ನವದೆಹಲಿ: ಭಾರತ - ಚೀನಾ ಗಡಿ ವಿವಾದದ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಮತ್ತು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಂತರ ರಕ್ಷಣಾ ಸಚಿವರು ಲಡಾಖ್ಗೆ ತೆರಳಿ ಪರಿಸ್ಥಿತಿ ಪರಿಶೀಲಿಸಿರುವುದು ಕುತೂಹಲ ಕೆರಳಿಸಿದೆ.
ಗಾಲ್ವಾನ್ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತ-ಚೀನಾ ಗಡಿ ವಿವಾದದ ಬಳಿಕ ಗಡಿಯಲ್ಲಿ ಸೇನಾ ಚಟುವಟಿಕೆಗಳು ಚುರುಕುಗೊಂಡಿವೆ. ಜುಲೈ 3 ರಂದು ಪ್ರಧಾನಿ ಲಡಾಖ್ಗೆ ದಿಢೀರ್ ಭೇಟಿ ನೀಡಿ ಸೇನಾ ಪಡೆಗಳಿಗೆ ಧೈರ್ಯ ತುಂಬಿದ್ದರು. ಇದೀಗ ರಕ್ಷಣಾ ಸಚಿವರು ಲಡಾಖ್ನ ಲೇಹ್‌ಗೆ ಭೇಟಿ ನೀಡಿದ್ದು, ಇವರೊಂದಿಗೆ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಕೂಡ ಆಗಮಿಸಿದ್ದಾರೆ. ಪೂರ್ವ ಲಡಾಖ್ನಲ್ಲಿ ಉಲ್ಬಣಿಸಿರುವ ಸಮಸ್ಯೆ ಮಧ್ಯೆ ಸವಿಸ್ತಾರವಾಗಿ ಅಲ್ಲಿನ ಭದ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ರಾಜನಾಥ್ ಸಿಂಗ್ ಸೇನಾಧಿಕಾರಿಗಳ ಜತೆ ಚರ್ಚೆ ನಡೆಸಿದರು.
-
Leaving for Leh on a two day visit to Ladakh and Jammu-Kashmir. I shall be visiting the forward areas to review the situation at the borders and also interact with the Armed Forces personnel deployed in the region. Looking forward to it.
— Rajnath Singh (@rajnathsingh) July 17, 2020 " class="align-text-top noRightClick twitterSection" data="
">Leaving for Leh on a two day visit to Ladakh and Jammu-Kashmir. I shall be visiting the forward areas to review the situation at the borders and also interact with the Armed Forces personnel deployed in the region. Looking forward to it.
— Rajnath Singh (@rajnathsingh) July 17, 2020Leaving for Leh on a two day visit to Ladakh and Jammu-Kashmir. I shall be visiting the forward areas to review the situation at the borders and also interact with the Armed Forces personnel deployed in the region. Looking forward to it.
— Rajnath Singh (@rajnathsingh) July 17, 2020
ಭೇಟಿಗೂ ಮೊದಲು ಟ್ವೀಟ್ ಮಾಡಿದ್ದ ಸಿಂಗ್, ಲಡಾಖ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯಲ್ಲಿ ಲೇಹ್‌ಗೆ ತೆರಳುತ್ತಿದ್ದೇನೆ. ಗಡಿಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ನಮ್ಮ ಸಶಸ್ತ್ರ ಪಡೆಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದರು.
ಲೇಹ್ನ ಸ್ಟಕ್ನಾ ಮುಂಚೂಣಿ ಪ್ರದೇಶಕ್ಕೆ ತೆರಳಿದ ರಾಜನಾಥ್ ಸಿಂಗ್ ಪಿಕಾ ಮೆಷಿನ್ ಗನ್ ಕೈಗೆತ್ತಿಕೊಂಡರು. ಸೇನಾಧಿಕಾರಿಗಳಿಂದ ಅದರ ಕಾರ್ಯವೈಖರಿಯನ್ನು ತಿಳಿದುಕೊಂಡರು. ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಪ್ಯಾರಾ ಕಮಾಂಡೋಗಳ ಕೌಶಲ್ಯಗಳನ್ನು ರಾಜನಾಥ್ ಸಿಂಗ್ ವೀಕ್ಷಿಸಿದರು.
ರಾಜನಾಥ್ ಸಿಂಗ್, ಬಿಪಿನ್ ರಾವತ್ ಮತ್ತು ನರವಣೆ ಅವರ ಸಮಕ್ಷಮದಲ್ಲಿ ಭೂ ಸೇನೆ ತನ್ನ ಬಲಾಬಲ ಪ್ರದರ್ಶಿಸಿತು. ರಷ್ಯಾ ಮೂಲದ ಟಿ-90 ಯುದ್ಧ ಟ್ಯಾಂಕ್ ಮತ್ತು ಸಮರಾಂಗಣದಲ್ಲಿ ಪಾದರಸದಂತೆ ಚಲಿಸಬಲ್ಲ ಬಿಎಂಪಿ ಇನ್ಫೆಂಟ್ರಿ ಕೋಂಬಾಟ್ ವಾಹನಗಳ ಸಮರಾಭ್ಯಾಸವನ್ನು ರಕ್ಷಣಾ ಸಚಿವರು ಮತ್ತು ಸೇನಾ ಮಹಾದಂಡ ನಾಯಕರು ವೀಕ್ಷಿಸಿದರು.
ಜುಲೈ ಆರಂಭದಲ್ಲಿಯೇ ರಾಜನಾಥ್ ಸಿಂಗ್ ಲಡಾಖ್ ಭೇಟಿ ನಿಗದಿಯಾಗಿತ್ತು. ಆದರೆ, ಅಚ್ಚರಿ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಜುಲೈ 3ರಂದು ಲಡಾಖ್ಗೆ ತೆರಳಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಯೋಧರನ್ನು ಮಾತನಾಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಗಡಿ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧರ ಆರೋಗ್ಯ, ಯೋಗಕ್ಷೇಮವನ್ನೂ ವಿಚಾರಿಸಿದ್ದರು. ಚೀನಾ ಸೇನೆ ಹಿಂದಕ್ಕೆ ಸರಿದರೂ ಭಾರತ ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಸಮರ ವಿಮಾನವನ್ನು ನಿಯೋಜನೆ ಮಾಡಿದೆ.