ಚೆನ್ನೈ: ಸ್ವಯಂಪ್ರೇರಿತರಾಗಿ ಕೋವಿಶೀಲ್ಡ್ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ಇಲ್ಲಿನ ಅಣ್ಣಾ ನಗರ ಮೂಲದ 40 ವರ್ಷದ ವ್ಯಕ್ತಿಯೊಬ್ಬರು, ಲಸಿಕೆಯಿಂದ ಮನುಷ್ಯನ ಮೇಲೆ ದೈಹಿಕ ಮತ್ತು ಮಾನಸಿಕ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ರಾಮಚಂದ್ರ ಆಸ್ಪತ್ರೆ ವಿರುದ್ಧ ₹5 ಕೋಟಿ ಹಾನಿ ಆರೋಪ ಮಾಡಿದ್ದಾರೆ. ಲಸಿಕೆ ಸುರಕ್ಷಿತವಲ್ಲ. ಅದರ ಹೆಚ್ಚಿನ ಪರೀಕ್ಷೆ, ಉತ್ಪಾದನೆ ಅಥವಾ ವಿತರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಲಸಿಕೆ ಪಡೆದ ನಂತರ ವಾಂತಿ, ತಲೆನೋವು, ಜ್ವರ ಕಾಣಿಸಿತು. ವ್ಯಾಕ್ಸಿನೇಷನ್ ನಂತರ ಅಡ್ಡ ಪರಿಣಾಮಗಳನ್ನು ಗಮನಿಸಲಾಗುವುದು ಎಂದು ಸಹಿ ಹಾಕಿಸಿಕೊಂಡಾಗ ತಿಳಿಸಲಾಗಿತ್ತು. ಪತಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 10 ದಿನಗಳ ಕಾಲ ತಮ್ಮ ಕೆಲಸ ಮುಂದುವರೆಸಿದರು.
ಆದರೆ, ಅವರು ಮುಂದಿನ ದಿನಗಳಲ್ಲಿ ಹೆಚ್ಚು ಆಯಾಸಗೊಂಡರು. ಈಗವರು ತುಂಬಾ ನಿತ್ರಾಣರಾಗಿದ್ದಾರೆ. ಇಷ್ಟಾದ್ರೂ ವೈದ್ಯರು ಅವರನ್ನು ಪರಿಶೀಲನೆಗೆ ಒಳಪಡಿಸುತ್ತಿಲ್ಲ ಎಂದು ಸಂತ್ರಸ್ತನ ಪತ್ನಿ ಅಳಲು ತೋಡಿಕೊಂಡರು. ಕೂಡಲೇ ಲಸಿಕೆ ನಿಲ್ಲಿಸಿ, ಇದರಿಂದ ಮತ್ತಷ್ಟು ಮಂದಿಗೆ ತೊಂದರೆಯಾಗಲಿದೆ ಎಂದು ಮನವಿ ಮಾಡಿದರು.
ಇದನ್ನೂ ಓದಿ...'ಲವ್ ಜಿಹಾದ್' ವಿರುದ್ಧದ ಕಾನೂನನ್ನ ಯುಪಿ ಸರ್ಕಾರ ಮರುಪರೀಲಿಸಬೇಕು: ಮಾಯಾವತಿ
ಲಸಿಕೆ ಪ್ರಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿರುವ ಮೈಕ್ರೋಬಯಾಲಜಿ ಮತ್ತು ವೈರಾಲಜಿ ವಿಭಾಗದ ಡಾ.ಜಾಕೋಬ್ ಜಾನ್ ಅವರು, ಸ್ವಯಂಪ್ರೇರಿತವಾಗಿ ಲಸಿಕೆ ಪ್ರಯೋಗಕ್ಕೆ ಒಳಪಡುವ ವ್ಯಕ್ತಿಗಳಿಗೆ ಸಂಪೂರ್ಣ ಮಾಹಿತಿ ತಿಳಿಸುವುದಿಲ್ಲ.
