ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಸಾವನ್ನಪ್ಪಿದ ಪೌರಕಾರ್ಮಿಕನ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 1 ಕೋಟಿ ರೂ. ಪರಿಹಾರ ಚೆಕ್ ವಿತರಿಸಿದರು.
ಉತ್ತರ ದೆಹಲಿಯ ಮಂಜು ಕಾ ತಿಲ್ಲಾ ಪ್ರದೇಶದಲ್ಲಿದ್ದ ಪೌರಕಾರ್ಮಿಕ ರಾಜು ಅವರ ಮನೆಗೆ ಭೇಟಿ ನೀಡಿದ ಅವರು ಪರಿಹಾರ ಚೆಕ್ ನೀಡಿದರು.
ಬಳಿಕ ಮಾತನಾಡಿದ ಸಿಎಂ, 'ಜನ ಸೇವೆ ಮಾಡುವಾಗ ಅವರು ಸಾವನ್ನಪ್ಪಿದ್ದಾರೆ. ನಮ್ಮ ಕೋವಿಡ್ ವಾರಿಯರ್‌ಗಳ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದರು.
-
Delhi Chief Minister Arvind Kejriwal handovers a cheque of Rs 1 Crore to the family of Raju, a sanitation worker who died due to #COVID19 while carrying out his duties CM says, "He died while serving the people. We are proud of all such COVID warriors." pic.twitter.com/gcQGvI9QkU
— ANI (@ANI) August 21, 2020 " class="align-text-top noRightClick twitterSection" data="
">Delhi Chief Minister Arvind Kejriwal handovers a cheque of Rs 1 Crore to the family of Raju, a sanitation worker who died due to #COVID19 while carrying out his duties CM says, "He died while serving the people. We are proud of all such COVID warriors." pic.twitter.com/gcQGvI9QkU
— ANI (@ANI) August 21, 2020Delhi Chief Minister Arvind Kejriwal handovers a cheque of Rs 1 Crore to the family of Raju, a sanitation worker who died due to #COVID19 while carrying out his duties CM says, "He died while serving the people. We are proud of all such COVID warriors." pic.twitter.com/gcQGvI9QkU
— ANI (@ANI) August 21, 2020
ಕೊರೊನಾ ವೈರಸ್ ವಿರುದ್ಧದ ಸೇವೆಯಲ್ಲಿದ್ದಾಗಲೇ ಪೌರಕಾರ್ಮಿಕ ರಾಜುಗೆ ಸೋಂಕು ತಗುಲಿತ್ತು. ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ 30ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.