ETV Bharat / bharat

ಉಸಿರುಗಟ್ಟಿಸುತ್ತಿರುವ ದೆಹಲಿಯ ಮಾಲಿನ್ಯ.. ನರಕವೇ ಉತ್ತಮವೆಂದ ಸುಪ್ರೀಂಕೋರ್ಟ್​ - ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವಾದ ಕೃಷಿ ಅವಶೇಷ

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆತಂಕ ಮೂಡಿಸುತ್ತಿರುವ ವಾಯುಮಾಲಿನ್ಯದ ತೀವ್ರತೆಯ ಕುರಿತು ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ. ಸೂಕ್ತ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೆಹಲಿಗಿಂತ ನರಕವೇ ಉತ್ತಮವಾಗಿದೆ ಎಂದು ಕೋರ್ಟ್‌ ವ್ಯಂಗ್ಯವಾಡಿದೆ.

Delhi air pollution better Hell talk supreem court Appropriate action
ಉಸಿರುಗಟ್ಟಿಸುತ್ತಿರುವ ದೆಹಲಿಯ ಮಾಲಿನ್ಯ: ನರಕವೇ ಉತ್ತಮವೆಂದ ಸುಪ್ರೀಂ ಕೋರ್ಟ್​
author img

By

Published : Dec 3, 2019, 5:43 PM IST

ಬೆಂಗಳೂರು: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆತಂಕ ಮೂಡಿಸುತ್ತಿರುವ ವಾಯುಮಾಲಿನ್ಯದ ತೀವ್ರತೆಯ ಕುರಿತು ಸುಪ್ರೀಂಕೋರ್ಟ್‌ನ ಚಾಟಿ ಬೀಸಿದೆ. ಸೂಕ್ತ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೆಹಲಿಗಿಂತ ನರಕವೇ ಉತ್ತಮವಾಗಿದೆ ಎಂದು ವ್ಯಂಗ್ಯವಾಡಿದೆ.

ಕೃಷಿ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ರ ಕ್ರಮ ತೆಗೆದುಕೊಳ್ಳದ ಪಂಜಾಬ್ ಮತ್ತು ಹರಿಯಾಣದ ಪ್ರಧಾನ ಕಾರ್ಯದರ್ಶಿಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯ ಪ್ರಶ್ನಿಸಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು "ನೀವು ಈ ರೀತಿ ಜನರಿಗೆ ಚಿಕಿತ್ಸೆ ನೀಡಬಹುದೆ ಮತ್ತು ಮಾಲಿನ್ಯದಿಂದಾಗಿ ಅವರ ಸಾವಿಗೆ ಅನುಮತಿಸಬಹುದೆ?" ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್‌ನ ಈ ಹೇಳಿಕೆಯು ಮಾಲಿನ್ಯಕ್ಕೆ ತುತ್ತಾದ ಸಂತ್ರಸ್ತರ ಸಂಕಟದ ಪ್ರತಿಬಿಂಬವಾಗಿದೆ. ಕೇಜ್ರಿವಾಲ್ ಸರ್ಕಾರ ಇತ್ತೀಚೆಗೆ 'ವೈದ್ಯಕೀಯ ತುರ್ತುಸ್ಥಿತಿ' ಘೋಷಿಸಿದೆ ಮತ್ತು ನಗರದಲ್ಲಿ ಕಟ್ಟಡ ಸೇರಿದಂತೆ ಎಲ್ಲಾ ಬಗೆಯ ನಿರ್ಮಾಣ ಮತ್ತು ಉರುಳಿಸುವ ಚಟುವಟಿಕೆಗಳನ್ನು ನಿಷೇಧಿಸಿದೆ. ಹರಿಯಾಣ ಸರ್ಕಾರ ಬೆಳೆಯ ಅವಶೇಷಗಳನ್ನು ಸುಡುತ್ತಿದ್ದ ಹಳ್ಳಿಗಳನ್ನು ಗುರುತಿಸಿದೆ ಮತ್ತು ಬಾಡಿಗೆ ಉಳುಮೆ ಯಂತ್ರೋಪಕರಣಗಳ ವಿತರಣೆಯನ್ನು ಕೈಗೆತ್ತಿಕೊಂಡಿದೆ.

