ETV Bharat / bharat

ವಿಶೇಷ ಲೇಖನ: ಕೊರೊನಾ ಬಿಕ್ಕಟ್ಟು ತಂದ ಆಪತ್ತು: ಅನ್ನದಾತ ಕಂಗಾಲು!

author img

By

Published : Apr 29, 2020, 7:33 PM IST

Updated : Apr 29, 2020, 7:58 PM IST

ಲಾಕ್ ಡೌನ್​ನಿಂದಾಗಿ ಕೃಷಿ ಕಾರ್ಮಿಕರ ಕೊರತೆ, ಸಮರ್ಪಕ ಸಾರಿಗೆ ಸೌಲಭ್ಯಗಳು ಇಲ್ಲದಿರುವುದು ಮತ್ತು ಮಾರುಕಟ್ಟೆ ಪ್ರಾಂಗಣಗಳು ಲಭ್ಯ ಇಲ್ಲದಿರುವುದು ರೈತರನ್ನು ಈ ಭೀಕರ ಸ್ಥಿತಿಗೆ ಕೊಂಡೊಯ್ದಿದೆ. ತಾವು ಬೆಳೆದ ಬೆಳೆಗಳಿಗೆ ಖರೀದಿದಾರರು ಸಿಗದಿರುವುದರಿಂದ ಹೆಚ್ಚಿನ ರೈತರು ಹತಾಶರಾಗಿದ್ದಾರೆ. ಸಾರಿಗೆ ಸೌಲಭ್ಯಗಳ ಕೊರತೆಯಿಂದಾಗಿ ಉತ್ಪನ್ನಗಳ ಬೆಲೆ ಸ್ಥಿರವಾಗಿರುವುದರಿಂದ ಹಣ್ಣು ಮತ್ತು ತರಕಾರಿ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

Covide-19 and agriculture
ರೈತ

ಸಾಮಾನ್ಯ ಸಂದರ್ಭಗಳಲ್ಲಿ ವರ್ಷದ ಈ ಸಮಯದಲ್ಲಿ, ಕೃಷಿಭೂಮಿಗಳು ಮತ್ತು ಮಾರುಕಟ್ಟೆಗಳಲ್ಲಿ ರಾಬಿ ಇಳುವರಿ ಭರಾಟೆಯನ್ನು ನೋಡಬಹುದಾಗಿತ್ತು. ಆದರೆ, ಕೋವಿಡ್​ನಿಂದಾಗಿ ರೈತರ ಜೀವನೋಪಾಯವು ಸಂಕಷ್ಟದ ಅಂಚಿಗೆ ಬಂದು ತಲುಪಿದೆ.

ಸಿಆರ್​ಐಎಸ್​ಐಎಲ್ (ಭಾರತೀಯ ವಿಶ್ಲೇಷಣಾತ್ಮಕ ಕಂಪನಿ ರೇಟಿಂಗ್, ಸಂಶೋಧನೆ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಸಂಸ್ಥೆ) ನಡೆಸಿದ ಅಧ್ಯಯನವು ರೈತ ಸಮುದಾಯ ಎದುರಿಸುತ್ತಿರುವ ರಾಷ್ಟ್ರವ್ಯಾಪಿ ಸಂಕಟವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಮತ್ತು ಸಾಸಿವೆ ಇಳುವರಿ ಶೇ. 90ರಷ್ಟು ಕಡಿಮೆಯಾಗಿದೆ. ಗೋಧಿ ಬೆಳೆಗೆ ಹೆಸರುವಾಸಿಯಾದ ಎರಡು ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಕಟಾವು ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ ಎನ್ನುವುದು ಅಧ್ಯಯನದ ಸಾರಾಂಶ.

