ETV Bharat / bharat

ತಬ್ಲೀಗ್ ಜಮಾಅತ್​ ಮುಖ್ಯಸ್ಥ ಮೌಲಾನ ಸಾದ್​ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಕೊರೊನಾ ವೈರಸ್​ ಎಚ್ಚರಿಕೆಯ ನಡುವೆಯೂ ದೆಹಲಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ತಬ್ಲೀಗ್ ಜಮಾಅತ್​ ಮುಖ್ಯಸ್ಥ ಮೌಲಾನ ಸಾದ್​ನ ಉತ್ತರ ಪ್ರದೇಶದ ಮನೆ ಮೇಲೆ ದೆಹಲಿಯ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

Crime branch raids Maulana Saad's residence, farmhouse in UP

author img

By

Published : Apr 24, 2020, 1:37 PM IST

ನವದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿರುವ ತಬ್ಲೀಗ್​ ಜಮಾಅತ್ ಮುಖ್ಯಸ್ಥ ಮೌಲಾನಾ ಸಾದ್ ನಿವಾಸದ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಜೊತೆಗೆ ಜಿಲ್ಲೆಯ ಕಂಧ್ಲಾದಲ್ಲಿರುವ ಸಾದ್​ ತೋಟದ ಮನೆ ಮನೆಯಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೊರೊನಾ ವೈರಸ್​ ಎಚ್ಚರಿಕೆಯ ಹೊರತಾಗಿಯೂ ಕಳೆದ ತಿಂಗಳು ದೆಹಲಿಯ ನಿಝಾಮುದ್ದೀನ್ ಮರ್ಕಝ್​ನಲ್ಲಿ ಸಾದ್​ ಬೃಹತ್​ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ತಬ್ಲೀಗ್​ ಜಮಾಅತ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಂದಾಗಿ ದೇಶದಾದ್ಯಂತ 4,200 ರಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಮೌಲಾನ ಸಾದ್​ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಕೊರೊನಾ ಹರಡುವ ಭೀತಿ ಹಿನ್ನೆಲೆ ಬೃಹತ್​ ಸಭೆಗಳನ್ನು ನಡೆಸಬಾರದು ಎಂಬ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಸಾದ್ ಸೇರಿ ಏಳು ಜನರ ವಿರುದ್ಧ ಮಾರ್ಚ್​ 31 ರಂದು ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸಾದ್ ತಲೆಮರೆಸಿಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.