ETV Bharat / bharat

ಕೋವಿಡ್-19 ಮಾರ್ಗಸೂಚಿ ಅನುಸರಿಸಿ ಶ್ರೀನಗರದ ದಾಲ್ ಸರೋವರದ ಸ್ವಚ್ಛತಾ ಕಾರ್ಯ

ದಾಲ್​ ಲೇಕ್​ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ನೂರಾರು ಬೋಟ್​ ಹೌಸ್​​ಗಳು ಕಾರ್ಯ ನಡೆಸುತ್ತವೆ. ಪ್ರವಾಸಿಗರು ಈ ಬೋಟ್​ ಹೌಸ್​ಗಳಲ್ಲಿ ತಂಗಬಹುದು..

dal lake
dal lake
author img

By

Published : Jun 19, 2020, 4:03 PM IST

ಶ್ರೀನಗರ : ಪರಿಷ್ಕೃತ ಕೋವಿಡ್-19 ಪ್ರೇರಿತ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಸರೋವರ ಮತ್ತು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ ದಾಲ್ ಸರೋವರವನ್ನು ಸ್ವಚ್ಛಗೊಳಿಸುವ ಬೃಹತ್ ಕಾರ್ಯಾಚರಣೆ ಪ್ರಾರಂಭಿಸಿದೆ.

ಸರೋವರದ ಸ್ವಚ್ಛಗೊಳಿಸುವಿಕೆಯು ನೂರಾರು ನಿವಾಸಿಗಳಿಗೆ ಉದ್ಯೋಗ ಒದಗಿಸುತ್ತದೆ. ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಅನೇಕ ಯಂತ್ರಗಳನ್ನು ಬಳಸಿದ ಬಳಿಕ ಇದೀಗ ಪ್ರಾಧಿಕಾರವು ಮಾನವ ಸಂಪನ್ಮೂಲವನ್ನು ಅವಲಂಬಿಸಲು ಪ್ರಾರಂಭಿಸಿದೆ. ಆದ್ದರಿಂದ ಪಾಚಿ, ನೀರಿನ ಸಸ್ಯಗಳು ಮತ್ತು ನೀರಿನಲ್ಲಿರುವ ಇತರ ಕಳೆಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ.

"ನಾವು ದಾಲ್ ಮತ್ತು ನೈಜೀನ್ ಸರೋವರಗಳಲ್ಲಿ ಪ್ರತಿದಿನ ಸುಮಾರು 1,000 ಕಾರ್ಮಿಕರನ್ನು ತೊಡಗಿಸಿದ್ದೇವೆ. ಅವರು ಕಳೆಯನ್ನು ಮೂಲದಿಂದ ಹೊರತೆಗೆಯುತ್ತಾರೆ. ಆದರೆ, ಯಂತ್ರಗಳು ಮೇಲಿನ ಪದರವನ್ನು ಮಾತ್ರ ಕತ್ತರಿಸಬಲ್ಲವು" ಎಂದು ಅಧಿಕಾರಿ ಶಬೀರ್ ಹುಸೇನ್ ತಿಳಿಸಿದರು. ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದಾಲ್ ಸರೋವರವು ಪ್ರತಿವರ್ಷ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಈ ಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ.

ದಾಲ್​ ಲೇಕ್​ ಹೇಗೆ ಉದ್ಯೋಗ ಸೃಷ್ಟಿಸುತ್ತದೆ? : ದಾಲ್​ ಲೇಕ್​ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ನೂರಾರು ಬೋಟ್​ ಹೌಸ್​​ಗಳು ಕಾರ್ಯ ನಡೆಸುತ್ತವೆ. ಪ್ರವಾಸಿಗರು ಈ ಬೋಟ್​ ಹೌಸ್​ಗಳಲ್ಲಿ ತಂಗಬಹುದು. ಅಲ್ಲದೇ ದಾಲ್​ ಲೇಕ್​ನಲ್ಲಿ ಬಿಡುವ ಕಮಲದ ಹೂಗಳು ಹಾಗೂ ಅದರ ದಂಟುಗಳನ್ನು ಮಾರಿ ಅನೇಕರು ಜೀವನ ನಡೆಸುತ್ತಿದ್ದಾರೆ. ಈ ದಂಟುಗಳ ಸಾಂಬಾರು, ಪಲ್ಯ ಮಾಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.