ದರ್ಬಾಂಗ್ (ಬಿಹಾರ): ಲಾಕ್‌ಡೌನ್ ಸಮಯದಲ್ಲಿ ಗುರುಗ್ರಾಮದಿಂದ ದರ್ಬಾಂಗ್ಗೆ ಬೈಸಿಕಲ್‌ನಲ್ಲಿ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಜ್ಯೋತಿ ಕುಮಾರಿ, ತನ್ನ ಕುಟುಂಬದೊಂದಿಗೆ ದರ್ಬಾಂಗ್ದ ಎಸ್‌ಎಸ್‌ಪಿ ಬಾಬುರಾಮ್ ಅವರನ್ನು ಭೇಟಿ ಮಾಡಿದರು.
ಜ್ಯೋತಿ ಅವರ ತಂದೆ ಮೋಹನ್ ಪಾಸ್ವಾನ್ ಅವರೊಂದಿಗೆ ಎಸ್‌ಎಸ್‌ಪಿ ಬಾಬುರಾಮ್ 'ಸೈಕಲ್ ಗರ್ಲ್' ಜ್ಯೋತಿ ಭವಿಷ್ಯದ ಕುರಿತು ಚರ್ಚೆ ನಡೆಸಿದರು.
ಜ್ಯೋತಿಗೆ ಸೈಕ್ಲಿಂಗ್ ಕುರಿತು ಇರುವ ಆಸಕ್ತಿ ಗಮನಿಸಿದ ಎಸ್‌ಎಸ್‌ಪಿ ಬಾಬುರಾಮ್, ಸಂಜೀವ್ ಕುಮಾರ್ ಎಂಬ ಬೈಸಿಕಲ್ ತರಬೇತುದಾರನನ್ನು ಕರೆದು ಜ್ಯೋತಿಗೆ ಸೈಕ್ಲಿಂಗ್ ತರಬೇತಿ ನಿಡುವಂತೆ ತಿಳಿಸಿದರು. ಎಸ್‌ಎಸ್‌ಪಿ ಕೈಗೊಂಡ ಈ ನಿರ್ಧಾರದ ಕುರಿತು 'ಸೈಕಲ್ ಗರ್ಲ್' ಜ್ಯೋತಿ ಸಂತಸ ವ್ಯಕ್ತಪಡಿಸಿದರು.
ಲಾಕ್‌ಡೌನ್ ಸಮಯದಲ್ಲಿ ತನ್ನ ತಂದೆಯ ಅನಾರೋಗ್ಯ ಹಿನ್ನೆಲೆ ಜ್ಯೋತಿ ಹಳೆಯ ಬೈಸಿಕಲ್ ಖರೀದಿಸಿ, ತಂದೆಯನ್ನು ಕುಳ್ಳಿರಿಸಿ ದರ್ಬಾಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಪ್ರಯಾಣದ ಸಮಯದಲ್ಲಿ ಅನಾರೋಗ್ಯ ಪೀಡಿತ ತಂದೆಯನ್ನು ಬೈಸಿಕಲ್‌ನಲ್ಲಿ ಕರೆದೊಯ್ಯುವ ಹುಡುಗಿಯನ್ನು ನೋಡಿದ ಅನೇಕ ಜನರು ಸಹಾಯ ಮಾಡಿದರು. ಅದೇ ಸಮಯದಲ್ಲಿ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಮಾಧ್ಯಮಗಳ ಮೂಲಕ ಈ ವಿಷಯ ತಿಳಿದು ಜ್ಯೋತಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬುರಾಮ್, ಜ್ಯೋತಿಗೆ ಉತ್ತಮ ತರಬೇತಿ ದೊರೆತರೆ ಭವಿಷ್ಯದಲ್ಲಿ ಅವರು ಉತ್ತಮ ಸೈಕಲ್ ರೇಸರ್ ಆಗಬಹುದು ಎಂದು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಕೋಟಾದಿಂದ ಕಲಾ ಸಂಸ್ಕೃತಿ ವಿಭಾಗದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸಂಜೀವ್ ಕುಮಾರ್ ಅವರಿಗೆ ಜ್ಯೋತಿ ಕುಮಾರಿಯ ಸೈಕ್ಲಿಂಗ್‌ನ ಆರಂಭಿಕ ತರಬೇತಿ ನೀಡುವಂತೆ ಕೋರಲಾಗಿದೆ.
ಯಾವುದೇ ಕ್ರೀಡಾ ಅಕಾಡೆಮಿಯಲ್ಲಿ ಪ್ರವೇಶ ಪಡೆಯುವವರೆಗೆ ಸಂಜೀವ್ ಕುಮಾರ್ ಆರಂಭಿಕ ತರಬೇತಿಗಾಗಿ ಜ್ಯೋತಿಗೆ ಮಾರ್ಗದರ್ಶನ ನೀಡಲಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಜ್ಯೋತಿ ತಂದೆಗೆ ಯಾವುದೇ ಸಹಾಯ ಬೇಕಾದಲ್ಲಿ ನೀವು ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಭರವಸೆ ನೀಡಿದರು.