ರೈತರಿಗೆ ಹಣಕಾಸಿನ ನೆರವು ನೀಡುವ ತನ್ನ ಆಶ್ವಾಸನೆಯನ್ನು ಪೂರೈಸುವಂತೆ ಪಂಜಾಬ್‌ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಬೆಳೆ ತ್ಯಾಜ್ಯವನ್ನು ಉಳುಮೆ ಮಾಡುವುದು ಮತ್ತು ಅದನ್ನು ಭೂಮಿಯಲ್ಲಿಯೇ ಬಿಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಮತ್ತು ಲಕ್ಷಾಂತರ ಸೂಕ್ಷ್ಮಜೀವಿಗಳು ನಾಶವಾಗದಂತೆ ರಕ್ಷಿಸುತ್ತದೆ ಎಂದು ರೈತರಿಗೆ ತಿಳಿಸುವಲ್ಲಿ ಈ ಎಲ್ಲ ಸರ್ಕಾರಗಳು ವಿಫಲವಾಗಿವೆ.

ಇದಕ್ಕಾಗಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ಸರ್ಕಾರಗಳನ್ನು ಸುಪ್ರೀಂಕೋರ್ಟ್‌ ಟೀಕಿಸಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಪಳೆಯುಳಿಕೆ ಆಧಾರಿತ ಇಂಧನಗಳನ್ನು ಈಗಲಾದರೂ ಪರ್ಯಾಯಗಳಿಗೆ ಬದಲಾಯಿಸುವ ಸಾಧ್ಯತೆಯ ಮೇಲೆ ಗಮನಹರಿಸಬೇಕು ಮತ್ತು ಅದರಲ್ಲಿ ರೈತರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವಾದ ಕೃಷಿ ಅವಶೇಷ(ಕೂಳೆ) ಸುಡುವುದನ್ನು ನಿಷೇಧಿಸಬೇಕು ಎಂದು ಆದೇಶಿಸಿತು.

ಆದರೆ, ಸರ್ಕಾರದಿಂದ ಯಾವುದೇ ಕ್ರಮ ಜರುಗಿಸಿರಲಿಲ್ಲ. ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಕೂಳೆಗಳನ್ನು ಸುಡುವುದನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದರೂ ವಾಸ್ತವದಲ್ಲಿ ಇದನ್ನು ರೈತರು ಮುಂದುವರೆಸಿದ್ದಾರೆ. ಯಂತ್ರೋಪಕರಣಗಳ ಮೂಲಕ ಟನ್‌ಗಟ್ಟಲೇ ಭತ್ತದ ಹೊಟ್ಟುಗಳನ್ನು ವಿಲೇವಾರಿ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪರಿಸರ ಮತ್ತು ರಾಷ್ಟ್ರೀಯ ಹಾನಿಯನ್ನು ತಡೆಗಟ್ಟುವ ಪ್ರಯತ್ನಗಳ ಮೊದಲ ಹೆಜ್ಜೆಯಾಗಿ ಕೇಂದ್ರವು ಪ್ರತ್ಯೇಕ ನಿಧಿ ಸ್ಥಾಪಿಸಬೇಕು.

