ETV Bharat / bharat

ಮನ್ನಾರ್ ಕೊಲ್ಲಿಯಲ್ಲಿ ‘ಬುರೆವಿ’ ಸುಳಿದಾಟ: ಮುಂದಿನ 12 ಗಂಟೆಗಳಲ್ಲಿ ಅಬ್ಬರ ನಿಲ್ಲುವ ಸಾಧ್ಯತೆ

ಬುರೆವಿ ಚಂಡಮಾರುತವು ಕಳೆದ 30 ಗಂಟೆಗಳಿಂದ ಮನ್ನಾರ್ ಕೊಲ್ಲಿಯಲ್ಲಿಯೇ ಸುಳಿದಾಡುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

author img

By

Published : Dec 5, 2020, 2:00 PM IST

state
ಬುರೆವಿ

ರಾಮೇಶ್ವರಂ (ತಮಿಳುನಾಡು): ಬುರೆವಿ ಚಂಡಮಾರುತವು ಕಳೆದ 30 ಗಂಟೆಗಳಿಂದ ಮನ್ನಾರ್ ಕೊಲ್ಲಿಯಲ್ಲಿಯೇ ಸುಳಿದಾಡುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೂ, ತಮಿಳುನಾಡು ಮತ್ತು ಕೇರಳದ ಹಲವು ಪ್ರದೇಶಗಳಲ್ಲಿ ಐಎಂಡಿ ಅಲರ್ಟ್ ಘೋಷಿಸಿದೆ.

  • The Depression over Gulf of Mannar close to Ramanathapuram District coast remained practically stationary during past 33 hours. The Depression is likely to remain practically stationary over the same region and weaken into a Well Marked Low Pressure Area during next 12 hours. pic.twitter.com/P0TKL0XYYo

    — India Meteorological Department (@Indiametdept) December 5, 2020 " class="align-text-top noRightClick twitterSection" data=" ">

ಬುರೆವಿ ಚಂಡಮಾರುತದ ಅಬ್ಬರದಿಂದ ರಾಮೇಶ್ವರಂ ಮತ್ತು ಪುದುಚೆರಿಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. ಹಾಗಾಗಿ, ಅಲ್ಲಿನ ಜನರು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಸದ್ಯಕ್ಕೆ ಮನ್ನಾರ್ ಕೊಲ್ಲಿ, ಬಂಗಾಳಕೊಲ್ಲಿ, ತಮಿಳುನಾಡು ದಕ್ಷಿಣ ಕರಾವಳಿ, ಉತ್ತರ ಶ್ರೀಲಂಕಾ, ಕೇರಳದ ದಕ್ಷಿಣ ಕರಾವಳಿ, ಲಕ್ಷದ್ವೀಪಗಳಿಗೆ ಯಾರೂ ಮೀನುಗಾರಿಕೆಗೆ ತೆರಳಬಾರದು ಎಂದು ಐಎಂಡಿ ಸೂಚಿಸಿದೆ.

ಕೇರಳದ ಹಲವೆಡೆ ಮಳೆ ಮುನ್ಸೂಚನೆ ಇರುವುದರಿಂದ ಇಡುಕ್ಕಿ, ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ತಿರುವನಂತಪುರಂ, ಕೊಲ್ಲಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಓದಿ:‘ಬುರೆವಿ’ ಅಬ್ಬರ.. ರಾಮೇಶ್ವರಂನ ಧನುಷ್ಕೋಟಿಯಲ್ಲಿ ಚರ್ಚ್ ಗೋಡೆ ಕುಸಿತ

ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿದ್ದು, ಎನ್​ಡಿಆರ್​ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.