ಲಡಾಕ್: ಗಡಿಯಲ್ಲಿ ಮೇಲಿಂದ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಯೋಧರು ಸಖತ್ ಆಗಿ ತಿರುಗೇಟು ನೀಡಿ, ಉಗ್ರರ ಲಾಂಚ್ಪ್ಯಾಡ್ಗಳ ಮೇಲೆ ದಾಳಿ ನಡೆಸಿತ್ತು. ಇದಾದ ಮರುದಿನವೇ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ್ ಕಾಶ್ಮೀರಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಶಿಯೋಕ್ನಲ್ಲಿ ಭಾರತೀಯರಿಂದ ನಿರ್ಮಾಣಗೊಂಡಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಲೋಕಾರ್ಪಣೆಗೊಳಿಸಿದ್ದಾರೆ.
ವಿಶ್ವದ ಅತ್ಯುನ್ನತ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನ ಡಾರ್ಬಾಕ್ ಹಾಗೂ 16 ಸಾವಿರ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿರುವ ದೌಲೆತ್ ಬೇಗ್ ಒಲ್ಡೈ ಪ್ರದೇಶದ 225 ಕಿಲೋ ಮೀಟರ್ ರಸ್ತೆ ಮಾರ್ಗವನ್ನು ಈ ಸೇತುವೆ ಸಂಪರ್ಕಿಸಲಿದೆ. ಅಲ್ಲದೇ ಈ ರಸ್ತೆ ಕಾರಕೋರಂ ಪರ್ವತ ಶ್ರೇಣಿ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ. ಚೀನಾ ಗಡಿ ಪ್ರದೇಶದಲ್ಲೇ ನಿರ್ಮಾಣಗೊಂಡಿರುವ ಈ ಸೇತುವೆಗೆ ರಕ್ಷಣಾ ಸಚಿವರಿಂದ ಲೋಕಾರ್ಪಣೆಗೊಂಡಿದೆ.
ಇದೇ ವೇಳೆ, ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಸ್ಥಿತಿ-ಗತಿ ಬಗ್ಗೆ ರಾಜನಾಥ್ ಸಿಂಗ್ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಮಾತನಾಡಿದ ರಾಜನಾಥ್ ಸಿಂಗ್,ಸಿಯಾಚಿನ್ ಪ್ರದೇಶ ಇದೀಗ ಪ್ರವಾಸಿಗರಿಗಾಗಿ ಓಪನ್ ಆಗಿದೆ ಎಂದು ತಿಳಿಸಿದರು.