕಪ್ಪ ವಕೀಲ್ ಅವರು ಮನೆಯಲ್ಲಿಲ್ಲ ಎಂಬುದನ್ನು ಮಾತ್ರ ತಿಳಿಸಿದಳು. ಆತನನ್ನು ಅನುಮಾನಿಸಿ ತನಿಖೆ ಆರಂಭಿಸಿದೆವು. ಎರಡು ತಂಡಗಳನ್ನು ರಚಿಸಿ ಒಂದನ್ನು ಬಿಹಾರಕ್ಕೆ ಮತ್ತು ಇನ್ನೊಂದನ್ನು ಹೈದರಾಬಾದ್‌ಗೆ ಕಳುಹಿಸಿದೆವು. ಕೊನೆಗೆ ಬಿಹಾರದಲ್ಲಿ ಆರೋಪಿ ಪತ್ತೆಯಾದ.

ತಾವೇ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡ. ಹೆಂಡತಿ ಕೂಡ ಅದಕ್ಕಾಗಿ ಸಹಾಯ ಮಾಡಿದ್ದಾಳೆ ಎಂದು ತಿಳಿಸಿದ. ಮನೆಯಲ್ಲಿ ಹೆಚ್ಚು ಜಗಳ ಮಾಡುತ್ತಿದ್ದ ಕಾರಣ ಆಕೆಯನ್ನು ಕೊಂದೆವು. ಮೃತ ದೇಹವನ್ನು ಹಾಸಿಗೆಯಲ್ಲಿಟ್ಟು ನಿಮಗೆ ಕರೆ ಮಾಡಿದ್ದೆವು ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.