ಥಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಭಾನುವಾರ 72 ಹೊಸ ಕೋವಿಡ್-19 ಸೋಂಕಿತರು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 687 ಕ್ಕೆ ಏರಿದೆ.
ಹೊಸ ರೋಗಿಗಳಲ್ಲಿ ಹೆಚ್ಚಿನವರು ಠಾಣೆ ನಗರದ, ಕಲ್ಯಾಣ್ ಡೊಂಬಿವಾಲಿ, ಮೀರಾ ಭಾಯಂದರ್ ಮತ್ತು ನವಿ ಮುಂಬೈ ಪ್ರದೇಶಗಳಿಂದ ಬಂದವರು ಎಂದು ಅವರು ಹೇಳಿದ್ದಾರೆ. ಪಾಲ್ಘರ್ನಲ್ಲಿ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳ ಕಂಡುಬಂದಿದ್ದು 138 ಕ್ಕೆ ತಲುಪಿದೆ.
ಇನ್ನು ಇದುವರೆಗೆ ಠಾಣೆಯಲ್ಲಿ ಸೋಂಕಿನಿಂದ 19 ಜನರು ಸಾವನ್ನಪ್ಪಿದ್ದು, ಪಾಲ್ಘರ್ ಜಿಲ್ಲೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಠಾಣೆ ನಗರದಲ್ಲಿ 226, ಮೀರಾ ಭಾಯಂದರ್ನಲ್ಲಿ 146, ನವಿ ಮುಂಬಯಿನಲ್ಲಿ 132, ಕಲ್ಯಾಣ್ ಡೊಂಬಿವಾಲಿಯಲ್ಲಿ 129 ಪಾಸಿಟಿವ್ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.