ETV Bharat / bharat

ಭಾರತದಿಂದ ಅನುಮೋದಿಸಲ್ಪಟ್ಟ ಕೋವಿಡ್ ಲಸಿಕೆಗಳು ಯಾವುವು? - Zydus Cadila ZyCov-D vaccine

ಭಾರತ್ ಬಯೋಟೆಕ್‌ನ ಕೋವಾಕ್ಸಿನ್​, ಕೋವಿಶೀಲ್ಡ್ , ಜೈಕೋವ್-ಡಿ ಲಸಿಕೆಗಳು ಭಾರತದಲ್ಲಿ ಬಳಸಲು ಅನುಮೋದನೆ ಪಡೆದುಕೊಂಡಿವೆ.

ಕೋವಿಡ್ ಲಸಿಕೆಗಳು
ಕೋವಿಡ್ ಲಸಿಕೆಗಳು
author img

By

Published : Jan 5, 2021, 2:21 AM IST

ನವದೆಹಲಿ: ಭಾರತ್ ಬಯೋಟೆಕ್‌ನ ಕೋವಾಕ್ಸಿನ್​ನನ್ನು​ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಮೇಲೆ ಪ್ರಯೋಗ ಮಾಡಲು ಅನುಮೋದನೆ ಸಿಕ್ಕಿದೆ. ವಯಸ್ಕರ ಮೇಲೆ ಪ್ರಯೋಗಗಳನ್ನು ನಡೆಸಲು ಸೀರಮ್‌ನ ಕೋವಿಶೀಲ್ಡ್ ಬಳಸಬಹುದಾಗಿದೆ.

ಜೈಕೋವ್-ಡಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಡಿಸಿಜಿಐ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ಗೆ ಅನುಮೋದನೆ ನೀಡಿದೆ. ಮುಂಬರುವ ವಾರಗಳಲ್ಲಿ, ಫೈಜರ್ ಲಸಿಕೆ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

ಓದಿ:ನಮ್ಮದು ಜಾಗತಿಕ ಕಂಪನಿ, ಲಸಿಕೆ ಬಗ್ಗೆ ಯಾವುದೇ ಅನುಮಾನ ಬೇಡ: ಭಾರತ್​ ಬಯೋಟೆಕ್​

ಕೋವಿಶೀಲ್ಡ್: ಕೋವಿಶೀಲ್ಡ್​​ನನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಫಾರ್ಮಾ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಭಾರತದ ಸೀರಮ್ ಸಂಸ್ಥೆ ಅವರ ಉತ್ಪಾದನಾ ಮತ್ತು ಪ್ರಯೋಗದ ಪಾಲುದಾರ.

ಕೊವಾಕ್ಸಿನ್: ಕೋವಾಕ್ಸಿನ್ ಕೋವಿಡ್ -19 ವಿರುದ್ಧದ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಜೈಡಸ್ ಕ್ಯಾಡಿಲಾ ಜೈಕೋವ್-ಡಿ ಲಸಿಕೆ: ಸುಮಾರು 30,000 ಸ್ವಯಂಸೇವಕರ ಮೇಲೆ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ಜೈಡಸ್ ಕ್ಯಾಡಿಲಾ ಅನುಮೋದನೆಯನ್ನು ಪಡೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.