ನವದೆಹಲಿ: ಸುಮಾರು 20,400ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಭಾರತದಿಂದ ಸ್ಥಳಾಂತರ ಮಾಡಲಾಗಿದೆ. ಈಗ ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆಸಿಕೊಳ್ಳುವ ಸಲುವಾಗಿ ಚಿಂತನೆ ನಡೆಸಲಾಗಿದೆ. ಭಾರತದಲ್ಲಿ ಕೊರೊನಾ ಪರಿಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಿ.ರವಿ ''ವಿವಿಧ ರಾಷ್ಟ್ರಗಳ ಸರ್ಕಾರಗಳಿಂದ ಈಗಾಗಲೇ ಕೋರಿಕೆಯಿದೆ. ನಾವು 20,473 ಮಂದಿಯನ್ನು ಈಗಾಗಲೇ ಅವರವರ ದೇಶಗಳಿಗೆ ಕಳಿಸಿದ್ದೇವೆ. ಇದೇ ಪ್ರಕ್ರಿಯೆಯ ಭಾಗವಾಗಿ ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರನ್ನೂ ಕರೆತರಬೇಕಾಗಿದೆ. ಭಾರತದಲ್ಲಿ ಕೊರೊನಾ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಸದ್ಯಕ್ಕೆ ಲಾಕ್ಡೌನ್ ಇರುವ ಕಾರಣದಿಂದ ಈ ಚರ್ಚೆ ಸರಿಯಾಗ ಉತ್ತರ ನೀಡಲು ಸಾಧ್ಯವಾಗುವುದಿಲ್ಲ ಎಂದರು
ಸರ್ಕಾರ ವಿದೇಶದಿಂದ ಭಾರತದ ಪ್ರಜೆಗಳು ಬಂದರೆ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಿದೆ. ನಮ್ಮ ರಾಯಭಾರಿಗಳು ಹೈ ಹೈಕಮೀಷನರ್ಗಳು ಎಲ್ಲ ರಾಷ್ಟ್ರಗಳಲ್ಲಿದ್ದು, ಅಲ್ಲಿನ ಭಾರತೀಯರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಇದರ ಜೊತೆಗೆ ವಿದೇಶಾಂಗ ಇಲಾಖೆ ಕೋವಿಡ್ ಕಂಟ್ರೋಲ್ ರೂಂಗಳನ್ನು ಆರಂಭಿಸಿದೆ. ಈ ಮೂಲಕ ಸಂಕಷ್ಟದಲ್ಲಿರುವವರಿಗೆ ಸರಿಯಾದ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಲೇರಿಯಾ ನಿರೋಧಕ ಮಾತ್ರೆಗಳಾದ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರಗಳ ಬಗ್ಗೆ ಮಾತನಾಡಿದ ಅವರು ಭಾರತದಲ್ಲೀಗ 3.28 ಕೋಟಿ ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರಗಳಿದ್ದು, ಹೆಚ್ಚಳವಿರುವ ಮಾತ್ರೆಗಳನ್ನು ರಫ್ತು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.