ETV Bharat / bharat

ಏಪ್ರಿಲ್​ 14ರ ಬಳಿಕವೂ ರೈಲ್ವೆ ಸಂಚಾರ ಇಲ್ಲ... ಕೇಂದ್ರದ ಮಹತ್ವದ ನಿರ್ಧಾರ!? - Amit Shah

ದೇಶಾದ್ಯಂತ ಘೋಷಿಸಿರುವ 21 ದಿನಗಳ ಲಾಕ್​ಡೌನ್​ ಮುಕ್ತಾಯದ ಬಳಿಕ ಏಪ್ರಿಲ್ 15 ರಿಂದ ದೇಶದಲ್ಲಿ ರೈಲು ಸಂಚಾರ ಆರಂಭಗೊಳ್ಳುವುದು ಬಹುತೇಕ ಡೌಟ್​ ಎನ್ನಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡುವ ಸಾಧ್ಯತೆ ಇದೆ.

COVID-19: Train services likely to remain

author img

By

Published : Apr 10, 2020, 3:02 PM IST

ನವದೆಹಲಿ: ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್​ಡೌನ್​ ಏಪ್ರಿಲ್​ 14ರಂದು ಮುಕ್ತಾಯಗೊಳ್ಳಲಿದ್ದು, ಇದು ಮುಗಿಯುತ್ತಿದ್ದಂತೆ ದೇಶದಲ್ಲಿ ರೈಲ್ವೆ ಸಂಚಾರ ಪುನಾರಂಭಗೊಳ್ಳಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿವೆ. ಆದರೆ ಆ ರೀತಿಯ ಯಾವುದೇ ಯೋಜನೆ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಚರ್ಚೆ ನಡೆಸಿದ್ದು, ರೈಲ್ವೆ ಸಂಚಾರ ಆರಂಭ ಮಾಡದಿರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.

ಈ ಹಿಂದೆ ಕೂಡ ಲಾಕ್​ಡೌನ್​ ಮುಕ್ತಾಯಗೊಳ್ಳುತ್ತಿದ್ದಂತೆ ಏಪ್ರಿಲ್​​ 15ರಿಂದ ದೇಶದಲ್ಲಿ ರೈಲ್ವೆ ಸಂಚಾರ ಪುನಾರಂಭಗೊಳ್ಳಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಕೂಡ ಸ್ಪಷ್ಟನೆ ನೀಡಿತ್ತು. ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಲಿದ್ದು, ಇದಾದ ಬಳಿಕ ಲಾಕ್​ಡೌನ್​ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.