ನಾಗ್ಪುರ: ನಾಗ್ಪುರದಲ್ಲಿ ಯುವಕನೋರ್ವ ಇಬ್ಬರು ಸಹೋದರಿಯರಿಗೆ ಆಟಿಕೆ ಗನ್ನಿಂದ ಬೆದರಿಕೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ.
ಈ ಘಟನೆ ಧರಂಪೇಟ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ರೋಶನ್ ಖಂಡೇಕರ್ (24) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆತ ಪರಾರಿಯಾಗಿದ್ದು, ನಂತರ ಧಂತೋಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅಂಬಾಜಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುತ್ತಮುತ್ತಲಿನ ಸಿಸಿಟಿವಿಯಲ್ಲಿ ರೋಶನ್ ಕೃತ್ಯ ಸೆರೆಯಾಗಿದೆ. 2.5 ಲಕ್ಷ ರೂಪಾಯಿ ಸಾಲವಿದ್ದು, ಇದನ್ನು ತೀರಿಸಲು ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಇವರಿಬ್ಬರನ್ನು ಅಪಹರಿಸಿ ಹಣದ ಬೇಡಿಕೆ ಇಡಬೇಕೆಂದುಕೊಂಡು ಕೃತ್ಯ ಎಸಗಿರುವುದಾಗಿ ಖಂಡೇಕರ್ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.