ETV Bharat / bharat

ನಕ್ಸಲರ ಮಟ್ಟ ಹಾಕಲು ಸುಧಾರಿತ ಡ್ರೋನ್‌ ನಿಯೋಜಿಸಲಿದೆ ಸಿಆರ್‌ಪಿಎಫ್ - 14 ಹೊಸ ಡ್ರೋನ್‌ಗಳು

ಹೊಸ ಡ್ರೋನ್‌ಗಳು ಹೆಚ್ಚು ಸಮಯ ಹಾರಬಲ್ಲವು ಮತ್ತು ಗುಣಮಟ್ಟದ ವಿಡಿಯೋಗಳನ್ನು ಸೆರೆಹಿಡಿಯಬಲ್ಲವು. ಮುಂದಿನ ಮೂರು ತಿಂಗಳಲ್ಲಿ ಛತ್ತೀಸ್​ಗಢದ ಸುಕ್ಮಾ, ದಂತೇವಾಡ ಮತ್ತು ಬಿಜಾಪುರ ಸೇರಿದಂತೆ ಕೆಂಪು ವಲಯ ಪ್ರದೇಶಗಳಲ್ಲಿ 14 ಹೊಸ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಸಿಆರ್‌ಪಿಎಫ್ ಮಾಹಿತಿ ನೀಡಿದೆ.

CRPF to deploy more powerful, technologically advanced drones in Naxal-hit areas
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುಧಾರಿತ ಡ್ರೋನ್‌ ನಿಯೋಜಿಸಲು ಸಿಆರ್‌ಪಿಎಫ್ ಸಜ್ಜು
author img

By

Published : Jan 21, 2021, 4:13 PM IST

ನವದೆಹಲಿ: ದೇಶದ ಭದ್ರತೆಗೆ ಮಾರಕವಾಗಿರುವರನ್ನು ಮಟ್ಟಹಾಕುವ ಉದ್ದೇಶದಿಂದ ಭಾರತೀಯ ಸೇನೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶೀಘ್ರದಲ್ಲೇ ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚು ಶಕ್ತಿಶಾಲಿ ಮತ್ತು ತಾಂತ್ರಿಕವಾಗಿ ಸುಧಾರಿತವಾಗಿರುವ ಡ್ರೋನ್‌ಗಳನ್ನು ನಿಯೋಜಿಸಲಿದೆ.

ಈ ಡ್ರೋನ್‌ಗಳು ಹೆಚ್ಚು ಸಮಯ ಹಾರಬಲ್ಲವು ಮತ್ತು ಗುಣಮಟ್ಟದ ವಿಡಿಯೋಗಳನ್ನು ಸೆರೆಹಿಡಿಯಬಲ್ಲವು. ಮುಂದಿನ ಮೂರು ತಿಂಗಳಲ್ಲಿ ಛತ್ತೀಸ್​ಗಢದ ಸುಕ್ಮಾ, ದಂತೇವಾಡ ಮತ್ತು ಬಿಜಾಪುರ ಸೇರಿದಂತೆ ಕೆಂಪು ವಲಯ ಪ್ರದೇಶಗಳಲ್ಲಿ 14 ಹೊಸ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಸಿಆರ್‌ಪಿಎಫ್ ಮಾಹಿತಿ ನೀಡಿದೆ.

ಮೈಕ್ರೋ ಯುಎವಿ ಎ 410 ನ ಈ ಡ್ರೋನ್​ಗಳು 60 ನಿಮಿಷಗಳವರೆಗೆ ಹಾರಾಟ ನಡೆಸಬಲ್ಲವು. ಸೀಮಿತ ಸ್ಥಳಗಳಿಂದ ತ್ವರಿತ ನಿಯೋಜನೆಗಾಗಿ ಇವುಗಳನ್ನು ಸಿದ್ಧಗೊಳಿಸಬಹುದಾಗಿದೆ. ಲಂಬವಾಗಿ ಮೇಲಕ್ಕೇರುವ ಟೇಕ್-ಆಫ್ ಮತ್ತು ಸಣ್ಣ ಆರ್‌ಪಿಎ (remotely piloted aircraft) ಮುಖಾಂತರ ಲ್ಯಾಂಡಿಂಗ್ ಆಗಲಿವೆ. ಇವು ಡಿಜಿಟಲ್ ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಲಿಂಕ್‌ನೊಂದಿಗೆ ಟೇಕ್‌-ಆಫ್‌ನಿಂದ ಲ್ಯಾಂಡಿಂಗ್‌ವರೆಗೆ ಸ್ವಾಯತ್ತ ಕಾರ್ಯಾಚರಣೆಯನ್ನು ನಡೆಸುತ್ತವೆ. ಹೆಚ್‌ಡಿ ಕ್ಯಾಮೆರಾ ಹೊಂದಿದ್ದು, ಕಣ್ಗಾವಲು ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ವಿಶ್ವಾಸಾರ್ಹ ವೈಮಾನಿಕ ಚಿತ್ರಣವನ್ನು ಒದಗಿಸಲಿವೆ.

ಈ ಡ್ರೋನ್‌ಗಳು ಹಳೆಯ ಡ್ರೋನ್‌ಗಿಂತ ಭಿನ್ನವಾಗಿರಲಿವೆ. ಇವು ಹಳೆಯವುಕ್ಕಿಂತ ಹೆಚ್ಚು ವೇಗ ಹೊಂದಿದ್ದು, ಸುಮಾರು 20 ನಿಮಿಷ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. ಹಳೆಯ ಡ್ರೋನ್‌ಗಳು 4 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದರೆ, ಹೊಸ ಡ್ರೋನ್‌ಗಳು 5 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಹಳೆಯ ಡ್ರೋನ್‌ಗಳು 40-50 ನಿಮಿಷಗಳ ಕಾರ್ಯಕ್ಷಮತೆ ಹೊಂದಿದ್ದವು. ಆದರೆ ಹೊಸ ಡ್ರೋನ್​ಗಳು ಬರೋಬ್ಬರಿ 60 ನಿಮಿಷಗಳವರೆಗೆ ಹಾರಾಡಲಿವೆ.

ಈ ಡ್ರೋನ್‌ಗಳು ನಕ್ಸಲ್ ಪೀಡಿತ ಕೆಂಪು ವಲಯಗಳಲ್ಲಿ ಕೆಲಸ ಮಾಡುವುದರ ಮೂಲಕ ಸಿಆರ್‌ಪಿಎಫ್‌ಗೆ ಹೆಚ್ಚಿನ ಬಲ ನೀಡಲಿವೆ ಎಂದು ಸಿಆರ್​ಪಿಎಫ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.