ETV Bharat / bharat

ಕೊರೊನಾ ನಿಯಂತ್ರಣಕ್ಕೆ ಕೇರಳ ಹೊಸ ಪ್ಲಾನ್​; ಅಲೆಪ್ಪಿಯ ದೋಣಿಮನೆಗಳೀಗ ಕ್ವಾರಂಟೈನ್​ ಘಟಕ! - ಕೇರಳ ಕೊರೊನಾ ಅಪ್ಡೇಟ್​

ಅಲೆಪ್ಪಿ ಕೇರಳದ ಪ್ರಮುಖ ಪ್ರವಾಸಿ ಸ್ಥಳ. ಇಲ್ಲಿನ ಹೌಸ್​ಬೋಟ್​ (ದೋಣಿಯಲ್ಲೇ ನಿರ್ಮಿಸಲಾದ ಮನೆ)ಇಲ್ಲಿನ ಪ್ರಮುಖ ಆಕರ್ಷಣೆ. ಇದೀಗ ಮನೆಯಂತಿರುವ ಈ ಬೋಟ್​ಗಳನ್ನು ಐಸೋಲೇಷನ್​ ಘಟಕವನ್ನಾಗಿ ಪರಿವರ್ತಿಸಲು ತಯಾರಿ ನಡೆಯುತ್ತಿದೆ. ಈ ಭಾಗದಲ್ಲಿ ಸಾವಿರಾರು ದೋಣಿಮನೆಗಳಿದ್ದು, ಈ ತೇಲುವ ಮನೆಗಳನ್ನು ಕ್ವಾರಂಟೈನ್​ ಬೋಟ್​ಗಳನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುವ ನಿರೀಕ್ಷೆಯಲ್ಲಿ ಸರ್ಕಾರವಿದ್ದರೂ, ಯಾವುದೇ ಸನ್ನಿವೇಶದಲ್ಲೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಮುಂಜಾಗ್ರತೆ ವಹಿಸುತ್ತಿದೆ.

houseboats in Alappuzha
ಅಲೆಪ್ಪಿಯ ದೋಣಿಮನೆಗಳು ಈಗ ಕ್ವಾರಂಟೈನ್​ ಘಟಕ
author img

By

Published : Apr 11, 2020, 1:57 PM IST

ಅಲೆಪ್ಪಿ(ಕೇರಳ): ಕೇರಳದ ಆಕರ್ಷಕ ಪ್ರವಾಸಿ ಸ್ಥಳ ಅಲೆಪ್ಪಿ. ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವೀಗ ಕೊರೊನಾದಿಂದಾಗಿ ಐಸೋಲೇಷನ್​ ಕೇಂದ್ರವಾಗಿ ಮಾರ್ಪಡುತ್ತಿದೆ.

ಅಲೆಪ್ಪಿಯ ದೋಣಿಮನೆಗಳು ಈಗ ಕ್ವಾರಂಟೈನ್​ ಘಟಕ

ಹೌದು, ಭಾರತಕ್ಕೆ ಕೊರೊನಾ ಲಗ್ಗೆ ಇಟ್ಟಿದ್ದೇ ಕೇರಳದ ಮೂಲಕ. ಜನವರಿ 30ರಂದು ಇಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತಯಾಗಿತ್ತು. ಆ ಬಳಿಕ ಒಂದರ ನಂತರ ಮತ್ತೊಂದರಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಾ ಹೋದವು. ಆದ್ರೆ, ಆ ಬಳಿಕ ರಾಜ್ಯದಲ್ಲಿ ಕೈಗೊಳ್ಳಲಾದ ಪ್ರಮುಖ ಮುಂಜಾಗ್ರತಾ ಕ್ರಮಗಳಿಂದಾಗಿ ಕೇರಳದಲ್ಲಿ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ದೇಶದ ಉಳಿದ ರಾಜ್ಯಗಳಲ್ಲಿ ಕೊರೊನಾ ಕಬಂಧಬಾಹು ವಿಸ್ತಾರವಾಗುತ್ತಾ ಹೋಗುತ್ತಿದ್ದರೆ, ಕೇರಳದಲ್ಲಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಕೊರೊನಾದಿಂದ ಕೇವಲ ಮೂವರಷ್ಟೇ ಸಾವನ್ನಪ್ಪಿದ್ದು, ರಾಜ್ಯದಲ್ಲಿ ವೈರಸ್​ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದೆ.

ಈ ವಿಚಾರದಲ್ಲಿ ರಿಸ್ಕ್​ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ತಯಾರಿಲ್ಲದ ಕೇರಳ ಸರ್ಕಾರ, ಮುಂದಿನ ದಿನಗಳಲ್ಲಿ ಯಾವುದೇ ಸನ್ನಿವೇಶ ಬಂದರೂ ಅದನ್ನು ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ.

ಐಸೋಲೇಷನ್​ ಕೇಂದ್ರವಾಗಿ ಬದಲಾಗುತ್ತಿದೆ ದೋಣಿಮನೆಗಳು:

ಅಲೆಪ್ಪಿ ಕೇರಳದ ಪ್ರಮುಖ ಪ್ರವಾಸಿ ಸ್ಥಳ. ಇಲ್ಲಿನ ಹೌಸ್​ಬೋಟ್​ (ದೋಣಿಯಲ್ಲೇ ನಿರ್ಮಿಸಲಾದ ಮನೆ)ಇಲ್ಲಿನ ಪ್ರಮುಖ ಆಕರ್ಷಣೆ. ಇದೀಗ ಇದೇ ಮನೆಯಂತಿರುವ ಬೋಟ್​ಗಳನ್ನು ಐಸೋಲೇಷನ್​ ಘಟಕವನ್ನಾಗಿ ಪರಿವರ್ತಿಸಲು ತಯಾರಿ ನಡೆಯುತ್ತಿದೆ. ಈ ಭಾಗದಲ್ಲಿ ಸಾವಿರಾರು ದೋಣಿಮನೆಗಳಿದ್ದು, ಈ ತೇಲುವ ಮನೆಗಳನ್ನು ಕ್ವಾರಂಟೈನ್​ ಬೋಟ್​ಗಳನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುವ ನಿರೀಕ್ಷೆಯಲ್ಲಿ ಸರ್ಕಾರವಿದ್ದರೂ, ಯಾವುದೇ ಸನ್ನಿವೇಶದಲ್ಲೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಮುಂಜಾಗ್ರತೆ ವಹಿಸುತ್ತಿದೆ.

ಅಲೆಪ್ಪಿ ಜಿಲ್ಲೆಯಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಲೋಕೋಪಯೋಗಿ ರಾಜ್ಯ ಸಚಿವ ಜಿ.ಸುಧಾಕರನ್, ಈ ಪ್ರಸ್ತಾಪವನ್ನು ಮಂಡಿಸಿದ ಕೂಡಲೇ ದೋಣಿ ಮಾಲೀಕರು ನಮ್ಮೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆಯೊಂದಿಗೆ ಸಹಕರಿಸಿ, ಜಿಲ್ಲಾಡಳಿತವು ಈಗಾಗಲೇ ದೋಣಿಮನೆಗಳಲ್ಲಿ 2000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ಕೊರೊನಾ ಹರಡುವಿಕೆಯ ನಿಯಂತ್ರಣ ಹೋರಾಟದಲ್ಲಿ ಕೇರಳದಲ್ಲಿ ಸಂಪೂರ್ಣವಾಗಿ ತೊಡಗಿದೆ ಎಂದು ಸುಧಾಕರನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.