ETV Bharat / bharat

ದೇಶದಲ್ಲಿ ಕೋವಿಡ್​ ರಣಕೇಕೆ: 10 ಲಕ್ಷ​​​​ ಗಡಿ ದಾಟಿದ ಸೋಂಕಿತರ ಸಂಖ್ಯೆ...

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಮಿಲಿಯನ್ ಅಂದರೆ​ 10,03,832ಕ್ಕೆ ಹಾಗೂ ಮೃತರ ಸಂಖ್ಯೆ 25,602ಕ್ಕೆ ಏರಿಕೆಯಾಗಿದೆ.

Covid cases cross the 10 lakh mark in India
ಭಾರತದಲ್ಲಿ 10 ಲಕ್ಷ ಕೋವಿಡ್​ ಪ್ರಕರಣಗಳು
author img

By

Published : Jul 17, 2020, 10:05 AM IST

Updated : Jul 17, 2020, 12:23 PM IST

ನವದೆಹಲಿ: ಕೋವಿಡ್​ ಪೀಡಿತ ರಾಷ್ಟ್ರಗಳ ಪೈಕಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿರುವ ಭಾರತದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 10 ಲಕ್ಷ ಗಡಿ ದಾಟಿದೆ. ಇತ್ತ ಸಾವಿನ ಸಂಖ್ಯೆ ಕೂಡ 25 ಸಾವಿರ ಗಡಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 34,956 ಸೋಂಕಿತರು ಪತ್ತೆಯಾಗಿದ್ದು, 687 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 10,03,832ಕ್ಕೆ ಹಾಗೂ ಮೃತರ ಸಂಖ್ಯೆ 25,602ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ. 63ಕ್ಕೂ ಹೆಚ್ಚು ಅಂದರೆ 6,35,757 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 3,42,473 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Last Updated : Jul 17, 2020, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.