ETV Bharat / bharat

12 ಗಂಟೆಗಳಲ್ಲಿ ಉಗ್ರ ಸ್ವರೂಪ ತಾಳಲಿದೆ ನಿಸರ್ಗ ಚಂಡಮಾರುತ: ಹವಾಮಾನ ಇಲಾಖೆ ಎಚ್ಚರಿಕೆ - ಮಹಾರಾಷ್ಟ್ರ

'ನಿಸರ್ಗ' ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ಉಗ್ರ ಸ್ವರೂಪ ತಾಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Cyclone Nisarga
ನಿಸರ್ಗ ಚಂಡಮಾರುತ
author img

By

Published : Jun 2, 2020, 11:58 AM IST

Updated : Jun 2, 2020, 1:07 PM IST

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ 'ನಿಸರ್ಗ' ಚಂಡಮಾರುತವು ಈಗಾಗಲೇ ಕಳೆದ 6 ಗಂಟೆಗಳ ಅವಧಿಯಲ್ಲಿ ಗಂಟೆಗೆ 11 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಬೀಸಿದ್ದು, ಮುಂದಿನ 12 ಗಂಟೆಗಳಲ್ಲಿ ಉಗ್ರ ಸ್ವರೂಪ ತಾಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

Cyclone Nisarga
NDRF ಸಿಬ್ಬಂದಿ ನಿಯೋಜನೆ

ಜೂನ್​ 3 ರಂದು ಗಂಟೆಗೆ 105 ರಿಂದ 110 ಕಿ.ಮೀ. ವೇಗದಲ್ಲಿ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿ ಮೂಲಕ ನಿಸರ್ಗ ಸೈಕ್ಲೋನ್​ ಹಾದು - ಹೋಗಲಿದ್ದು, ಈ ವೇಳೆ ಮುಂಬೈ ಮೇಲೆ ತನ್ನ ಪ್ರಭಾವ ಬೀರಲಿದೆ.

ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡುತ್ತಿದೆ.

  • Depression over eastcentral Arabian intensified into Deep Depression .To intensify further into into a Cyclonic Storm in next 12 hrs and into a Severe Cyclonic Storm in subsequent 12 hrs and cross north Maharashtra and adjoining south Gujarat coast in afternoon of 03rd June. pic.twitter.com/ePU9HuEb5S

    — India Met. Dept. (@Indiametdept) June 2, 2020 " class="align-text-top noRightClick twitterSection" data=" ">

ಚಂಡಮಾರುತದ ಪ್ರಭಾವ ದೆಹಲಿ ಹಾಗೂ ಉತ್ತರ ಪ್ರದೇಶದ ಮೇಲೂ ಬೀರಲಿದ್ದು, ಮುಂದಿನ 2 ಗಂಟೆಗಳ ಕಾಲ ಭಾರಿ ಗಾಳಿ-ಮಳೆಯಾಗಲಿದೆ ಎಂದು IMD ಎಚ್ಚರಿಕೆ ನೀಡಿದೆ.

Last Updated : Jun 2, 2020, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.