ನವಾದ(ಬಿಹಾರ) : ಜಿಲ್ಲೆಯ ರಾಜೌಲಿಯ ಪ್ರಾಂಚಕ್ ಗ್ರಾಮದ ವಿನೋಬಾನಗರ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಲಾಚೋದೇವಿ ಎಂಬ ಮಹಿಳೆ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳ ಶವ ಒಂದೇ ಕೋಣೆಯಲ್ಲಿ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಸ್ಥಳೀಯರು ಮನೆಯೊಳಗೆ ತಾಯಿ ಮತ್ತು ಮಕ್ಕಳ ಮೃತದೇಹ ಕಂಡು ದಿಗ್ಭ್ರಮೆಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕಾಮಿಸಿದ ಪೊಲೀಸರು ಶವಗಳನ್ನು ಮನೆಯೊಳಗಿಂದ ಹೊರ ತೆಗೆದಿದ್ದಾರೆ. ಆದರೆ, ಮೃತರ ಕೋಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ ಸಾವಿನ ಕಾರಣ ನಿಗೂಢವಾಗಿದೆ.
ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿಲ್ಲದ ಕಾರಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಸ್ಥಳಕ್ಕೆ ಶ್ವಾನ ದಳ ಕರೆಸಿದ್ದಾರೆ.