ಡೆಹ್ರಾಡೂನ್: ಜೈಲಿನಿಂದ ಬಿಡುಗಡೆಯಾದ ಕಳ್ಳ(ಮಾಜಿ ಕಳ್ಳ)ನಿಗೆ ಡೆಹ್ರಾಡೂನ್ ಪೊಲೀಸರು ವಿದ್ಯಾಭ್ಯಾಸ ಮಾಡಲು ಸಹಕರಿಸುತ್ತಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಚಿತ್ ಕಳ್ಳತನ ಪ್ರಕರಣಡಿ ಬಂಧಿತನಾಗಿ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದ. ನ್ಯಾಯಾಲಯದ ಆದೇಶದ ನಂತರ ಆರು ತಿಂಗಳ ಕಾಲ ಪೆರೋಲ್ನಲ್ಲಿ ಹೊರ ಬಂದ 700 ಕೈದಿಗಳ ಪೈಕಿ ಅರ್ಚಿತ್ ಕೂಡ ಒಬ್ಬನಾಗಿದ್ದ.
ಅರ್ಚಿತ್ ಮನೆಗೆ ಹಿಂದಿರುಗಿದಾಗ ಆತನ ಕುಟುಂಬಸ್ಥರು ಆತನನ್ನು ಮನೆಗೆ ಕರೆದುಕೊಳ್ಳಲು ನಿರಾಕರಿಸಿದ್ದರು. ಬಳಿಕ ಅರ್ಚಿತ್ ರಾಯ್ಪುರ್ ಪೊಲೀಸ್ ಠಾಣೆಗೆ ಬಂದಿದ್ದು, ಠಾಣೆಯ ಇನ್ಚಾರ್ಜ್ ಆತನಿಗೆ ನೆಲೆಸಲು ವ್ಯವಸ್ಥೆ ಕಲ್ಪಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈತ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿ ಜನರಿಗೆ ಪಡಿತರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡನೆಂದು ತಿಳಿಸಿದರು.
ಈತನ ಬದಲಾದ ನಡವಳಿಕೆಯನ್ನು ಗಮನಿಸಿ ಈತನ ಜೈಲು ಶಿಕ್ಷೆಯನ್ನು ಹಿಂತೆಗೆದುಕೊಳ್ಳಲಾಯಿತು. ಪೊಲೀಸ್ ಸಿಬ್ಬಂದಿ ಸದ್ಯ ಈತನಿಗೆ ವಕೀಲ ವೃತ್ತಿ ವಿದ್ಯಾಭ್ಯಾಸ ಮಾಡಲು ಸಹಾಯ ಹಸ್ತ ಚಾಚಿದ್ದಾರೆ.
ಹಿನ್ನೆಲೆ: ಅರ್ಚಿತ್ ಡೆಹ್ರಾಡೂನ್ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ. ಈತ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್ಗಾಗಿ ಹಣ ಇಲ್ಲದ ಸಂದರ್ಭದಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದ.