ETV Bharat / bharat

ಕೋವಿಡ್-19: ಮಾಸ್ಕ್ ಗ್ಲೌಸ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ - ಕೊರೊನಾ ವೈರಸ್ ಹಿನ್ನೆಲೆ ರಾಷ್ಟ್ರವ್ಯಾಪಿ ಲಾಕ್​ಡೌನ್

ಕೊರೊನಾ ವೈರಸ್ ಹಿನ್ನೆಲೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಧ್ಯೆ ಗುಜರಾತ್‌ನ ಸೂರತ್‌ನಲ್ಲಿ ಕೇವಲ ಆರು ಜನರ ಉಪಸ್ಥಿತಿಯಲ್ಲಿ ವಿವಾಹ ನಡೆಯಿತು. ಪೂಜಾ ಮತ್ತು ದಿಶಾಂಕ್ ದಂಪತಿ ಮಾಸ್ಕ್​ ಧರಿಸಿ ಸರಳವಾಗಿ ಮದುವೆಯಾದರು.

marriage
marriage
author img

By

Published : Apr 17, 2020, 12:20 PM IST

ಸೂರತ್ (ಗುಜರಾತ್): ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಾಗೂ ಕೋವಿಡ್-19 ಭೀತಿಯ ನಡುವೆ, ಸೂರತ್​ನಲ್ಲಿ ದಂಪತಿ ಸರಳ ಸಮಾರಂಭದಲ್ಲಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿಕೊಂಡೇ ವಿವಾಹವಾಗಿದ್ದಾರೆ.

ವಧುವಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಪೂಜಾ ಮತ್ತು ದಿಶಾಂಕ್ ದಂಪತಿ ಕೇವಲ ಆರು ಜನರ ಹಾಜರಾತಿಯಲ್ಲಿ ಮದುವೆಯಾಗಿದ್ದಾರೆ.

"ಅದ್ಧೂರಿ ಮದುವೆ ಸಮಾರಂಭ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಲಾಕ್​ಡೌನ್ ಹಿನ್ನೆಲೆ ಸರಳವಾಗಿ ಮದುವೆಯಾಗಿದ್ದೇವೆ. ನಮ್ಮ ಮನೆಯ ಟೆರೇಸ್​ನಲ್ಲಿ ನಡೆದ ಕಾರ್ಯ್ರಮದಲ್ಲಿ ನಮ್ಮ ಪೋಷಕರು ಸೇರಿದಂತೆ ಕೇವಲ ಆರು ಜನ ಮಾತ್ರ ಉಪಸ್ಥಿತರಿದ್ದರು" ಎಂದು ಮದುಮಗಳು ತಿಳಿಸಿದ್ದಾಳೆ.

"ವಿವಾಹದ ಸ್ಥಳದಲ್ಲಿ ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್​ಗಳನ್ನು ಮುಂಚಿತವಾಗಿಯೇ ಇರಿಸಲಾಗಿತ್ತು. ಕುಟುಂಬದವರು ವಿಡಿಯೋ ಕಾಲ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದರು" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.