ETV Bharat / bharat

ಪದ್ಮಶ್ರೀ ಪುರಸ್ಕೃತ ನೃತ್ಯ ಇತಿಹಾಸಕಾರ ಸುನಿಲ್ ಕೊಠಾರಿ ಇನ್ನಿಲ್ಲ - ಸುನಿಲ್ ಕೊಠಾರಿ ನಿಧನ

1933ರ ಡಿಸೆಂಬರ್ 20ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ, ಭಾರತೀಯ ನೃತ್ಯ ಪ್ರಕಾರಗಳ ಅಧ್ಯಯನ ಶುರು ಮಾಡುವ ಮೊದಲು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು.

sunil kothari
ಸುನಿಲ್ ಕೊಠಾರಿ
author img

By

Published : Dec 27, 2020, 5:29 PM IST

ನವದೆಹಲಿ: ಪದ್ಮಶ್ರೀ ಪುರಸ್ಕೃತ ನೃತ್ಯ ಇತಿಹಾಸಕಾರ ಹಾಗೂ ವಿಮರ್ಶಕ ಸುನೀಲ್​ ಕೊಠಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ಇವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು.

87 ವರ್ಷದ ಕೊಠಾರಿ ಅವರು ದೆಹಲಿಯ ಏಷ್ಯನ್​ ಗೇಮ್ಸ್ ವಿಲೇಜ್​​ನಲ್ಲಿ ವಾಸಿಸುತ್ತಿದ್ದರು. ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಓದಿ: 1,100 ಇಂಜಿನಿಯರ್ಸ್​​​​ ನೇಮಕಾತಿಗೆ ಮುಂದಾದ ಪ್ರತಿಷ್ಠಿತ ಎಲ್​​​​ ಅ್ಯಂಡ್​​ ಟಿ ಕಂಪನಿ

ಅಸ್ಸಾಂನ ಸತ್ರಿಯಾ ನೃತ್ಯ ಹಾಗು ಭಾರತೀಯ ನೃತ್ಯ ಪ್ರಕಾರಗಳಲ್ಲಿ ಹೊಸ ನಿರ್ದೇಶನಗಳು, ಭರತನಾಟ್ಯಂ, ಒಡಿಸ್ಸಿ,ಕಥಕ್, ಕೂಚಿಪುಡಿ ಮತ್ತು ಉದಯ್ ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಧಲೆಯವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಕುರಿತು ಇವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

ಭಾರತೀಯ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆಗಾಗಿ ಕೊಠಾರಿ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995), ಗೌರವ್ ಪುರಸ್ಕಾರ್, ಗುಜರಾತ್ ಸಂಗೀತ ನಾಟಕ ಅಕಾಡೆಮಿ (2000) ಸಂದಿದೆ.

ಭಾರತ ಸರ್ಕಾರದಿಂದ ಪದ್ಮಶ್ರೀ (2001) ಪ್ರಶಸ್ತಿ, ನ್ಯೂಯಾರ್ಕ್​ನ ನೃತ್ಯ ವಿಮರ್ಶಕರ ಸಂಘದಿಂದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ (2011) ಕೂಡಾ ಕೊಠಾರಿ ಅವರನ್ನು ಹುಡುಕಿಕೊಂಡು ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.