ಸಿಅರ್​ಐಎಸ್​ಐಎಲ್ ಅಧ್ಯಯನದ ಪ್ರಕಾರ ಈ ನಿಷ್ಕ್ರಿಯ ಸ್ಥಿತಿಗೆ ನಾಲ್ಕು ಪ್ರಮುಖ ಕಾರಣಗಳಿವೆ. ಈ ವರ್ಷ ರಾಬಿ ಕಟಾವು ವಿಳಂಬ, ಲಾಕ್ ಡೌನ್​ನಿಂದಾಗಿ ಕೃಷಿ ಕಾರ್ಮಿಕರ ಕೊರತೆ, ಸಮರ್ಪಕ ಸಾರಿಗೆ ಸೌಲಭ್ಯಗಳು ಇಲ್ಲದಿರುವುದು ಮತ್ತು ಮಾರುಕಟ್ಟೆ ಪ್ರಾಂಗಣಗಳು ಲಭ್ಯ ಇಲ್ಲದಿರುವುದು ರೈತರನ್ನು ಈ ಭೀಕರ ಸ್ಥಿತಿಗೆ ಕೊಂಡೊಯ್ದಿದೆ. ತಾವು ಬೆಳೆದ ಬೆಳೆಗಳಿಗೆ ಖರೀದಿದಾರರು ಸಿಗದಿರುವುದರಿಂದ ಹೆಚ್ಚಿನ ರೈತರು ಹತಾಶರಾಗಿದ್ದಾರೆ. ಸಾರಿಗೆ ಸೌಲಭ್ಯಗಳ ಕೊರತೆಯಿಂದಾಗಿ ಉತ್ಪನ್ನಗಳ ಬೆಲೆ ಸ್ಥಿರವಾಗಿರುವುದರಿಂದ ಹಣ್ಣು ಮತ್ತು ತರಕಾರಿ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ರೈತರು ಟನ್​ಗಟ್ಟಲೆ ಬೆಳೆಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಅದರಲ್ಲೂ, ವಿಶೇಷವಾಗಿ ದ್ರಾಕ್ಷಿ ಮತ್ತು ಸಿಹಿ ನಿಂಬೆ ಹಣ್ಣುಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಕೆಲವು ರೈತರು ಬೆಳೆದ ಬೆಳೆಗಳನ್ನು ತಿನ್ನಲು ತಮ್ಮ ಜಮೀನುಗಳಲ್ಲಿ ಹಸು-ಕರುಗಳನ್ನು ಮೇಯಲು ಬಿಡುತ್ತಿದ್ದಾರೆ. ಈ ಬೇಸಿಗೆಯಲ್ಲಿ ಹೆಚ್ಚು ಲಾಭ ಗಳಿಸಲು ತಯಾರಾಗಿದ್ದ ಮಾವು ಬೆಳೆಗಾರರು ಅಂತಾರಾಜ್ಯ ಗಡಿಗಳನ್ನು ಮುಚ್ಚಿದ್ದರಿಂದ ತೀವ್ರವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಅಸಮರ್ಪಕ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯನ್ನು ವೀಕ್ಷಿಸುವುದಕ್ಕಿಂತ ಕೆಟ್ಟ ಪರಿಸ್ಥಿತಿ ಯಾವುದಿದೆ?