ದೇಶದಲ್ಲಿ ವಾರ್ಷಿಕವಾಗಿ ಹತ್ತು ಲಕ್ಷ ಟನ್‌ನಷ್ಟು ಬೆಳೆ ತ್ಯಾಜ್ಯಗಳನ್ನು ಸುಡಲಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಈ ಪ್ರಮಾಣದಲ್ಲಿ ಅರ್ಧಕ್ಕಿಂತ ಅಧಿಕ ಪಾಲು ಪಡೆದಿವೆ. ಆದ್ದರಿಂದ ತುರ್ತು ಕ್ರಮ ಅಲ್ಲಿಂದ ಪ್ರಾರಂಭವಾಗಬೇಕು. ಭತ್ತದ ಕೂಳೆ ಸುಡುವಿಕೆಯಿಂದ ಉಂಟಾಗುವ ವಾಯುಮಾಲಿನ್ಯದ ಸಮಸ್ಯೆ ಮತ್ತು ಗ್ಯಾಸ್ ಚೇಂಬರ್ ತರಹದ ಪರಿಸರದಲ್ಲಿ ವಾಸಿಸುವ ಜನಸಾಮಾನ್ಯರ ಪರಿಸ್ಥಿತಿ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿ ವಾಯುಮಾಲಿನ್ಯ ಸಂಬಂಧಿತ ಸಾವುಗಳು ದೆಹಲಿಗಿಂತ ಹೆಚ್ಚು.

ದೆಹಲಿ, ಹರಿಯಾಣ, ಬಾಗಪತ್, ಘಾಜಿಯಾಬಾದ್, ಹಾಪುರ್, ಲಕ್ನೋ, ಮೊರಾದಾಬಾದ್, ನೋಯ್ಡಾ, ಕಾನ್ಪುರ್ ಮತ್ತು ಸಿರ್ಸಾಗಳ ವಾಯು ಗುಣಮಟ್ಟದ ಸೂಚ್ಯಂಕ ಈ ತಿಂಗಳು ದೆಹಲಿಗಿಂತ ನಿಕೃಷ್ಟವಾಗಿವೆ. ಮುಕ್ಕಾಲು ಭಾಗದಷ್ಟು ನಗರಗಳು ಮತ್ತು ಪಟ್ಟಣಗಳು ​​ಹೊಗೆಯನ್ನು ಹೊರಬಿಡುತ್ತಿದ್ದು, ಇದು ದೇಶಾದ್ಯಂತದ ಮಾಲಿನ್ಯ ನಿಯಂತ್ರಣ ಮಂಡಳಿಗಳ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರಗಳನ್ನು ಪ್ರತಿಬಿಂಬಿಸುತ್ತದೆ.

ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಮೂರು ತಿಂಗಳಲ್ಲಿ ಮುಚ್ಚಲು ಎನ್‌ಪಿಟಿಯ ಸಿಪಿಸಿಬಿ (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ಗೆ ನೀಡಿದ್ದ ಗಡುವು ಅಕ್ಟೋಬರ್‌ನಲ್ಲಿ ಕೊನೆಗೊಂಡಿದೆ. ನಿಯಮಗಳ ಉಲ್ಲಂಘನೆ ಮತ್ತು ಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳ ಕೊರತೆಯು ನಮ್ಮ ದೇಶದಲ್ಲಿ ದೆಹಲಿಯಂತಹ ಮಾಲಿನ್ಯಯುತ ನಗರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಜಲ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸದಿದ್ದರೆ, ಏಷ್ಯಾ-ಪೆಸಿಫಿಕ್ ಪ್ರದೇಶವು ಹವಾಮಾನದಲ್ಲಿನ ಬದಲಾವಣೆಯ ಅಪಾಯ ತಲುಪುತ್ತದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್ 25 ವರ್ಷಗಳ ಹಿಂದೆಯೇ ಎಚ್ಚರಿಸಿತ್ತು. ಅಂತಹ ವಿವೇಕಯುತ ಸಲಹೆಗೆ ತೋರಿದ ಅಗೌರರವೇ ಈಗಿನ ಈ ದುರವಸ್ಥೆಗೆ ಕಾರಣವಾಗಿದೆ. ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ವಾಯುಮಾಲಿನ್ಯದಿಂದಾಗಿ ನಾಗರಿಕರ ಜೀವಿತಾವಧಿ ಎರಡು ವರ್ಷಗಳಿಗಿಂತ ಕಡಿಮೆಯಾಗಿದೆ.

