ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಕ್ರಿಕೆಟ್ ಆಡುವಾಗ ಉಂಟಾದ ವಿವಾದವು ಒಬ್ಬ ಬಾಲಕನ ಜೀವ ತೆಗೆದುಕೊಂಡಿರುವ ದಾರುಣ ಘಟನೆ ವಿಶಾಖಪಟ್ಟನಂನಲ್ಲಿ ನಡೆದಿದೆ.
ನಗರದ ಕಾಸರ ಎಂಬ ಪ್ರದೇಶದ ವಿಜಯ್ ಎಂಬ ಯುವಕ ಮತ್ತು ಆತನ ಸ್ನೇಹಿತರು ಭಾನುವಾರ ಕ್ರಿಕೆಟ್ ಆಡುತ್ತಿದ್ದರು. ಅದಾಗಲೇ ಎರಡು ಪಂದ್ಯಗಳಲ್ಲಿ ವಿಜಯ್ ಗೆಲುವು ಸಾಧಿಸಿದ್ದ.
ಮತ್ತೊಂದು ಪಂದ್ಯದಲ್ಲೂ ವಿಜಯ್ ಗೆಲುವಿನ ಸನಿಹದಲ್ಲಿದ್ದನು. ಇದರಿಂದ ಕೋಪಗೊಂಡ ಆತನ ಸ್ನೇಹಿತ ಬ್ಯಾಟ್ನಿಂದ ವಿಜಯ್ ಹೊಟ್ಟೆ ಭಾಗಕ್ಕೆ ತಿವಿದಿದ್ದಾನೆ. ಕರುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ವಿಜಯ್ ಕುಸಿದುಬಿದ್ದಿದ್ದಾನೆ.
ಕೂಡಲೆ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ವಿಜಯ್ ಮಧ್ಯರಾತ್ರಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ವಿಶಾಖಪಟ್ಟಣಂನ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.