ETV Bharat / bharat

ಜಾಗತಿಕ ಟಾಪ್​ 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಭಟ್ನಾಗರ್​ ಸ್ಥಾಪಿಸಿದ ಸಂಶೋಧನಾ ಸಂಸ್ಥೆ - CSIR has a dynamic network

ಸಿಎಸ್ಐಆರ್​​ ಸಂಸ್ಥೆಯನ್ನು ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಸ್ಥಾಪನೆ ಮಾಡಿದ್ದು, ಇಂದು ಅದು ಟಾಪ್ 100 ಜಾಗತಿಕ ಸಂಸ್ಥೆಗಳಲ್ಲಿ ಏಕೈಕ ಭಾರತೀಯ ಸಂಸ್ಥೆಯಾಗಿದೆ.

ಸಿಎಸ್​ಐಆರ್​
ಸಿಎಸ್​ಐಆರ್​
author img

By

Published : Sep 22, 2020, 5:44 PM IST

ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಭಾರತದ ಅತಿದೊಡ್ಡ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ & ಡಿ) ಸಂಸ್ಥೆಯಾಗಿದೆ. 1942 ಸೆಪ್ಟೆಂಬರ್, 26 ರಂದು ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಇದನ್ನು ಸ್ಥಾಪನೆ ಮಾಡಿದ್ರು.

ಸಿಎಸ್ಐಆರ್​​ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಧನ ಸಹಾಯ ನೀಡುತ್ತದೆ. ಇದು 1860 ರ ಸೊಸೈಟಿಗಳ ನೋಂದಣಿ ಕಾಯ್ದೆಯ ಪ್ರಕಾರ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಿಎಸ್ಐಆರ್ 38 ರಾಷ್ಟ್ರೀಯ ಪ್ರಯೋಗಾಲಯ, 39 ಔಟ್ರೇಚ್​​ ಕೇಂದ್ರಗಳು, 3 ಇನ್ನೋವೇಶನ್ ಕಾಂಪ್ಲೆಕ್ಸ್ ಮತ್ತು 5 ಘಟಕಗಳನ್ನು ಹೊಂದಿದೆ. ಸಿಎಸ್ಐಆರ್​​ ಆರ್ & ಡಿ ಪರಿಣತಿ ಮತ್ತು ಅನುಭವ ಹೊಂದಿರುವ ಸುಮಾರು 4,600 ಸಕ್ರಿಯ ವಿಜ್ಞಾನಿಗಳನ್ನು ಒಳಗೊಂಡಿದ್ದು, 8000 ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಗೆ ಬೆಂಬಲವಾಗಿ ಇದ್ದಾರೆ.

ಸಿಮಿಗೊ ಇನ್ಸ್ಟಿಟ್ಯೂಷನ್​ ರ‍್ಯಾಂಕಿಂಗ್​​ ವರ್ಲ್ಡ್ ರಿಪೋರ್ಟ್ 2014 ರ ಪ್ರಕಾರ, ಸಿಎಸ್ಐಆರ್ ವಿಶ್ವದಾದ್ಯಂತ ಇರುವ 4,851 ಸಂಸ್ಥೆಗಳ ಪೈಕಿ 84ನೇ ಸ್ಥಾನದಲ್ಲಿದೆ. ಟಾಪ್ 100 ಜಾಗತಿಕ ಸಂಸ್ಥೆಗಳಲ್ಲಿ ಏಕೈಕ ಭಾರತೀಯ ಸಂಸ್ಥೆ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.