ಈ ವರ್ಷ 1 ಕೋಟಿ ಟನ್‌ಗಿಂತಲೂ ಅಧಿಕ ಭತ್ತ ತೆಲಂಗಾಣದಲ್ಲಿ ಪ್ರವಾಹವನ್ನೇ ಹರಿಸಲಿದೆ ಎಂದು ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಘೊಷಿಸಿದ್ದರು, ಅಲ್ಲದೆ ತಮ್ಮ ಸರ್ಕಾರವು ಗ್ರಾಮೀಣ ಕೃಷಿ ವ್ಯಾಪಾರ ಕೇಂದ್ರಗಳಿಂದ ಪ್ರತಿ ಧಾನ್ಯವನ್ನು ಖರೀದಿಸುವುದಾಗಿ ಅವರು ರೈತರಿಗೆ ಭರವಸೆ ನೀಡಿದರು. ಮೆಕ್ಕೆಜೋಳ ಮತ್ತು ಇತರ ರಾಬಿ ಬೆಳೆ ಖರೀದಿಗೆ ತೆಲಂಗಾಣ ಸರಕಾರ 28,000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವುದು ಶ್ಲಾಘನೀಯ ಕ್ರಮವಾಗಿದೆ. ಈ ರೀತಿಯ ಉಪಕ್ರಮವನ್ನು ಪ್ರತಿ ರಾಜ್ಯವೂ ತೆಗೆದುಕೊಳ್ಳಬೇಕು. ತೆಲಂಗಾಣ ಸರ್ಕಾರದ ಉದಾರ ನೀತಿಯ ಹೊರತಾಗಿಯೂ, ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರ ಜೀವನವನ್ನು ಇನ್ನಷ್ಟು ದುಸ್ಥರಗೊಳಿಸಿದ್ದಾರೆ. ಸಾಂಸ್ಥಿಕ ಬೆಂಬಲ ಅಥವಾ ಬೆಳೆದ ಬೆಲೆಗಳಿಗೆ ಸಮರ್ಪಕ ಬೆಂಬಲ ಬೆಲೆಗಳಿಲ್ಲದೆ, ಅನೇಕ ರಾಜ್ಯಗಳ ರೈತರು ಈ ವರ್ಷದ ಸುಗ್ಗಿಯ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಂಭವನೀಯ ಆಹಾರ ಬಿಕ್ಕಟ್ಟನ್ನು ಎದುರಿಸಲು ಕೃಷಿ ಸಮುದಾಯವು ಶ್ರಮಿಸುತ್ತಿದ್ದರೆ, ಭಾರತೀಯರಾದ ನಾವು ಅವರ ಪ್ರಯತ್ನಗಳಿಗೆ ನ್ಯಾಯಯುತ ಬೆಲೆ ನೀಡಲು ನಿರಾಕರಿಸುತ್ತಿದ್ದೇವೆ. ವಿಶ್ವದಾದ್ಯಂತ 13 ಕೋಟಿ ಜನರು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಕೋವಿಡ್ ಸಂಕ್ರಾಮಿಕ ಸೋಂಕು ಅಂತ್ಯದ ವೇಳೆಗೆ ಈ ಸಂಖ್ಯೆ 26 ಕೋಟಿಗೆ ಏರಲಿದೆ. ಅಂತಹ ಸನ್ನಿವೇಶಗಳ ಮಧ್ಯೆ, ಯಾವುದೇ ಬೆಳೆಯ ಉತ್ಪನ್ನಗಳನ್ನು ಬರಿದು ಮಾಡಲು ಬಿಡುವುದು ಮೂರ್ಖತನ. ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೇತನವನ್ನು ಆಹಾರ ಧಾನ್ಯಗಳ ರೂಪದಲ್ಲಿ ನೀಡಲು ಕೇಂದ್ರ ಅನುಮತಿ ನೀಡಬೇಕೆಂದು ಒತ್ತಾಯಿಸುವ ಮೂಲಕ ವಿನೂತನ ಪರಿಕಲ್ಪನೆ ಯನ್ನು ಸೂಚಿಸಿದರು.

ಈ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ಉದ್ಯೋಗ ಸೃಷ್ಟಿ ಮತ್ತು ಆಹಾರ ಧಾನ್ಯಗಳ ಬಳಕೆ ಎರಡನ್ನೂ ಒಂದೇ ಸಮಯದಲ್ಲಿ ಸಾಧಿಸಬಹುದಾಗಿದೆ. ಅದೇ ಸಂದರ್ಭದಲ್ಲಿ ಸರ್ಕಾರಗಳು ಬಹಳ ಬೇಗ ಕೆಡಬಹುದಾದ ತರಕಾರಿಗಳು, ಹಣ್ಣುಗಳು ಮತ್ತು ಇತರ ಉತ್ಪನ್ನಗಳನ್ನು ಸಂಗ್ರಹಿಸಿ ತ್ವರಿತವಾಗಿ ಶೀತಲಿಕರಣ ಘಟಕಗಳಿಗೆ ಸಾಗಿಸಬೇಕಾಗುತ್ತದೆ. ಸಂಗ್ರಹಿಸಿದ ಈ ಉತ್ಪನ್ನಗಳನ್ನು ಅಗತ್ಯ ಸಂದರ್ಭಗಳಲ್ಲಿ ರಫ್ತು ಮಾಡಬಹುದು ಅಥವಾ ದೇಶೀಯ ಮಾರುಕಟ್ಟೆಗೆ ಬಿಡಬಹುದು. ಅಸಾಧಾರಣ ಕಾಲದಲ್ಲಿ, ಅಸಾಧಾರಣ ನಿರ್ಧಾರಗಳಿಂದ ಮಾತ್ರ ರಾಷ್ಟ್ರವನ್ನು ಉಳಿಸಲು ಸಾಧ್ಯ

Last Updated : Apr 29, 2020, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.