ದೇಶಾದ್ಯಂತ ಕಲುಷಿತ ಗಾಳಿಯು ಇಂದು ಪ್ರತಿ ಎಂಟು ಸಾವುಗಳಲ್ಲಿ ಒಂದಕ್ಕೆ ಕಾರಣವಾಗಿದೆ. ವಾಯುಮಾಲಿನ್ಯದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಮಿಲಿಯನ್‌ಗೆ ಸರಾಸರಿ ಸಾವು 64 ಆಗಿದ್ದರೆ, ಭಾರತದಲ್ಲಿ ಇದು 134 ಆಗಿದೆ. ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಯನ್ನು(ಎನ್‌ಕೆಎಪಿ) ಜನವರಿಯಲ್ಲಿ ಘೋಷಿಸಲಾಗಿದ್ದು, ವಿಶೇಷ ಯೋಜನೆಗಾಗಿ 102 ನಗರಗಳನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಜಂಟಿ ಪ್ರಯತ್ನದಿಂದ ಮಾಲಿನ್ಯದ ವಿರುದ್ಧದ ಹೋರಾಟ ಹೆಚ್ಚಾಗುತ್ತದೆ ಎಂಬ ಭರವಸೆ ಕ್ರಮೇಣ ಮೂಡುತ್ತಿದೆ.

ಮೂಸಿ ನದಿಯ ಮಾಲಿನ್ಯದ ಬಗ್ಗೆ ಹೈಕೋರ್ಟ್‌ನ ಪ್ರತಿಕ್ರಿಯೆ ಮತ್ತು ದೆಹಲಿ ಮಾಲಿನ್ಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪುಗಳು ಪರಿಸ್ಥಿತಿಯ ಪ್ರಾಮುಖ್ಯತೆ ಮತ್ತು ವಾಯು ಮತ್ತು ಜಲ ಮಾಲಿನ್ಯದಿಂದಾಗಿ ಭವಿಷ್ಯದ ರಾಷ್ಟ್ರೀಯ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತಿವೆ. ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಮತ್ತು ವಾಹನಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ನೆರೆಯ ಚೀನಾ ಈ ಸಮಸ್ಯೆಯನ್ನು ಬಹಳವಾಗಿ ಪರಿಹರಿಸಿದೆ.

ಸ್ವಚ್ಛತೆಯನ್ನು ತಮ್ಮ ಸಂಸ್ಕೃತಿಯನ್ನಾಗಿ ಮಾಡುವ ಮತ್ತು ತಮ್ಮ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ದೇಶಗಳು ಜಾಗತಿಕ ಹವಾಮಾನ ಸಂರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ಕೋಪನ್ ಹ್ಯಾಗನ್ ಬೈಸಿಕಲ್‌ಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸಿದರೆ, ಜಾಂಬಿ (ಇಂಡೋನೇಷ್ಯಾ) ನಂತಹ ನಗರಗಳು ಸಸ್ಯಗಳ ಬೆಳವಣಿಗೆಗೆ ಮತ್ತು ತ್ಯಾಜ್ಯದಿಂದ ಮೀಥೇನ್ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿವೆ. ಹಿಂದಿನ ಅನುಭವಗಳಿಂದ ಕಲಿತ ಪಾಠಗಳು, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯ, ಮುಖ್ಯವಾಗಿ, ಭವಿಷ್ಯದ ಪೀಳಿಗೆಯ ಕಲ್ಯಾಣಕ್ಕಾಗಿ ಕಾಳಜಿಯು ಮಾತ್ರ ವಾತಾವರಣವನ್ನು ಉಳಿಸುತ್ತದೆ ಮತ್ತು ಭೂಮಿಯನ್ನು ವಾಸಿಸಲು ಉತ್ತಮ ಸ್ಥಳವಾಗಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.