ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಹಾಗೂ ಅಮೆರಿಕ - ಇರಾನ್ ನಡುವಣ ಬಿಕ್ಕಟ್ಟು ತಾತ್ಕಾಲಿಕ ಶಮನ ಆಗಿರುವ ಹಿನ್ನೆಲೆಯಲ್ಲಿ ಸತತವಾಗಿ ಏರಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆ ಆಗುತ್ತಿದೆ.
ಜನವರಿ 12 ರಿಂದ ಸತತವಾಗಿ ಸರಾಸರಿ 10 ಪೈಸೆಯಷ್ಟು ಕಳೆದು ಐದು ದಿನಗಳಿಂದ ಇಳಿಕೆ ಆಗಿದೆ. ಇದು ವಾಹನ ಸವಾರರನ್ನು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 10 ಪೈಸೆ ಇಳಿಕೆ ಆಗುವುದರೊಂದಿಗೆ 77.93 ರೂ.ಗೆ ನಿಗದಿಯಾಗಿದೆ. ನಿನ್ನೆ ಲೀಟರ್ ಪೆಟ್ರೋಲ್ಗೆ 40 ಪೈಸೆ ಇಳಿಕೆ ಆಗಿತ್ತು.
80 ರೂ, ಆಸುಪಾಸಿಗೆ ಬಂದಿದ್ದ ಪೆಟ್ರೋಲ್ ಬೆಲೆ ಮತ್ತೆ 78 ರೂ ಗಿಂತ ಕೆಳಗಿಳಿದಿದೆ. ಇನ್ನು ಡೀಸೆಲ್ ದರ ಲೀಟರ್ 72 ರ ಆಸುಪಾಸು ಇದ್ದದ್ದು, ಇಂದು 71.06 ರೂ. ಇಳಿಕೆ ಕಂಡಿದೆ.