ETV Bharat / bharat

ಇದು ಶುಭಸುದ್ದಿ: ಕೊರೊನಾದಿಂದ ಚೇತರಿಸಿಕೊಂಡವರ ಪ್ರಮಾಣ ಶೇ.70ಕ್ಕೇರಿಕೆ

ದೇಶದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 70.38ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಅಂದರೆ ಈವರೆಗೆ 16,39,600 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾಜ್​ ಆಗಿದ್ದಾರೆ. ಸದ್ಯ ಕೇವಲ ಶೇ 27.64ರಷ್ಟು ಸೋಂಕಿತರಷ್ಟೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

recovery
ಕೊರೊನಾ
author img

By

Published : Aug 12, 2020, 10:30 AM IST

ಹೈದರಾಬಾದ್​: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 60,963 ಜನರಲ್ಲಿ ಕೊರೊನಾ ಪಾಸಿಟಿವ್​ ವರದಿಯಾಗಿದ್ದು, ಮಾರಕ ಸೋಂಕಿಗೆ ಒಂದೇ ದಿನ 834 ಮಂದಿ ಬಲಿಯಾಗಿದ್ದಾರೆ.

ಸದ್ಯ ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 23,29,639ಕ್ಕೇ ಏರಿಕೆಯಾಗಿದೆ. ಈವರೆಗೆ 16,39,600 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​​ ಆಗಿದ್ದಾರೆ. ಉಳಿದಂತೆ 6,43,948 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇಲ್ಲಿಯವರೆಗೂ ಒಟ್ಟು 46,091 ಜನ ಮಾರಕ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಶೇ 70.38 ಸೋಂಕಿತರು ಗುಣಮುಖ

ಸಂತಸದ ವಿಷಯವೆಂದರೆ ದೇಶದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 70.38ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೇವಲ ಶೇ 27.64 ರಷ್ಟು ಸೋಂಕಿತರಷ್ಟೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1.98 ಕೊರೊನಾ ಸಾವುಗಳು ದೇಶದಲ್ಲಿ ದಾಖಲಾಗಿವೆ.

ದೇಶದಲ್ಲಿ ಈವರೆಗೆ 2,60,15,297(2.6ಕೋಟಿ) ಸ್ಯಾಂಪಲ್​ಗಳ ಪರೀಕ್ಷೆ ನಡೆದಿದ್ದು, ಕಳೆದ ಒಂದೇ ದಿನ, ಅಂದರೆ ಆಗಸ್ಟ್​ 11ರಂದು 7,33,449 ಗಂಟಲ ದ್ರವದ ಮಾದರಿಗಳ ಪರೀಕ್ಷೆ ನಡೆದಿದೆ ಎಂದು ಐಸಿಎಂಆರ್​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.