ETV Bharat / bharat

ಭಾರತೀಯ ರಾಜಕೀಯದಲ್ಲಿ ಅಪರಾಧಿಗಳು..

ಅಮೆರಿಕ ಮತ್ತು ಜಗತ್ತಿನ ಇತರೆಲ್ಲ ಕಡೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಿನ್ನೆಲೆಯ ಪ್ರತಿಯೊಂದು ವಿವರಗಳನ್ನೂ ಪರಿಗಣಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾತ್ರ, ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿದ್ದ ಲಾಲು ಪ್ರಸಾದ್‌ ಯಾದವ್‌ರಂತಹ ವ್ಯಕ್ತಿಗಳು, ಇತರ ಪಕ್ಷಗಳ ಜೊತೆಗೆ ಜೈಲಿನಿಂದಲೇ ಮೈತ್ರಿ ಕೂಟ ರಚಿಸುತ್ತಿದ್ದಾರೆ..

CRIMINALS IN INDIAN POLITICS
ಭಾರತೀಯ ರಾಜಕೀಯದಲ್ಲಿ ಅಪರಾಧಿಗಳು
author img

By

Published : Sep 23, 2020, 2:36 PM IST

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಅಪರಾಧೀಕರಣದಿಂದ ರಕ್ಷಿಸುವ ಪ್ರಯತ್ನಗಳು ನಡೆದಿರುವಾಗ್ಯೂ ನ್ಯಾಯಾಂಗ ನಿರ್ದೇಶನಗಳನ್ನು ಗಮನಿಸಿದಾಗ, ಈ ಪ್ರಯತ್ನ ಏಕಮುಖ ಸಂಚಾರದ ರಸ್ತೆಯಂತಿದೆ ಎಂಬುದು ಸ್ಪಷ್ಟ. ಕ್ರಿಮಿನಲ್‌ ಪ್ರಕರಣಗಳ ಆರೋಪಗಳನ್ನು ಹೊಂದಿರುವ ರಾಜಕಾರಣಿಗಳ ವಿಚಾರಣೆಯನ್ನು ಶೀಘ್ರವಾಗಿ ನಡೆಸುವ ಉದ್ದೇಶದಿಂದಲೇ ಮಾರ್ಚ್‌ 2018ರ ಹೊತ್ತಿಗೆ 12 ಕ್ಷಿಪ್ರ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿತ್ತು.

ಆದರೆ, ಅಂತಿಮ ತೀರ್ಪು ಹೊರಬೀಳುವಲ್ಲಿ ಹಲವಾರು ತಡೆಗಳು ಉಂಟಾದವು. ಈ ರೀತಿಯ ನ್ಯಾಯಾಂಗ ವಿಳಂಬಗಳನ್ನು ಸ್ಥಗಿತಗೊಳಿಸುವ ಉದ್ದೇಶದಿಂದ, ರಾಜಕಾರಣಿಗಳ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ವಾರದೊಳಗೆ ಮುಗಿಸಲು ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿದೆ.

ಈ ಪ್ರಕರಣಗಳಲ್ಲಿ ಪ್ರಬಲ ರಾಜಕೀಯ ಲಾಬಿಗಳು ತೀರ್ಪುಗಳ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಆರೋಪಿತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ಸಾವಿರಾರು ಪ್ರಕರಣ ಬಾಕಿ ಉಳಿದಿರುವಂತೆ, ವಿಚಾರಣೆಗೆ ತಡೆಯಾಜ್ಞೆ ಹೊಂದಿರುವ ಪ್ರಕರಣಗಳನ್ನೂ ನಿತ್ಯ ವಿಚಾರಣೆ ನಡೆಸಬೇಕು ಹಾಗೂ ಎರಡು ತಿಂಗಳ ಅವಧಿಯೊಳಗೆ ಅಂತಿಮ ತೀರ್ಪು ನೀಡಬೇಕೆಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟ (ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್)‌ ಬಹಿರಂಗಪಡಿಸಿರುವಂತೆ, 2014ರಲ್ಲಿ ಚುನಾಯಿತರಾಗಿದ್ದ 1,581 ಜನಪ್ರತಿನಿಧಿಗಳು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹೊಂದಿದ್ದರು. ಈಗ ಆ ಸಂಖ್ಯೆ, 4,442ಕ್ಕೆ ಏರಿದ್ದು, ಇಷ್ಟೊಂದು ಸಂಖ್ಯೆಯ ರಾಜಕಾರಣಿಗಳು ಕ್ರಿಮಿನಲ್‌ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ, 2, 556 ಆರೋಪಿಗಳು ವಿವಿಧ ವಿಧಾನಸಭೆಗಳು ಹಾಗೂ ಸಂಸತ್ತಿನ ಹಾಲಿ ಸದಸ್ಯರಾಗಿದ್ದಾರೆ.

ಭಾರತದ 1997ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರತಿ ರಾಜಕೀಯ ಪಕ್ಷವೂ ಮಾಡಿದ್ದ ಸರ್ವಾನುಮತದ ಗೊತ್ತುವಳಿಗೆ ಸಂಸತ್ತು ಮೂಕಪ್ರೇಕ್ಷಕವಾಗಿದೆ. ಕ್ರಿಮಿನಲ್‌ ಅಪರಾಧದ ಆರೋಪ ಹೊತ್ತಿರುವ ಯಾವೊಬ್ಬ ವ್ಯಕ್ತಿಗೂ ಟಿಕೆಟ್‌ ನೀಡುವುದಿಲ್ಲ ಎಂದು ರಾಜಕೀಯ ಪಕ್ಷಗಳು ಅಂದು ಪ್ರತಿಜ್ಞೆ ಮಾಡಿದ್ದವು. ಆದರೆ, ಈಗ ಪ್ರತಿಯೊಂದು ಪಕ್ಷವೂ ಕ್ರಿಮಿನಲ್‌ಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಒಗ್ಗಟ್ಟಿನ ಪ್ರದರ್ಶನ ನಡೆಸಿವೆ. ಈ ಮುಂಚೆ ಫೆಬ್ರವರಿಯಲ್ಲಿ, ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಕ್ರಮ ಮಾತ್ರದಿಂದ ರಾಜಕೀಯದ ಅಪರಾಧೀಕರಣವನ್ನು ತಡೆಗಟ್ಟಲಾಗದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.