ಜ್ವರ, ತಲೆನೋವು ಅಥವಾ ಸ್ವಲ್ಪಮಟ್ಟಿಗೆ ದೇಹದ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ಹೊರತುಪಡಿಸಿದ್ರೆ ಬೇರಾವ ತೊಂದರೆಗಳು ಬರಲ್ಲ ಎಂದಷ್ಟೇ ಆತನಿಗೆ ತಿಳಿಸಿರಬಹುದು ಎಂದರು. ಹೇಗಾದ್ರೂ ಮಾಡಿ ಲಸಿಕೆ ಪ್ರಯೋಗಕ್ಕೆ ಒಳಗಾಗಲು ಸಹಿ ಮಾಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಷರತ್ತುಗಳು ಯಾವುವು ಎಂಬುದನ್ನು ಲಸಿಕೆಗೆ ಒಳಪಡುವವರಿಗೆ ಸೂಚಿಸಿರುವುದಿಲ್ಲ.
ಅಡ್ಡ ಪರಿಣಾಮ ತಪ್ಪಿಸಲು ಈ ರೋಗನಿರೋಧಕ ಲಸಿಕೆ ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ್ರೆ ವ್ಯತಿರಿಕ್ತ ಪರಿಣಾಮದ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಿದರು. ಕೋವಿಶೀಲ್ಡ್ ಲಸಿಕೆ ಪ್ರಯೋಗಕ್ಕೆ ಒಳಗಾದ ವ್ಯಕ್ತಿಗೆ ಸೆರೆಬ್ರಲ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಗುರುತಿಸಲಾಗಿರುವುದರಿಂದ ಲಸಿಕೆ ಪ್ರಯೋಗ ನಿಲ್ಲಿಸಬೇಕು.
ಔಷಧ ನಿಯಂತ್ರಣ ಇಲಾಖೆ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಸ್ವಯಂ ಸೇವಕರ ಕಲ್ಯಾಣಕ್ಕಾಗಿ ಲಸಿಕೆ ಸರಿಪಡಿಸುವ ಕ್ರಮಗಳನ್ನು ತಜ್ಞರ ತಂಡವು ಅನ್ವೇಷಿಸಬೇಕಿದೆ. ಅಡ್ಡಪರಿಣಾಮಗಳಿಗೆ ಕಾರಣವಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ...ರಜಿನಿ ಚುನಾವಣೆ ಪ್ರವೇಶ ಇನ್ನೂ ನಿಗೂಢ: ಅಡ್ಡಗೋಡೆ ಮೇಲೆ ದೀಪ ಇಟ್ಟ ತಲೈವಾ
ವೈದ್ಯರಿಗೆ ಮಾಹಿತಿ ಕೊರತೆ : ವೈದ್ಯಕೀಯ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕರೊಬ್ಬರು ಲಸಿಕೆ ನೀಡುವ ವೈದ್ಯರಿಗೆ ಅದರ ಬಗ್ಗೆ ಕಡಿಮೆ ಜ್ಞಾನ ಇರುತ್ತದೆ ಎಂದರು. ಆಕ್ಸ್‌ಫರ್ಡ್ ತಂಡದ ಮುಖ್ಯಸ್ಥ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್ ಅವರನ್ನು ಹೊರತುಪಡಿಸಿ ಬೇರಾರಿಗೂ ಲಸಿಕೆ ಕುರಿತು ಸಂಪೂರ್ಣ ಮಾಹಿತಿ ಇಲ್ಲ.
ಸ್ವಯಂಸೇವಕರಿಗೆ ನಿಜವಾದ ಲಸಿಕೆ ನೀಡಲಾಗಿದೆಯೇ ಇಲ್ಲವೇ ಎಂಬುದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಮಾತ್ರ ಗೊತ್ತಿದೆ ಎಂದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಈ ಲಸಿಕೆ ಬ್ರಿಟಿಷ್ ಫಾರ್ಮಾ ಕಂಪನಿ ಅಸ್ಟ್ರಾ ಜೆನೆಕಾ ಸಹಯೋಗದಲ್ಲಿದೆ.
ಅದನ್ನು ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಸೇರಿ ಇತರೆ ದೇಶಗಳಲ್ಲಿ ಮಾನವನ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಭಾರತದಲ್ಲಿ ಪುಣೆಯ ಸೀರಮ್ ಸಂಸ್ಥೆ, ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಮತ್ತು ರಾಮಚಂದ್ರ ಆಸ್ಪತ್ರೆಗಳು ಅದರ ಭಾಗವಾಗಿವೆ.