ETV Bharat / bharat

ಕಿವಿ ಕೇಳಿಸದ, ಮಾತುಬಾರದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಕಾಮುಕರ ಬಂಧನ

author img

By

Published : Jan 13, 2021, 1:26 PM IST

ಬಿಹಾರದ ಮಧುಬನಿ ಜಿಲ್ಲೆಯಲ್ಲಿ 15 ವರ್ಷದ ಕಿವುಡ ಮತ್ತು ಮೂಗ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ 3 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಅತ್ಯಾಚಾರ ಎಸಗಿ, ಅಪ್ರಾಪ್ತೆಯು ಆರೋಪಿಗಳನ್ನು ಗುರುತು ಹಿಡಿಯದಂತೆ ಚೂಪಾದ ವಸ್ತುವಿನಿಂದ ಆಕೆಯ ಕಣ್ಣುಗಳಿಗೆ ಚುಚ್ಚಿ ಹಾನಿ ಮಾಡಿದ್ದಾರೆ.

Deaf, mute girl gangraped
ಮೂವರು ಕಾಮುಕರ ಬಂಧನ

ಮದುಬನಿ/ಬಿಹಾರ: ಜಿಲ್ಲೆಯಲ್ಲಿ 15 ವರ್ಷದ ಮಾತು ಬಾರದ ಹಾಗೂ ಕಿವಿ ಕೇಳಿಸದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ರೇಪ್​ ಮಾಡಿದ ದುಷ್ಕರ್ಮಿಗಳು ಆಕೆ ತಮ್ಮನ್ನು ಗುರುತು ಹಿಡಿಯಬಾರದೆಂಬ ಕಾರಣಕ್ಕೆ ತೀಕ್ಷ್ಮವಾದ ಆಯುಧದಿಂದ ಆಕೆಯ ಕಣ್ಣಿಗೆ ಚುಚ್ಚಿ ಗಾಯಗೊಳಿಸಿದ್ದಾರೆ.

ಸಂತ್ರಸ್ತೆಯ ಎರಡೂ ಕಣ್ಣುಗಳು ಹಾನಿಗೊಳಗಾಗಿದ್ದು, ಆಕೆ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾಳೆಯೇ ಎಂಬುದು ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳ ನಂತರ ತಿಳಿದು ಬರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಎಸ್​ಪಿ ಸತ್ಯ ಪ್ರಕಾಶ್ ಮಾಹಿತಿ ನೀಡಿದ್ದು, ಮದುಬನಿ ಜಿಲ್ಲೆಯ ನಿವಾಸಿಯಾದ ಸಂತ್ರಸ್ತ ಬಾಲಕಿ ಆಡುಗಳನ್ನು ಮೇಯಿಸಲು ತೆರಳಿದ್ದ ವೇಳೆ ಆಕೆಯ ಗ್ರಾಮದ ನಿವಾಸಿಗಳೇ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತೆಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಸಚಿವರಿಂದ ಅತ್ಯಾಚಾರ ಆರೋಪ.. ಇದು ಬ್ಲ್ಯಾಕ್​ ಮೇಲ್​​ ಎಂದ ಮಿನಿಸ್ಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.