ETV Bharat / bharat

ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ: ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’ - Delhi-Haryana border

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಆರಂಭಿಸಿರುವ ‘ದೆಹಲಿ ಚಲೋ’ ತಡೆಯಲು ಹಲವೆಡೆ ಪೊಲೀಸರು ಸಜ್ಜಾಗಿದ್ದಾರೆ. ರೈತರು ಆಗಮಿಸಲಿರುವ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿ, ದೆಹಲಿ ತಲುಪದಂತೆ ತಡೆಯಲು ನಿಯೋಜನೆಗೊಂಡಿದ್ದಾರೆ.

delhi-chalo-farmers-protest from several areas
ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’
author img

By

Published : Nov 26, 2020, 9:29 AM IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂಧೆಗಳ ವಿರುದ್ಧ ರೈತರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದು, ವಿವಿಧೆಡೆಯಿಂದ ರೈತರು ‘ದೆಹಲಿ ಚಲೋ’ ಆರಂಭಿಸಿದ್ದಾರೆ.

ಕಳೆದೊಂದು ವಾರದ ಹಿಂದೆ ದೆಹಲಿ ಚಲೋ ನಡೆಸುವ ಕುರಿತು ಎಲ್ಲ ರೈತ ಸಂಘಟನೆಗಳು ಕರೆ ನೀಡಿದ್ದವು. ಈ ಹಿನ್ನೆಲೆ ದೆಹಲಿ ಹರಿಯಾಣ - ಹೆದ್ದಾರಿಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದು, ದೆಹಲಿವರೆಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ದೇಶದ ಎಲ್ಲೆಡೆಯಿಂದಲೂ ರೈತರು ದೆಹಲಿಗೆ ಆಗಮಿಸಲಿದ್ದು, ದೆಹಲಿಗೆ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಿಂದ ರೈತರು ಟ್ರ್ಯಾಕ್ಟರ್‌ ಮುಖಾಂತರ ಆಗಮಿಸಲಿದ್ದಾರೆ.‌ ಇಂದು ದೆಹಲಿಯಲ್ಲಿ ಜಮಾವಣೆ ಆಗಿ ನಂತರ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

  • Security heightened at Delhi-Faridabad border, in view of farmers' 'Delhi Chalo' protest march.

    Faridabad Police say, "We've clear instructions to not let any members of Bharatiya Kisan Union enter Delhi today and tomorrow. Police teams deployed at all important entry points." pic.twitter.com/QqwzF7Vxx5

    — ANI (@ANI) November 26, 2020 " class="align-text-top noRightClick twitterSection" data=" ">

ಹರಿಯಾಣದ 6 ಜಿಲ್ಲೆಗಳ ರೈತ ಸಂಘಗಳು, ಅಂದರೆ ಅಂಬಾಲಾ, ಪಂಚಕುಲ, ಯಮುನಾನಗರ್, ಕೈತಾಲ್, ಕರ್ನಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಗಳು ಅಂಬಾಲಾ ಕಂಟೋನ್ಮೆಂಟ್‌ನಲ್ಲಿರುವ ಮೋಡಾ ಮಂಡಿಯಲ್ಲಿ ಜಮಾಯಿಸಿ ದೆಹಲಿಗೆ ಮೆರವಣಿಗೆ ನಡೆಸಲಿವೆ.

  • Delhi: Heavy deployment of police personnel on the Singhu border (Delhi-Haryana border) in the anticipation of farmer's 'Delhi-Chalo' protests. Police also use drones to monitor situation pic.twitter.com/ev8Q2pDln7

ಈ ಹಿನ್ನೆಲೆ ದೆಹಲಿ - ಹರಿಯಾಣ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರೈತರ ಮೇಲೆ ಡ್ರೋನ್ ಕಣ್ಣಿಡಲಿದೆ. ಇದಲ್ಲದೇ ಹರಿಯಾಣದ ಕರ್ನಲ್ ಬಳಿಯೂ ಅಪಾರ ಸಂಖ್ಯೆ ರೈತರು ಜಮಾಯಿಸುವ ಸೂಚನೆ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ದೆಹಲಿ - ಫರಿದಾಬಾದ್​​​​​​​ನಲ್ಲಿ ಕಟ್ಟೆಚ್ಚರ

ಇಂದು ಮತ್ತು ನಾಳೆ ರೈತರು ದೆಹಲಿಗೆ ಮುತ್ತಿಗೆ ಹಾಕಲಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಭಾರತೀಯ ಕಿಸಾನ್ ಯುನಿಯನ್ ಸಂಘಟನೆಯ ಯಾರೊಬ್ಬರು ಒಳಬರದಂತೆ ತಡೆಯಲು ಪೊಲೀಸರ ನಿಯೋಜನೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದಲ್ಲೂ ಪ್ರತಿಭಟನೆ ಬಿಸಿ

ಲೆಫ್ಟ್​ ಟ್ರೇಡ್​ ಯುನಿಯನ್​​​​​​​ ಸಂಘಟನೆಯು ಕೃಷಿ ಮಸೂದೆಗಳ ವಿರೋಧಿಸಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದೆ. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟಿಸಲು ಸಂಘಟನೆ ನಿರ್ಧರಿಸಿದೆ. ಪೊಲೀಸರ ಅಂದಾಜಿನ ಪ್ರಕಾರ, ನವೆಂಬರ್ 26 ರಂದು ನಡೆಯಲಿರೋ ತಮ್ಮ 'ದೆಹಲಿ ಚಲೋ' ಪ್ರತಿಭಟನೆಗಾಗಿ ಪಂಜಾಬ್‌ನಿಂದ ಸುಮಾರು 2,00,000 ರೈತರು ದೆಹಲಿಗೆ ತೆರಳಲಿದ್ದಾರೆ.

ಯುನೈಟೆಡ್ ಫಾರ್ಮರ್ಸ್ ಫ್ರಂಟ್​​​​​ನ ಭಾಗವಾದ 33 ಅಂಗಸಂಸ್ಥೆಗಳ 470ಕ್ಕೂ ಹೆಚ್ಚು ರೈತ ಸಂಘಗಳು ನವೆಂಬರ್ 26 ರಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಅನಿರ್ದಿಷ್ಟ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ತಮಗೆ ಪ್ರತಿರೋಧ ಒಡ್ಡುತ್ತಿರುವುದಕ್ಕೆ ಪ್ರತಿಭಟನೆ ನಡೆಸಿದ ರೈತರು ದೆಹಲಿಯತ್ತ ಪ್ರಯಾಣಿಸಲು ಅನುಮತಿ ನಿರಾಕರಿಸಿದರೆ ದೆಹಲಿಗೆ ಹೋಗುವ ಎಲ್ಲ ರಸ್ತೆಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ: ಪಂಜಾಬ್​ - ಹರಿಯಾಣ ಗಡಿಯಲ್ಲಿ ಪೊಲೀಸರ ನಿಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.