ETV Bharat / bharat

ಕೇವಲ 5 ಜನ ಸೇರಿ ನಮಾಜ್​ ಮಾಡುವಂತೆ ದಾರುಲ್​ ಉಲೇಮಾ​ ಫತ್ವಾ - 5 ಜನರಿಗೆ ಮಾತ್ರ ನಮಾಜ್​ ಅವಕಾಶ

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಉತ್ತರಪ್ರದೇಶದ ದಾರುಲ್​ ಉಲೇಮಾ​ ದೇವಬಂದ್​​ನಲ್ಲಿ ಏಕಕಾಲದಲ್ಲಿ ಕೇವಲ 5 ಜನರಿಗೆ ಮಾತ್ರ ನಮಾಜ್​ ಮಾಡುವಂತೆ ಫತ್ವಾ ಹೊರಡಿಸಲಾಗಿದೆ.

Darool uloom issued fatwa
ಏಕಕಾಲದಲ್ಲಿ ಕೇವಲ 5 ಜನರಿಗೆ ನಮಾಜ್​ ಅವಕಾಶ
author img

By

Published : Apr 3, 2020, 8:25 PM IST

ಉತ್ತರ ಪ್ರದೇಶ: ಕೊರೊನಾ ವೈರಸ್‌ನಿಂದಾಗಿ ಇಡೀ ದೇಶವೇ ಲಾಕ್​ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಠ, ಮಂದಿರಗಳಿಗೆ ಬೀಗ ಹಾಕಲಾಗಿದೆ. ಮನೆಯಿಂದ ಹೊರಬರದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿದ್ದರೂ ಲಾಕ್​ಡೌನ್​ ಆದೇಶ ಉಲ್ಲಂಘಿಸಿ ಗುಂಪು ಗುಂಪಾಗಿ ತೆರಳಿ ಜನರು ಮಸೀದಿಗಳಲ್ಲಿ ನಮಾಜ್​​ ಮಾಡುತ್ತಿರುವುದು ಕಂಡು ಬಂದಿದೆ.

ಏಕಕಾಲದಲ್ಲಿ ಕೇವಲ 5 ಜನರಿಗೆ ನಮಾಜ್​ ಅವಕಾಶ

ಹೀಗಾಗಿ ಮುಸಲ್ಮಾನ ಮುಖಂಡರು ಮಸೀದಿಗೆ ತೆರಳದಂತೆ, ಮನೆಯಲ್ಲೇ ಕುಳಿತು ನಮಾಜ್​ ಮಾಡುವಂತೆ ಧರ್ಮೀಯರಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದನ್ನೂ ಲೆಕ್ಕಿಸದೆ ನಮಾಜ್​​ಗೆ ಹೆಚ್ಚು ಸಂಖ್ಯೆಯಲ್ಲಿ ಮಸೀದಿಗೆ ತೆರಳುತ್ತಿರುವ ಕಾರಣ ಉತ್ತರಪ್ರದೇಶದ ದಾರುಲ್​ ಉಲೇಮಾ ದೇವಬಂದ್​​ನಲ್ಲಿ ಏಕಕಾಲದಲ್ಲಿ ಕೇವಲ 5 ಜನರು ನಮಾಜ್​ ಮಾಡಬೇಕು ಎಂದು ಫತ್ವಾ ಹೊರಡಿಸಲಾಗಿದೆ. ಜೊತೆಗೆ ಪ್ರಾರ್ಥನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಕೊರೊನಾ ವೈರಸ್ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ಫತ್ವಾ ನೀಡಲಾಗಿದೆ. ಜೊತೆಗೆ ಕೋವಿಡ್​​-19 ಎಂಬ ಮಹಾಮಾರಿ ವಿರುದ್ಧ ಹೋರಾಡಲು ಇದೀಗ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಈ ಕಾರಣಕ್ಕಾಗಿ ಈ ಫತ್ವಾ ಹೊರಡಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.