ಕೋಲ್ಕತಾ(ಪಶ್ಚಿಮಬಂಗಾಳ) : ಇಲ್ಲಿನ ಸಂಶೋಧಕರ ಗುಂಪೊಂದು ಕಂಡುಹಿಡಿದ ಅತ್ಯಂತ ಕಡಿಮೆ ಬೆಲೆಯ ಕೋವಿಡ್-19 ಪರೀಕ್ಷಾ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಈ ಕಿಟ್ಗಳನ್ನು ಕೊರೊನಾ ಪರೀಕ್ಷೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.
DiAGSure nCOV-19 Detection Assay ಎಂಬ ಕಿಟ್‌ನ ಕೋಲ್ಕತ್ತಾದ ಸಂಶೊಧಕರು ಕಂಡುಹಿಡಿದಿದ್ದಾರೆ. ದೇಶಾದ್ಯಂತ ಪರೀಕ್ಷಾ ಸಾಧನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನಿರ್ದಿಷ್ಟ ಮಟ್ಟಿಗೆ ಪೂರೈಸಬಲ್ಲದು ಎಂದು ಹೇಳಲಾಗಿದೆ. ಸುಮಾರು 500 ರೂ.ಗಳ ಬೆಲೆಯುಳ್ಳ ಈ ಕಿಟ್ 90 ನಿಮಿಷಗಳ ಅಲ್ಪಾವಧಿಯಲ್ಲಿ ವೈರಸ್‌ನ ಪತ್ತೆಹಚ್ಚುವಲ್ಲಿ ಶೇ.100ರಷ್ಟು ನಿಖರತೆ ಪ್ರದರ್ಶಿಸಿದೆ ಎಂದು ಐಸಿಎಂಆರ್ ವರದಿ ಉಲ್ಲೇಖಿಸಿದೆ.
ಈ ಒಂದು ಕಿಟ್ 160 ರೋಗಿಗಳನ್ನು ಪರೀಕ್ಷಿಸಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ. ಮಾಜಿ ಸಿಎಸ್‌ಐಆರ್ ವಿಜ್ಞಾನಿ ಸಮಿತ್ ಅಧ್ಯಾ ಅವರ ಮಾರ್ಗದರ್ಶನದಲ್ಲಿ, ಒಂದೂವರೆ ತಿಂಗಳ ಅವಧಿಯಲ್ಲಿ ಕಿಟ್‌ನ ಕೋಲ್ಕತಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಕೌಸ್ತುಬ್ ಪಾಂಡ ಅವರ ಲಾಜಿಸ್ಟಿಕ್ ಬೆಂಬಲದೊಂದಿಗೆ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ಲಿಷ್ಟಕರವಾದ ಕ್ಲಿನಿಕಲ್ ಪ್ರಯೋಗಗಳ ನಂತರ ಜಿಸಿಸಿ ಬಯೋಟೆಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಈ ಉಪಕರಣವನ್ನು ಅಭಿವೃದ್ಧಿಪಡಿಸಿತು ಎಂದು ಸಂಶೋಧಕರು ಇದೇ ವೇಳೆ ಹೇಳಿದ್ದಾರೆ.