ETV Bharat / bharat

ಇಡುಕ್ಕಿ ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 63ಕ್ಕೆ ಏರಿಕೆ - ಇಡುಕ್ಕಿ

ಆಗಸ್ಟ್​ 6ರಂದು ಕೇರಳದ ಇಡುಕ್ಕಿಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಮಣ್ಣಿನಡಿ ಸಿಲುಕಿರುವ ಉಳಿದ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Death toll rises to 63 in Idukki landslide
ಇಡುಕ್ಕಿ ಭೂಕುಸಿತ
author img

By

Published : Aug 20, 2020, 3:56 PM IST

ಇಡುಕ್ಕಿ: ಇಲ್ಲಿನ ಪೂತಕುಝಿ ನದಿ ದಂಡೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೇರಳದ ಇಡುಕ್ಕಿಯ ರಾಜಮಾಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಆಗಸ್ಟ್​ 6ರಂದು ಇಡುಕ್ಕಿಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಭೂಕುಸಿತ ಉಂಟಾಗಿತ್ತು. ನಿನ್ನೆಯವರೆಗೂ 62 ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಘಟನಾ ಸ್ಥಳದಿಂದ 14 ಕಿ.ಮೀ ದೂರದಲ್ಲಿರುವ ಪೂತಕುಝಿಯಲ್ಲಿನ (Poothakuzhi) ನದಿ ದಂಡೆಯ ಬಳಿ ಇಂದು ಗುರುತಿಸಲಾಗದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಸುಮಾರು 80 ಜನ ಇದ್ದರು ಎಂದು ಹೇಳಲಾಗಿದೆ. ಈ ಪೈಕಿ 12 ಮಂದಿಯನ್ನು ಮಾತ್ರ ರಕ್ಷಿಸಲಾಗಿತ್ತು. ಮಣ್ಣಿನಡಿ ಸಿಲುಕಿರುವ 5-6 ಮೃತದೇಹಗಳಿಗಾಗಿ ಎನ್​ಡಿಆರ್​ಎಫ್​, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.