ಮುಂಬೈ: ವಿಶ್ವವ್ಯಾಪಿಯಾಗಿ ಕೊರೊನಾ ವೈರಸ್ ಬಾಧಿಸಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ನಾವೆಲ್ಲರೂ ಕೊರೊನಾ ಬಗ್ಗೆ ಚಿಂತಿತರಾಗಿದ್ದೇವೆ ಹಾಗಾಗಿ ಕೆಲ ವಿಷಯಗಳ ಬಗ್ಗೆ ನಾವು ಗಮನವಿಡಬೇಕೆಂದು ಹೇಳಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣದಿಂದ ಆದಷ್ಟು ಸಾಮಾಜಿಕವಾಗಿ ನಡೆಯುವ ಕಾರ್ಯಕ್ರಮಗಳಿಂದ ದೂರವಿರಿ ಎಂದು ಕ್ರಿಕೆಟ್ ದೇವರು ಸಾರ್ವಜನಿಕರಿಗೆ ಮನವಿ ಜತೆ ಸಲಹೆ ನೀಡಿದ್ದಾರೆ.
ಎರಡನೇಯದಾಗಿ ಯಾರಾದ್ರೂ ಹುಷಾರಿಲ್ಲದೆ ಇದ್ರೆ ಅಂತವರಿಗೆ ವೈದ್ಯರ ಬಳಿಗೆ ತೆರಳುವಂತೆ ಸೂಚಿಸಿ. ನಿಮಗೇ ಏನಾದರೂ ಜ್ವರ, ಶೀತ, ಗಂಟಲು ನೋವಿನಂತಹ ಲಕ್ಷಣ ಕಂಡುಬಂದರೆ ಖಂಡಿತವಾಗಿ ಡಾಕ್ಟರ್ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ, ದಯವಿಟ್ಟು ನಿರ್ಲಕ್ಷಿಸದಿರಿ. ಏನಾದರೂ ತುರ್ತು ಸಂದರ್ಭವಾದರೆ 1075 ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿ. ಇನ್ನು ಪ್ರತಿಯೊಬ್ಬರೂ ಸ್ವಚ್ಚತೆಗೆ ಗಮನ ನೀಡಿ. ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಚಗೊಳಿಸುತ್ತಿರಿ, ಕನಿಷ್ಠ 20 ಸೆಕೆಂಡ್ಗಳಷ್ಟು ಕಾಲ ಕೈಗಳನ್ನು ಸ್ವಚ್ಚಗೊಳಿಸಿ.
ಕೊನೇಯದಾಗಿ ಏನಂದ್ರೆ ಧೈರ್ಯವಾಗಿರಿ. ಯಾವುದೇ ವದಂತಿಗಳನ್ನು ನಂಬಬೇಡಿ. ನಾವೆಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡೋಣ. ಕೊರೊನಾವನ್ನು ಧೈರ್ಯದಿಂದ ಎದುರಿಸೋಣ ಎಂಬ ಸಂದೇಶ ನೀಡಿದ್ದಾರೆ.