ಯಾಕೆಂದರೆ, ಅಪರಾಧ ಸಾಬೀತಾಗದವರ ವಿರುದ್ಧ ರಾಜಕೀಯ ಪಕ್ಷಗಳು ಒಲ್ಲದ ಮನಸ್ಸು ಹೊಂದಿಲ್ಲ. ಹೀಗಾಗಿ, ರಾಜಕೀಯ ಸಂಘಟನೆಗಳ ಸುಧಾರಣೆಯ ಅವಶ್ಯಕತೆ ಕೂಡ ತಲೆದೋರಿದೆ. ರಾಜಕೀಯ ಪಕ್ಷಗಳಿಗೆ ಆರು ನಿರ್ದೇಶನಗಳನ್ನು ನೀಡಿರುವ ನ್ಯಾಯಾಲಯ, ಮೊದಲನೆಯದಾಗಿ ಕ್ರಿಮಿನಲ್‌ ಪ್ರಕರಣಗಳು ಬಾಕಿ ಇರುವ ಅಭ್ಯರ್ಥಿಗಳನ್ನು ಏಕೆ ಕಣಕ್ಕೆ ಇಳಿಸಲಾಗುತ್ತಿದೆ ಎಂಬುದಕ್ಕೆ ಕಾರಣಗಳನ್ನು ವಿವರಿಸುವಂತೆ ಸೂಚಿಸಿದೆ.

ಇದಕ್ಕೂ ಮುನ್ನ, ಸ್ವಚ್ಛ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಿಂತ ಕ್ರಿಮಿನಲ್‌ ಅಭ್ಯರ್ಥಿಯು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳು ದುಪ್ಪಟ್ಟು ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿತ್ತು. ಭಾರತದ ರಾಜಕೀಯವು ನೈತಿಕವಾಗಿ ದಿವಾಳಿಯಾಗಿದೆ ಎಂಬುದಕ್ಕೆ ಈ ಉಲ್ಲೇಖ ನೈಜ ನಿದರ್ಶನವಾಗಿದೆ. ಆರೋಪಿಗಳಿಗೆ ಟಿಕೆಟ್‌ ನೀಡದಿರುವ ಮೂಲಕ ರಾಜಕೀಯ ಪಕ್ಷಗಳು ಈ ವಿಪತ್ತನ್ನು ನಿವಾರಿಸಲು ಸಾಧ್ಯವಿದೆ. ಆದರೆ, ರಾಜಕೀಯ ಕ್ಷೇತ್ರವು ಎಷ್ಟೊಂದು ಅಧಃಪತನಕ್ಕೆ ತಲುಪಿದೆ ಎಂದರೆ, ಈಗ ಅಪರಾಧಿಗಳೇ ತಮ್ಮ ಸ್ವಂತ ಪಕ್ಷಗಳನ್ನು ಹುಟ್ಟು ಹಾಕುತ್ತಿದ್ದಾರೆ.

ಅಮೆರಿಕ ಮತ್ತು ಜಗತ್ತಿನ ಇತರೆಲ್ಲ ಕಡೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಿನ್ನೆಲೆಯ ಪ್ರತಿಯೊಂದು ವಿವರಗಳನ್ನೂ ಪರಿಗಣಿಸಲಾಗುತ್ತದೆ. ಅಮೆರಿಕದ ವಾಯು ನೆಲೆಯನ್ನು ಸ್ಥಳಾಂತರಗೊಳಿಸುವುದೂ ಸೇರಿದಂತೆ, ಚುನಾವಣೆಯಲ್ಲಿ ಮಾಡಿದ್ದ ವಾಗ್ದಾನಗಳನ್ನು ಈಡೇರಿಸದೇ ಹೋದ ವೈಫಲ್ಯಕ್ಕಾಗಿ ಜಪಾನ್‌ ಪ್ರಧಾನಮಂತ್ರಿ ಹತೊಯಮ ಅವರು ಕೆಳಕ್ಕೆ ಇಳಿಯಬೇಕಾಯಿತು. ಆದರೆ, ಭಾರತದಲ್ಲಿ ಮಾತ್ರ, ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿದ್ದ ಲಾಲು ಪ್ರಸಾದ್‌ ಯಾದವ್‌ರಂತಹ ವ್ಯಕ್ತಿಗಳು, ಇತರ ಪಕ್ಷಗಳ ಜೊತೆಗೆ ಜೈಲಿನಿಂದಲೇ ಮೈತ್ರಿ ಕೂಟ ರಚಿಸುತ್ತಿದ್ದಾರೆ. ರಾಜಕೀಯ ಭ್ರಷ್ಟಾಚಾರವು ಎಲ್ಲಾ ಅಪರಾಧಗಳ ತಾಯಿ ಇದ್ದಂತೆ. ಸಾರ್ವಜನಿಕ ಅಭಿಪ್ರಾಯ ಮಾತ್ರ ಭ್ರಷ್ಟಾಚಾರ ಹಾಗೂ ರಾಜಕೀಯ ಅಪರಾಧಿಕರಣಕ್ಕೆ ಪ್ರತಿಮದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.