ಶಿಮ್ಲಾ (ಎಚ್‌ಪಿ) / ಲೇಹ್ (ಲಡಾಖ್) / ಮಲ್ಲಾಪುರಂ (ಕೇರಳ): ಕೋವಿಡ್ -19 ವಿರುದ್ಧ ಭಾರತ ಜ. 16 ರಂದು ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದು, ಪುಣೆಯ ಸೀರಮ್ ಸಂಸ್ಥೆ ತಯಾರಿಸಿದ ಲಕ್ಷಾಂತರ ಡೋಸ್ ಕೋವಿಶೀಲ್ಡ್ ಲಸಿಕೆ ಭಾರತ ದೇಶಾದ್ಯಂತ ತಲುಪಿದೆ.
ಪುಣೆಯ ಸೀರಮ್ ಸಂಸ್ಥೆಯಿಂದ ಮೊದಲ ರವಾನೆಯ ಭಾಗವಾಗಿ ಹಿಮಾಚಲ ಪ್ರದೇಶವು ಗುರುವಾರ ಸಂಜೆ 93,000 ಕೋವಿಡ್ ಲಸಿಕೆ ಡೋಸ್ ಸ್ವೀಕರಿಸಿದೆ. ಈ ಪ್ರದೇಶ ಸದ್ಯ 800 ಸಕ್ರಿಯ ಪ್ರಕರಣ ಹೊಂದಿದ್ದು, ಹಿಮಾಚಲ ಪ್ರದೇಶ ಸೋಂಕು ಮುಕ್ತವಾಗಲಿದೆ.
ಕೇರಳ ರಾಜ್ಯ ಹೆಚ್ಚುತ್ತಿರುವ ಸೋಂಕು ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದ್ದು, ಲಸಿಕೆಯ ಮೊದಲ ಬ್ಯಾಚ್ ಅನ್ನು ಮಲ್ಲಾಪುರಂನಲ್ಲಿ ಸ್ವೀಕರಿಸಿದೆ. ದಕ್ಷಿಣ ರಾಜ್ಯವು 65,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಪ್ರದೇಶ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: ಭಾರತದಲ್ಲಿ ರೂಪಾಂತರಿ ಕೊರೊನಾ ಆತಂಕ: ಈವರೆಗೆ ಪತ್ತೆಯಾದ ಕೇಸ್ಗಳೆಷ್ಟು ಗೊತ್ತು?
ಇನ್ನೂ ಲಡಾಖ್ 11,500 ಡೋಸ್ ಕೋವಿಶೀಲ್ಡ್ ಲಸಿಕೆ ಸ್ವೀಕರಿಸಿದೆ. ಲೇಹ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದ ಜಮ್ಯಾಂಗ್ ನಮ್‌ಗ್ಯಾಲ್ ಮತ್ತು ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಫುಂಟ್‌ಸಾಗ್ ಆಂಗ್‌ಚುಕ್ ಅವರು ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 16ರ ಬೆಳಗ್ಗೆ 10: 30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಈ ಹಂತದಲ್ಲಿ 3 ಕೋಟಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ಅವರ ಹೆಸರನ್ನು ಪಟ್ಟಿ ಮಾಡಲಾಗಿದೆ.